ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗದಲ್ಲಿ ೨೦೦ಕ್ಕೂ ಹೆಚ್ಚು ಮಕ್ಕಳಿಂದ ರೋಡ್, ರಿಂಗ್ ರೇಸ್ ಸ್ಪರ್ಧೆ

Share Below Link

ಶಿವಮೊಗ್ಗ: ನಗರದ ಗೋಪಾಳ ಕ್ರೀಡಾ ಸಂಕೀರ್ಣ ಹಾಗೂ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ (ರಿ.) ವತಿಯಿಂದ ಆಯೋಜಿಸಿದ್ದ ಅಂತರ ಶಾಲಾ ಸ್ಕೇಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಸ್ಕೇಟರ್‌ಗಳ ಆಯ್ಕೆ ಪ್ರಕ್ರಿಯೆಗೆ ಶನಿವಾರ ಚಾಲನೆ ನೀಡಲಾಯಿತು.


ಪತ್ರಕರ್ತ ಚಂದ್ರಶೇಖರ್, ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್ ಹಾಗೂ ರಾಷ್ಟ್ರೀಯ ಕರಾಟೆ ಅಸೋಸಿಯೇಷನ್‌ನ ಪ್ರಮುಖ ವಿನೋದ್ ಅವರು ಸ್ಪರ್ಧೆ ಉದ್ಘಾಟಿಸಿದರು. ರೋಡ್ ರೇಸ್ ಮತ್ತು ರಿಂಗ್ ರೇಸ್ ವಿಭಾಗಗಳಲ್ಲಿ ೨೦೦ಕ್ಕೂ ಹೆಚ್ಚು ಮಕ್ಕಳು ಉತ್ಸಾಹ ದಿಂದ ಪಾಲ್ಗೊಂಡರು. ಪೋಷಕರ ಉಪಸ್ಥಿತಿಯಿಂದ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ನಿರ್ಮಾಣ ವಾಗಿತ್ತು.


ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸದಸ್ಯ ಇ. ವಿಶ್ವಾಸ್, ಶಿವಮೊಗ್ಗದಲ್ಲಿ ಸ್ಕೇಟಿಂಗ್ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಸಂಸ್ಥೆಯು ಮಹತ್ವದ ವೇದಿಕೆಯಾಗಿದೆ. ಮಕ್ಕಳ ಸಾಧನೆಯ ಹಿಂದೆ ಪೋಷಕರ ತಾಳ್ಮೆ, ಪ್ರೋತ್ಸಾಹ ಮತ್ತು ಸಹಕಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು.
ವಿನೋದ್ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಅಭ್ಯಾಸ ಆರಂಭಿಸಿರುವ ಮಕ್ಕಳು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಸಾಧನೆ ಮಾಡುವ ಗುರಿ ಹೊಂದಬೇಕು. ಗೆಲುವಿನಿಂದ ಹಿಗ್ಗದೆ, ಸೋಲಿನಿಂದ ಕುಗ್ಗದೆ ನಿರಂತರ ಪ್ರಯತ್ನದ ಮೂಲಕ ಯಶಸ್ಸು ಗಳಿಸಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಪತ್ರಕರ್ತ ಎಸ್.ಕೆ. ಗಜೇಂದ್ರಸ್ವಾಮಿ,೨೦೧೦ರಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಕ್ರೀಡಾ ಸಂಕೀರ್ಣ ಹಾಗೂ ಶಿವಮೊಗ್ಗ ಹೆಲಿಪ್ಯಾಡ್‌ನಲ್ಲಿ ಮಕ್ಕಳಿಗೆ ನಿಯಮಿತವಾಗಿ ತರಬೇತಿ ನೀಡುತ್ತಿದೆ. ನುರಿತ ತರಬೇತುದಾರರ ಮಾರ್ಗದರ್ಶನದಲ್ಲಿ ಅನೇಕ ಮಕ್ಕಳು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಱಱಸಂಸ್ಥೆಯ ಕಾರ್ಯದರ್ಶಿ ಹಾಗೂ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸಹ ಕಾರ್ಯದರ್ಶಿ ಎಂ. ರವಿ, ವಕೀಲ ಪ್ರವೀಣ್, ತರಬೇತುದಾರರಾದ ವಿಶ್ವಾಸ್ ಮತ್ತು ಅತೀಶ್, ವಿರೂಪಾಕ್ಷಪ್ಪ, ತಾರಾನಾಥ್, ಸುಧೀರ್, ಶ್ರೀನಾಥ್, ರಘು ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಱಱಸ್ಪರ್ಧೆಯಲ್ಲಿ ವಿಜೇತರಾದ ಸ್ಕೇಟರ್‌ಗಳನ್ನು ಮುಂದಿನ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಗುತ್ತದೆ. ವೇಗದ ರೋಲರ್ ಸ್ಕೇಟಿಂಗ್‌ಗೆ ಉತ್ತೇಜನ ನೀಡುವುದು ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ಅವಕಾಶ ಕಲ್ಪಿಸುವುದು ಆಯೋಜನೆಯ ಉದ್ದೇಶವಾಗಿದೆ.

Leave a Reply

Your email address will not be published. Required fields are marked *