ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನ. 4: ಶ್ರೀ ರಾಮಕೃಷ್ಣ ಪಿಯು ಕಾಲೇಜು ಲೋಕಾರ್ಪಣೆ

Share Below Link

ಶಿವಮೊಗ್ಗ,ಅ‌.30: ಸಿಹಿಮೊಗ್ಗೆಯಲ್ಲಿ ಆದ್ಯಾತ್ಮದ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುವ ಆಶಯದೊಂದಿಗೆ ಶಿವಮೊಗ್ಗ ಜಿಲ್ಲೆ  ಹಾಗೂ ಶೃಂಗೇರಿಯಲ್ಲಿ ಎಸ್ ಎಸ್ ಎಲ್ ಸಿ ವರೆಗೆ ಎಂಟಕ್ಕೂ ಹೆಚ್ಚು ಶಾಲೆಗಳಲ್ಲಿ ಸಾವಿರಾರು ಮಕ್ಕಳಿಗೆ ನಿರಂತರ ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿರುವ,  ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಇದರ ಸಂಸ್ಥಾಪಕರಾದ ಡಿ. ಎಂ. ವೆಂಕಟರಮಣ ಅವರ ಕನಸಿನಂತೆ ಈ ವರ್ಷ ಪಿಯು ವಿಭಾಗಕ್ಕೆ ಹೊಸತನದಲ್ಲಿ  ಕಾಲಿಟ್ಟಿದೆ ಎಂದು  ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್  ನ ಮ್ಯಾನೇಜಿಂಗ್ ಟ್ರಸ್ಟಿಯವರಾದ  ಶೋಭ ಆರ್. ವೆಂಕಟರಮಣ ಹಾಗೂ ಅಧ್ಯಕ್ಷರಾದ ಡಾ. ಡಿ.ಆರ್. ನಾಗೇಶ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಇಡೀ ರಾಜ್ಯದಲ್ಲಿ ಮಾದರಿ ಎನ್ನುವಂತಹ ಸುಸಜ್ಜಿತವಾದ ಕಾಲೇಜು ಕಟ್ಟಡ ನಿರ್ಮಾಣವಾಗಿದ್ದು, ಪಿಯುಸಿ ಕಲಿಕೆ ಜೊತೆ ಮಕ್ಕಳ ಮುಂದಿನ ಭವಿಷ್ಯ ರೂಪಿಸಿಕೊಡುವ ನಿಟ್ಟಿನಲ್ಲಿ ತರಬೇತಿಯು ಆರಂಭವಾಗಲಿದ್ದು, ಕಾಲೇಜು ನ.4 ರ ಬುಧವಾರ ಬೆಳಗ್ಗೆ 10 ಗಂಟೆಗೆ ಅನುಪಿನಕಟ್ಟೆ ಹಳೇ ಊರಿನಲ್ಲಿರುವ ಕಾಲೇಜು ಅವರಣದಲ್ಲಿ ಉದ್ಘಾಟನೆಗೊಳ್ಳಲಿದೆ. ಈ ರಾಮಕೃಷ್ಣ ಪಿ.ಯು. ಕಾಲೇಜು, ಸಂಸ್ಥಾಪಕರಾದ ಡಿ ಎಂ ವೆಂಕಟರಮಣರವರ ಕನಸಿನ ಕೂಸು. ರಾಮಕೃಷ್ಣ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗಗಳು ನಡೆಯಲಿದ್ದು, ಪಿ ಸಿ ಎಂ ಬಿ ಮತ್ತು ಪಿ ಸಿ ಎಂ ಸಿ ಎಸ್ ನ ಎರಡು ವಿಭಾಗಗಳು ಆರಂಭವಾಗಲಿವೆ ಎಂದರು.

ಇಲ್ಲಿ ಮುಖ್ಯವಾಗಿ ನೀಟ್, ಜೆಇಇ , ಇಂಟಿಗ್ರೇಟೆಡ್ ತರಗತಿಗಳು ನಡೆಯಲಿದ್ದು, ಈ ಮೂಲಕ ಕಾಲೇಜಿನ ಎಲ್ಲಾ ಮಕ್ಕಳ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡಲಾಗುತ್ತದೆ. ಶಿವಮೊಗ್ಗ ನಗರದ ಹಾಗೂ ಸುತ್ತಮುತ್ತಲಿನ ಮಕ್ಕಳು ನೀಟ್, ಜೆಇಇ ತರಬೇತಿಗಾಗಿ ಹೊರ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ.  ರಾಮಕೃಷ್ಣ ಪಿಯು ಕಾಲೇಜು ಈ ತರಬೇತಿಗಳನ್ನು ಅನುಪಿನಕಟ್ಟೆಯ ರಾಮಕೃಷ್ಣ ಪಿಯು ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ನೀಡಲು ಬಯಸುತ್ತಿದೆ. ಅದಕ್ಕೆ ತಕ್ಕಂತೆ ನೀಟ್, ಜೆಇಇ ತರಬೇತಿಯಲ್ಲಿ ಪರಿಣಿತ ಉಪನ್ಯಾಸಕ ವೃಂದವನ್ನು ನೇಮಿಸಲಾಗಿದೆ. ಇಲ್ಲಿ ಪಿಯು ಬೋರ್ಡ್ ಪಠ್ಯ ಹಾಗೂ ನೀಟ್, ಜೆಇಇ ಸಿಲಬಸ್ ಅನ್ನು ಜೊತೆಗೆ ಕಲಿಸಲಾಗುತ್ತದೆ ಎಂದು ಶೋಭಾ ವೆಂಕಟರಮಣ ತಿಳಿಸಿದರು.

