ಜಿಲ್ಲಾ ಸುದ್ದಿತಾಜಾ ಸುದ್ದಿ

ನಗರದ ಇತಿಹಾಸ ಸಾರುವ ಲೇಸರ್ ಶೋಗೆ ಚನ್ನಿ ಚಾಲನೆ

Share Below Link

ಶಿವಮೊಗ್ಗ: ಮಲೆನಾ ಡಿನ ಸಾಂಸ್ಕೃತಿಕ ಹೆಗ್ಗುರುತಾದ ಶಿವಮೊಗ್ಗ ನಾಡ ಹಬ್ಬ ದಸರಾ-೨೦೨೬ ಮಹೋತ್ಸವದ ಅಂಗವಾಗಿ, ಶಿವಮೊಗ್ಗ ನಗರದ ಇತಿಹಾಸದ ಇದೇ ಮೊದಲ ಬಾರಿಗೆ ನಗರz ಇತಿಹಾಸವನ್ನು ಸಾರುವ ವಿಶೇಷ ಲೇಸರ್ ಶೋ ಪ್ರದರ್ಶನಕ್ಕೆ ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಮಹಾನಗರ ಪಾಲಿಕೆ ಆವರಣದಲ್ಲಿ ನಿನ್ನೆ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.


ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕರು, ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಧುನಿಕ ತಂತ್ರeನದ ಮೆರುಗು ನೀಡುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಈ ವಿಶೇಷ ಲೇಸರ್ ಶೋ ಆಯೋಜಿಸಲಾಗಿದೆ. ನಮ್ಮ ಶಿವಮೊಗ್ಗದ ಐತಿಹಾಸಿಕ ಹಿನ್ನೆಲೆ, ಕೆಳದಿ ಸಂಸ್ಥಾನದ ಗತವೈಭವ ಹಾಗೂ ಮಲೆನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ಆಕರ್ಷಕವಾಗಿ ಪರಿಚಯಿಸಲು ಇಂತಹ ಬೆಳಕು ಮತ್ತು ಧ್ವನಿಯ ಪ್ರದರ್ಶನಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಪ್ರಯೋಜನ ಪಡೆಯ ಬೇಕು, ಎಂದು ತಿಳಿಸಿದರು.

Leave a Reply

Your email address will not be published. Required fields are marked *