ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪೆಸಿಟ್ ಕಾಲೇಜ್‌ನಲ್ಲಿ ೨೪ ಗಂಟೆಗಳ ಬೃಹತ್ ಹ್ಯಾಕಥಾನ್…

Share Below Link

ಶಿವಮೊಗ್ಗ : ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ವತಿಯಿಂದ ಹ್ಯಾಕ್ ಮಲೆನಾಡು -೨೦೨೬' ಎಂಬ ೨೪ ಗಂಟೆಗಳ ಬೃಹತ್ಹ್ಯಾಕಥಾನ್’ ಅನ್ನು ಏ.೧೭ ಮತ್ತು ೧೮ ರಂದು ಕಾಲೇಜಿನ ಪ್ರೇರಣ ಸಭಾಂಗಣ ದಲ್ಲಿ ಆಯೋಜಿ ಸಲಾಗಿದೆ ಎಂದು ಪಿಇಎಸ್ ಟ್ರಸ್ಟ್‌ನ ಕುಲಸಚಿವ ಡಾ.ನಾಗರಾಜ್ ಆರ್. ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕಾಲೇಜಿನ ಎಐ ಟಾಸ್ಕ್ ಫೋರ್ಸ್ ಮಹಾತ್ವಕಾಂಕ್ಷೆಯ ಉಪಕ್ರಮದಡಿ ಈ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದ ಅವರು, ಇದರಲ್ಲಿ ಎರಡು ವಿಭಾಗ ಗಳಿದ್ದು, ಮೊದಲನೆಯದು ಐಟಿ ಸೇವೆಗಳಲ್ಲಿ ಗ್ರಾಹಕ ಸರಕುಗಳು ಮತ್ತು ವಿಮರ್ಶೆಯ ಸಾರಾಂಶ ಹಾಗೂ ಎರಡನೆಯದು ಆರ್ಟಿಫಿಷಿಯಲ್ ಇಂಟಲಿಜೆನ್ಸ್. ಇಂದಿನ ತಂತ್ರeನ ಯುಗದಲ್ಲಿ ಕೃತಕ ಬುದ್ದಿಮತ್ತೆ ಮಾನವ ಜೀವನದ ಅವಿಭಾಜ್ಯ ಅಂಗವಾಗುತ್ತಿದೆ. ಕೃತಕ ಬುದ್ದಿಮತ್ತೆ ಕೆಲಸಗಳನ್ನು ವೇಗವಾಗಿ ಮತ್ತು ನಿಖರವಾಗಿ ನೆರವೇರಿಸುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ರೋಗ ನಿರ್ಣಯ, ಶಿಕ್ಷಣ ಕ್ಷೇತ್ರದಲ್ಲಿ ವೈಯಕ್ತಿ ಕಲಿಕೆ, ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸುವುದು ಮತ್ತು ಕೈಗಾರಿಕೆಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆಗಳಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಹ್ಯಾಕಥಾನ್‌ನ ಪ್ರಮುಖ ಉದ್ದೇಶ ನೈಜ ಜಗತ್ತಿನ ಸವಾಲುಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವುದಾಗಿದೆ. ನವೀನ ಆಲೋಚನೆಗಳು ಮತ್ತು ತಂತ್ರeನ ಆಧಾರಿತ ಪರಿಹಾರ ಗಳನ್ನು ಉತ್ತೇಜಿಸುವ ಉದ್ದೇಶ ದಿಂದ ಹ್ಯಾಕಥಾನ್ ನಡೆಯು ತ್ತಿದ್ದು, ವಿದ್ಯಾರ್ಥಿಗಳು ಮತ್ತು ತಂತ್ರeನ ಆಸಕ್ತರು ತಮ್ಮ ಸೃಜನಾತ್ಮಕ ಯೋಜನೆ ಗಳನ್ನು ಪ್ರದರ್ಶಿಸಲು ವೇದಿಕೆಯಾಗಲಿದೆ ಎಂದರು.
ಪಿಇಎಸ್ ಐಟಿಎಂನ ಪ್ರಾಂಶುಪಾಲ ರಾದ ಡಾ. ಸ್ವಾಮಿ ಡಿ.ಆರ್. ಅವರು ಮಾತನಾಡಿ, ದೇಶದ ವಿವಿಧ ಕಡೆಗಳಿಂದ ಸುಮಾರು ೬೦ಕ್ಕೂ ಹೆಚ್ಚು ಇಂಜಿನಿಯ ರಿಂಗ್ ಕಾಲೇಜು ಗಳಿಂದ ಆಯ್ದ ೬೫೦ ವಿದ್ಯಾ ರ್ಥಿಗಳು ಭಾಗವಹಿಸು ತ್ತಿದ್ದು, ಇದರಲ್ಲಿ ತಮ್ಮ ಕಾಲೇಜಿನಿಂದ ೧೪ ವಿದ್ಯಾರ್ಥಿಗಳು ಭಾಗವಹಿಸುತ್ತಿzರೆ ಎಂದರು.
ಏ.೧೭ರ ಬೆಳಗ್ಗೆ ೧೦ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯ ಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಟಿಸಿಎಸ್ ಡೆಲವೆರಿ ಸೆಂಟರ್‌ನ ಮುಖ್ಯಸ್ಥ ಸುನೀಲ್ ದೇಶಪಾಂಡೆ, ಶೈಕ್ಷಣಿಕ ಮೈತ್ರಿಯ ಪ್ರಾದೇಶಿಕ ಮುಖ್ಯಸ್ಥ ಪ್ರವೀಣ್ ಚಂದ್ರನ್ ವಿ., ಗಣ್ಯರಾದ ಸುಧಾಂಶು ಶೇಖರ್, ಪ್ರಮೋದ್ ಕುಮಾರ್ ಪಿ., ವರುಣ್ ಯು. ಹಾಜರಾಗಲಿzರೆ.
ನಂತರ ೨೪ ಗಂಟೆಗಳ ತಾಂತ್ರಿಕ ಸ್ಪರ್ಧೆಗಳು ಆರಂಭವಾಗಲಿದ್ದು, ವಿಜೇತ ತಂಡಗಳಿಗೆ ಒಟ್ಟು ೧.೭೫ ಲಕ್ಷ ನಗದು ಬಹುಮಾನ ನೀಡಲಾಗು ವುದು ಎಂದರು.
ಏ.೧೮ ಬೆಳಿಗ್ಗೆ ೧೧ ಗಂಟೆಗೆ ಸ್ಪರ್ಧೆ ಮುಕ್ತಾಯವಾಗ ಲಿದ್ದು, ಮಧ್ಯಾಹ್ನ ೨.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಪ್ರಾಂಶುಪಾಲ ಡಾ.ಶೇಖರ್ .ಆರ್, ಡಾ.ಅರ್ಜುನ್ ಯು. ಇದ್ದರು.