ವಿದ್ಯಾರ್ಥಿ – ವಿದಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತವಾದ  ವಸತಿ ಸೌಲಭ್ಯವಿದ್ದು, ಸಂಜೆ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಕಲಿಕಾ ಅವಧಿಯನ್ನು ಸಹ ಕಲ್ಪಿಸಲಾಗಿದೆ. ಈ ಸ್ಟಡಿ ಅವರ್ಸ್ ನಲ್ಲಿ ಕಡ್ಡಾಯವಾಗಿ ಹಿರಿಯ ಮಾರ್ಗದರ್ಶಿ ಉಪನ್ಯಾಸಕರು ಇರುತ್ತಾರೆ. ಮಕ್ಕಳು ಈ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಓದಲು ಅವಕಾಶ ಮಾಡಿಕೊಲಾಗಿದೆ. ನೂತನ ಶೈಲಿಯಲ್ಲಿ ವಿಶಾಲವಾಗಿ ನಿರ್ಮಾಣಗೊಂಡಿರುವ ಈ ಕಟ್ಟಡದಲ್ಲಿ ಸುಸಜ್ಜಿತವಾದ ಸಕಲ ವಿಜ್ಞಾನ ಸಂಶೋದನ ಪರಿಕರಗಳನ್ನೊಳಗೊಂಡ ಫಿಸಿಕ್ಸ್ ಲ್ಯಾಬ್, ಕೆಮಿಸ್ಟ್ರೀ ಲ್ಯಾಬ್, ಬಯೋ ಲ್ಯಾಬ್ ಹಾಗೂ ಕಂಪ್ಯೂಟರ್ ಲ್ಯಾಬ್‌ಗಳನ್ನು ನಿರ್ಮಿಸಲಾಗಿದೆ. ಹಾಗೂ ವಿಶಾಲವಾದ ತರಗತಿ ಕೊಠಡಿಗಳು ನೂತನ ವಿನ್ಯಾಸದಲ್ಲಿ ಸಿದ್ದವಾಗಿವೆ ಎಂದರು.

ಲೋಕಾರ್ಪಣೆ ;ನವೆಂಬರ್ 4ರ ಬುಧವಾರಬೆಳಗ್ಗೆ 10.30ಕ್ಕೆ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಾಲಾನಂದನಾಥ ಮಹಾಸ್ವಾಮೀಜಿರವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು, ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮಿಜೀ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಪೂಜ್ಯ ಶ್ರೀ ವಿನಯಾನಂದ ಸರಸ್ವತಿ ಮಹಾರಾಜ್, ಅಧ್ಯಕ್ಷರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ಕಲ್ಲುಗಂಗೂರು, ಶಿವಮೊಗ್ಗ ಇವರ ದಿವ್ಯಸಾನಿದ್ಯದಲ್ಲಿ ಉದ್ಘಾಟನೆಗೊಂಡು ಲೋಕಾರ್ಪಣೆಯಾಗಲಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಡಾ. ಡಿ ಆರ್ ನಾಗೇಶ್  ಅವರು ವಹಿಸಲಿದ್ದು, ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್  ನ ಮ್ಯಾನೇಜಿಂಗ್ ಟ್ರಸ್ಟಿಯವರಾದ  ಶೋಭ ಆರ್. ವೆಂಕಟರಮಣ ಹಾಗೂ ಸದಸ್ಯ ಡಿ ಎಂ ದೇವರಾಜ್, ಅರುಣ್ ಕೆ. ಹೆಚ್., ಶರತ್ ಕೆ. ಡಿ. ಹಾಗೂ ರಾಮಕೃಷ್ಣ ಸಮೂಹ ಶಾಲೆಗಳ ಮುಖ್ಯೋಪದ್ಯಾಯರು, ಶಿಕ್ಷಕ ವೃಂದ , ಮಕ್ಕಳು, ಸಿಬ್ಬಂದಿವರ್ಗದವರು, ಪೋಷಕವೃಂದದವರು ಉಪಸ್ಥಿತರಿರುತ್ತಾರೆ.  ಶೋಭ ವೆಂಕಟರಮಣರವರು ಎಲ್ಲಾ ವಿದ್ಯಾರ್ಥಿಗಳು, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಮಹಾಪೋಷಕರು, ಶಾಲೆಯ ಹಿತೈಷಿಗಳನ್ನು ಹಾಗೂ ಸರ್ವರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಅರುಣ್, ಶರತ್, ಸಮೃದ್ ಹಾಗೂ ಹಿರಿಯ ಶಿಕ್ಷಕ ರಮೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *