ಇಸ್ಪೀಟ್, ಮಟ್ಕಾ, ಗಾಂಜಾ ಹಾವಳಿಗೆ ಜನಪ್ರತಿನಿಽಗಳ ಕುಮ್ಮಕ್ಕು | ರಾಜಕೀಯ ಒತ್ತಡಕ್ಕೆ ಮಣಿದ ಅಽಕಾರಿಗಳು
ಭದ್ರಾವತಿ: ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳ ಪರಿಸ್ಥಿತಿಯೇ ಒಂದು ರೀತಿಯಲ್ಲಿ ದ್ದರೆ, ಭದ್ರಾವತಿ ಕ್ಷೇತ್ರದ ಪರಿಸ್ಥಿತಿ ಮಾತ್ರ ಹಿಂದಿನ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಮಾದರಿ ಯಲ್ಲಿದೆ. ಇಲ್ಲಿನ ಯುವಕರನ್ನು ದಾರಿತಪ್ಪಿಸುವ ಕೆಲಸ ನಿರಂತರ ವಾಗಿ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಶಾಸಕ ಬಿ.ಕೆ. ಸಂಗಮೇಶ್ವರ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಜೆಡಿಎಸ್ ವತಿಯಿಂದ ಹಮ್ಮಿ ಕೊಂಡಿರುವ ರೈತ ಸ್ವಾಭಿಮಾನಿ ಯಾತ್ರೆಯ ಅಂಗವಾಗಿ ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭದ್ರಾವತಿ ಕ್ಷೇತ್ರದಲ್ಲಿ ಇಸ್ಪೀಟ್, ಮಟ್ಕಾ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಚುನಾಯಿತ ಜನಪ್ರತಿನಿಽಗಳು ಕುಮ್ಮಕ್ಕು ನೀಡುತ್ತಿzರೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು, ಯುವಕರನ್ನು ಮಾದಕ ವ್ಯಸನದತ್ತ ತಳ್ಳುವ ಮೂಲಕ ಅವರನ್ನು ದುಶ್ಚಟಗಳಿಗೆ ಬಲಿಯಾಗುವಂತೆ ಮಾಡಲಾ ಗುತ್ತಿದೆ. ಯುವಕರನ್ನು ನಶೆಯ ಅಮಲಿನಲ್ಲಿ ಇರಿಸಿದರೆ ಚುನಾವಣೆ ಯಲ್ಲಿ ಗೆಲುವು ಸಾಽಸಬಹುದು ಎಂಬ ಭ್ರಮೆಯಲ್ಲಿ ಇಲ್ಲಿನ ಜನಪ್ರತಿನಿಽಗಳಿzರೆ ಎಂದು ಅವರು ದೂರಿದರು.
ಚುನಾವಣೆಯಲ್ಲಿ ಗೆಲುವು ಸಾಽಸಿದ ಬಳಿಕ ಜನಪ್ರತಿನಿಽಗಳು ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳ ಪರಿಹಾರ ಹಾಗೂ ಮೂಲಸೌಕರ್ಯಗಳ ಸುಧಾರಣೆಗೆ ಆದ್ಯತೆ ನೀಡಬೇಕು. ಆದರೆ, ಭದ್ರಾವತಿಯಲ್ಲಿ ರಾಜಕೀಯ ವಿರೋಽಗಳ ವಿರುದ್ಧ ಪೊಲೀಸರ ಮೇಲೆ ಒತ್ತಡ ಹೇರಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಇದಲ್ಲದೆ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಅಽಕಾರಿಗಳು ಹಾಗೂ ಸಿಬ್ಬಂದಿಯೂ ರಾಜಕೀಯ ಒತ್ತಡಕ್ಕೆ ಒಳಗಾಗಿ ಜನವಿರೋಽ ನಿಲುವುಗಳನ್ನು ತಳೆಯುತ್ತಿzರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ತಾಳ್ಮೆ ಕಳೆದುಕೊಳ್ಳದೆ ಶಾಂತಿಯುತವಾಗಿ ವರ್ತಿಸಬೇಕು ಎಂದು ಮನವಿ ಮಾಡಿದ ನಿಖಿಲ್ ಕುಮಾರಸ್ವಾಮಿ, ಮುಂಬರುವ ಚುನಾವಣೆಯಲ್ಲಿ ಹಾಲಿ ಜನಪ್ರತಿನಿಽಗಳ ವೈಫಲ್ಯಗಳನ್ನು ಜನರ ಮುಂದಿಡುವ ಮೂಲಕ ಪಕ್ಷದ ಗೆಲುವಿಗೆ ಸಂಘಟಿತವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಜಿ ಘಟಕದ ಅಧ್ಯಕ್ಷ ರಾಮಕೃಷ್ಣ, ಜಿ ಕಾರ್ಯಾಧ್ಯಕ್ಷ ದಾದಾಪೀರ್, ಭದ್ರಾವತಿ ತಾಲ್ಲೂಕು ಘಟಕದ ಅಧ್ಯಕ್ಷ ಕರುಣಾಮೂರ್ತಿ, ಯುವ ಘಟಕದ ಜಿಧ್ಯಕ್ಷ ಮಧುಕುಮಾರ್, ಕಾರ್ಯಾಧ್ಯಕ್ಷ ನಿಖಿಲ್, ಮುಖಂಡರಾದ ಅಜಿತ್ ಅಪ್ಪಾಜಿ, ಚಂದ್ರೇಗೌಡ, ರವಿಕುಮಾರ್, ಉಮೇಶ್, ಮಧುಸೂದನ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
