ಯಶವಂತಪುರ-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು ತಾಳಗುಪ್ಪದವರೆಗೆ ವಿಸ್ತರಣೆ: ಸಂಸದ ಬಿವೈಆರ್
ಶಿವಮೊಗ್ಗ, ಅ. ೨೦: ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ- ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ತಾಳಗುಪ್ಪ ದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿzರೆ.

ರೈಲು ಸಂಖ್ಯೆ ೧೬೫೮೧ (ಯಶವಂತಪುರ-ಶಿವಮೊಗ್ಗ ಟೌನ್) ಹಾಗೂ ೧೬೫೮೨ (ಶಿವಮೊಗ್ಗ ಟೌನ್-ಯಶವಂತಪುರ) ರೈಲುಗಳ ಸೇವೆಯನ್ನು ಅ.೧೮, ೨೦, ೨೨, ೨೫, ೨೭ ಮತ್ತು ೨೯ ಹಾಗೂ ನ.೩, ೫, ೮, ೧೦ ಮತ್ತು ೧೨ರಂದು ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ. ಒಟ್ಟು ೧೧ ಟ್ರಿಪ್ ಗಳಿಗೆ ಈ ವ್ಯವಸ್ಥೆ ಅನ್ವಯಿಸಲಿದೆ.
ವಿಸ್ತರಣೆಯಂತೆ, ರೈಲು ಸಂಖ್ಯೆ ೧೬೫೮೧ ಬೆಳಿಗ್ಗೆ ೯ ಗಂಟೆಗೆ ತಾಳಗುಪ್ಪ ತಲುಪಲಿದ್ದು, ರೈಲು ಸಂಖ್ಯೆ ೧೬೫೮೨ ರಾತ್ರಿ ೧೦ ಗಂಟೆಗೆ ತಾಳಗುಪ್ಪದಿಂದ ಯಶವಂತಪುರದತ್ತ ಪ್ರಯಾಣ ಆರಂಭಿಸಲಿದೆ. ಶಿವಮೊಗ್ಗ-ಯಶವಂತಪುರ ನಡುವಿನ ಹಿಂದಿನ ವೇಳಾಪಟ್ಟಿ ಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಶಿವಮೊಗ್ಗ, ಕೊನಗವಳ್ಳಿ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಲ, ಆನಂದಪುರಂ, ಅಡ್ಡೇರಿ, ಸಾಗರ ಹಾಗೂ ತಾಳಗುಪ್ಪ ನಿಲ್ದಾಣಗಳ ಪ್ರಯಾಣಿಕರಿಗೆ ಈ ವಿಸ್ತರಣೆಯಿಂದ ಅನುಕೂಲವಾಗಲಿದೆ. ಹಬ್ಬದ ಸಂದರ್ಭದಲ್ಲಿ ಊರುಗಳಿಗೆ ತೆರಳುವವರು ಹಾಗೂ ಮರಳು ವವರಿಗೆ ಹೆಚ್ಚುವರಿ ರೈಲು ಸಂಪರ್ಕ ದೊರೆಯಲಿದೆ.
ಪ್ರಯಾಣಿಕರು ತಮ್ಮ ಪ್ರಯಾಣದ ದಿನಾಂಕಕ್ಕೆ ಅನ್ವಯಿಸುವ ವೇಳಾಪಟ್ಟಿ, ನಿಲುಗಡೆ ಮತ್ತು ಟಿಕೆಟ್ ಲಭ್ಯತೆಯ ವಿವರಗಳನ್ನು ರೈಲ್ವೆಯ ಅಧಿಕೃತ ಮೂಲಗಳಲ್ಲಿ ಪರಿಶೀಲಿಸಿಕೊಳ್ಳುವಂತೆ ಸಂಸದರು ಮನವಿ ಮಾಡಿzರೆ.
