ಜಿಲ್ಲಾ ಸುದ್ದಿತಾಜಾ ಸುದ್ದಿ

ದಸರಾ ಅಂಬಾರಿ ಮೆರವಣಿಗೆಗೆ ಆನೆಗಳ ತಾಲೀಮು

Share Below Link

ಶಿವಮೊಗ್ಗ : ನಾಡಹಬ್ಬ ಶಿವಮೊಗ್ಗ ದಸರಾ ಅಂಗವಾಗಿ ಅ.೨೧ರಂದು ನಡೆಯಲಿರುವ ಬನ್ನಿ ಮುಡಿಯುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಅಂಬಾರಿ ಹೊರುವ ಸಾಗರ್ ಸೇರಿದಂತೆ ಬಹದ್ದೂರ್ ಮತ್ತು ಸೋಮಣ್ಣ ಆನೆಗಳು ಗುರುವಾರ ನಗರದಲ್ಲಿ ತಾಲೀಮು ನಡೆಸಿದವು.
ಅಂದು ಮಧ್ಯಾಹ್ನ ೨.೩೦ಕ್ಕೆ ಶಿವಪ್ಪ ನಾಯಕ ಅರಮನೆಯ ಆವರಣದಿಂದ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ವೈಭವದ ಅಂಬಾರಿ ಮೆರವಣಿಗೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಾಸವಿ ಶಾಲೆಯ ಆವರಣದಿಂದ ಅಲ್ಲಮಪ್ರಭು ಮೈದಾನದವರೆಗೆ ಮೆರವಣಿಗೆಯ ಮಾರ್ಗದಲ್ಲಿ ಆನೆಗಳು ತಾಲೀಮು ನಡೆಸಿದವು.
ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ವೈದ್ಯ ಡಾ. ಮುರಳಿ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *