ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾವತಿಯಲ್ಲಿ ಮಹಿಳಾ ದಸರಾ ಸಂಭ್ರಮ: ಇಂಧನ ರಹಿತ ಅಡುಗೆ ಸ್ಪರ್ಧೆ

Share Below Link

ಭದ್ರಾವತಿ : ಭಾರತೀಯ ಸಂಸ್ಕೃತಿಯಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವ ವಿದ್ದು, ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ಸಂಪ್ರದಾಯ ಮತ್ತು ಆಚರಣೆಗಳೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕ ದಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಆರಾಽಸಿದರೆ, ಅಸ್ಸಾಂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ ಎಂದು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಽಕಾರಿ ಆಶಾಲತಾ ಹೇಳಿದರು.
ನಗರಸಭೆಯ ದಸರಾ ಆಚರಣೆಯ ಅಂಗವಾಗಿ ಜನ್ನಾಪುರದ ಬಂಟರ ಭವನದಲ್ಲಿ ಆಯೋಜಿಸಿದ್ದ ವಿವಿಧ ಸಂಘ- ಸಂಸ್ಥೆಗಳ ಮಹಿಳೆಯರ ಇಂಧನ ರಹಿತ ಅಡುಗೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಾದ್ಯಂತ ಆಚರಿಸುವ ನವರಾತ್ರಿ ಹಬ್ಬವು ದುಷ್ಟಶಕ್ತಿಯ ಸಂಹಾರ ಮತ್ತು ಧರ್ಮದ ವಿಜಯದ ಸಂಕೇತವಾಗಿದೆ. ಇತರ ರಾಜ್ಯಗಳಲ್ಲಿ ದಸರಾವನ್ನು ಹಬ್ಬವಾಗಿ ಆಚರಿಸಿದರೆ, ಕರ್ನಾಟಕದಲ್ಲಿ ನಾಡಹಬ್ಬವಾಗಿ ಸಂಭ್ರಮಿಸಲಾಗುತ್ತದೆ. ವಿಜಯ ನಗರ ಸಾಮ್ರಾಜ್ಯದ ಕಾಲದಿಂದಲೂ ದಸರಾ ಆಚರಣೆಗೆ ವಿಶೇಷ ಪರಂಪರೆಯಿದ್ದು, ಮೈಸೂರು ಮಹಾರಾಜರು ಅದನ್ನು ಮುಂದುವರಿಸಿ ವೈಭವದ ಆಚರಣೆಗೆ ಮಹತ್ವದ ಕೊಡುಗೆ ನೀಡಿzರೆ ಎಂದು ತಿಳಿಸಿದರು.


ಪೌರಾಯುಕ್ತ ಕೆ.ಎನ್. ಹೇಮಂತ್ ಮಾತನಾಡಿ, ಮಹಿಳೆಯರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಹಿಳಾ ದಸರಾ ಆಯೋಜಿಸಲಾಗಿದೆ. ತಾಲೂಕಿನ ಮಹಿಳೆಯರು ವಿವಿಧ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಉತ್ಸಾಹದಿಂದ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜ್‌ಕುಮಾರ್, ನಗರಸಭೆ ಸದಸ್ಯರಾದ ಕೋಟೇಶ್ವರ ರಾವ್, ಬಸವರಾಜ್ ಆನೆಕೊಪ್ಪ, ನಾಗರತ್ನ, ಅನುಸೂಧಾ ಮೋಹನ್ ಪಳನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಂಧನ ರಹಿತ ಅಡುಗೆ ಸ್ಪರ್ಧೆಯಲ್ಲಿ ಒಟ್ಟು ೧೮ ತಂಡಗಳು ಭಾಗವಹಿಸಿದ್ದವು. ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಮಹಿಳಾ ಘಟಕ ಪ್ರಥಮ ಸ್ಥಾನ, ಜಟಪಟ್‌ನಗರದ ಶ್ರೀ ಮೇಧ ಸ್ವಸಹಾಯ ಸಂಘ ದ್ವಿತೀಯ ಸ್ಥಾನ ಹಾಗೂ ಕೆಎಸ್‌ಪಿಎಸ್‌ಟಿಎ ಮಹಿಳಾ ವೇದಿಕೆ ತೃತೀಯ ಸ್ಥಾನ ಗಳಿಸಿದವು.

Leave a Reply

Your email address will not be published. Required fields are marked *