ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿಳೆಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ, ಜೀವ ಬೆದರಿಕೆ : 5 ಮಂದಿಗೆ 2 ಲಕ್ಷ, ಜೈಲು ಶಿಕ್ಷೆ…

Share Below Link

ಭದ್ರಾವತಿ : ಅಕ್ರಮ ವಾಗಿ ಮನೆಗೆ ಪ್ರವೇಶಿಸಿ ಮಹಿಳೆ ಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಅವಮಾನಿಸಿ ಕೊಲೆ ಬೆದರಿಕೆ ಹಾಕಿದ್ದ ೫ ಮಂದಿಗೆ ೨ ವರ್ಷ ಜೈಲು ಶಿಕ್ಷೆ ಹಾಗು ಒಟ್ಟು ೧ ಲಕ್ಷ ರು. ದಂಡ ವಿಽಸಿ ೪ನೇ ಹೆಚ್ಚುವರಿ ಜಿ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.


ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ೬ ಜೂನ್ ೨೦೨೩ ರಂದು ರಾತ್ರಿ ೧೧.೪೫ ಸಮಯ ದಲ್ಲಿ ನವೀನ(೨೫), ಮನು (೩೧), ಕೆ. ಸಂತೋಷ(೩೧), ವಿ. ಮಂಜುನಾಥ(೩೩) ಹಾಗೂ ಅಭಿಷೇಕ್(೨೪) ಎಂಬುವರು ಗ್ರಾಮದ ರಾಧಾ(೩೫)ರವರ ಮನೆಗೆ ಅವರ ಪತಿ ವೆಂಕಟೇಶ್‌ರನ್ನ ಹುಡುಕಿಕೊಂಡು ಬಂದಿದ್ದು, ಈ ಸಂದರ್ಭದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ರಾಧಾರಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಅವರ ಜಡೆ ಹಾಗು ಸೀರೆ ಎಳೆದು ಅವಮಾನಗೊಳಿ ಕೊಲೆ ಬೆದರಿಕೆ ಹಾಕಿದ್ದರು. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಅಂದಿನ ತನಿಖಾಽಕಾರಿಯಾಗಿದ್ದ ಐಪಿಎಸ್ ಅಽಕಾರಿ ಜಿತೇಂದ್ರ ಕುಮಾರ ದಯಾಮರವರು ಪ್ರಕರಣದ ದೋಷಾರೋಪಣಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಽಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಆರೋಪ ಸಾಬೀತಾದ ಹಿನ್ನಲೆ ಯಲ್ಲಿ ತಲಾ ೨ ವರ್ಷ ಜೈಲು ಶಿಕ್ಷೆ ಒಟ್ಟು ೧ ಲಕ್ಷ ರು. ದಂಡ ವಿಽಸಿ ತೀರ್ಪುನೀಡಿzರೆ. ಸರ್ಕಾರಿ ಅಭಿಯೋಜಕಿ ಪಿ ರತ್ನಮ್ಮ ವಾದ ಮಂಡಿಸಿದ್ದರು.