ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅ.೨೭: ರಾಷ್ಟ್ರಭಕ್ತ ಬಳಗದಿಂದ ಪಾಲಿಕೆಗೆ ಮುತ್ತಿಗೆ

Share Below Link

ಶಿವಮೊಗ್ಗ: ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸುತ್ತಿ ರುವ ಮನೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸುವಂತೆ ಆಗ್ರಹಿಸಿ ಅ.೨೭ರಂದು ಮಹಾ ನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಭಕ್ತರ ಬಳಗದ ನೇತೃತ್ವದಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಗಾಂಧಿ ಬಜರ್, ಶಿವಪ್ಪ ನಾಯಕ ವೃತ್ತ ಹಾಗೂ ಎನ್.ಡಿ.ವಿ. ಹಾಸ್ಟೆಲ್ ರಸ್ತೆ ಮೂಲಕ ಪಾಲಿಕೆ ಕಚೇರಿ ತಲುಪಲಿದೆ ಎಂದರು.
೨೦೧೭ರಲ್ಲಿ ಆರಂಭವಾದ ಯೋಜನೆಯಡಿ ಗೋವಿಂದಾಪುರ ದಲ್ಲಿ ೩,೦೦೦ ಹಾಗೂ ಗೋಪಿಶೆಟ್ಟಿ ಕೊಪ್ಪದಲ್ಲಿ ೧,೩೦೦ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ೯ ವರ್ಷ ಕಳೆದರೂ ಕೇವಲ ೪೬೩ ಮನೆಗಳನ್ನು ಮಾತ್ರ ವಿತರಿಸಲಾಗಿದೆ. ಬಡ ಕೂಲಿ ಕಾರ್ಮಿಕರು ಸಾಲ ಮಾಡಿ, ಚಿನ್ನಾಭರಣ ಹಾಗೂ ಮಂಗಳಸೂತ್ರ ಅಡಮಾನವಿಟ್ಟು ತಲಾ ೮೦ ಸಾವಿರ ರೂ. ಪಾವತಿಸಿದ್ದರೂ ಮನೆ ದೊರೆತಿಲ್ಲ ಎಂದು ಆರೋಪಿಸಿದರು.
ಗೋವಿಂದಾಪುರದಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ನಾಗಾರ್ಜುನ ಕನ್‌ಸ್ಟ್ರಕ್ಷನ್‌ಗೆ ಸರ್ಕಾರದಿಂದ ೧೫ ಕೋಟಿ ರೂ. ಬಾಕಿ ಇರುವುದರಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಗೋಪಿಶೆಟ್ಟಿಕೊಪ್ಪದ ಕಾಮಗಾರಿಯ ಪ್ರಗತಿಯ ಬಗ್ಗೆಯೂ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದರು.
೨೦೨೪ರ ಜುಲೈನಲ್ಲಿ ಪ್ರತಿಭಟನೆ ನಡೆಸಿದಾಗ ಎರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು. ವಸತಿ ಸಚಿವ ಜಮೀರ್ ಅಹಮದ್ ಖಾನ್ ಕೂಡ ಹಣ ಬಿಡುಗಡೆಗೆ ಭರವಸೆ ನೀಡಿದ್ದರು. ಆದರೆ, ಕಾಮಗಾರಿ ಪುನರಾರಂಭವಾಗಿಲ್ಲ. ಮನೆಗಾಗಿ ಹಣ ಪಾವತಿಸಿದ ಬಡವರು ಸಾಲದ ಬಡ್ಡಿ ಕಟ್ಟುವಂತಾಗಿದೆ. ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಿ ಕಾಮ ಗಾರಿ ಪೂರ್ಣಗೊಳಿಸಿ ಮನೆಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರಭಕ್ತರ ಬಳಗದ ಈ. ವಿಶ್ವಾಸ, ಮೋಹನ್ ಜಧವ್, ಶಂಕರ್ ನಾಯ್ಕ್, ಶಿವಾಜಿ ಹಾಗೂ ಬಾಲು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *