ಜಿಲ್ಲಾ ಸುದ್ದಿತಾಜಾ ಸುದ್ದಿ

ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಜವಾಬ್ದಾರಿಯರಿತು ಕಾರ್‍ಯನಿರ್ವಹಿಸಿ

Share Below Link

ಶಿವಮೊಗ್ಗ : ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳನ್ನು ಖಚಿತಪಡಿಸಿ ಕೊಳ್ಳಲು ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಯನ್ನು ಕೈಗೆತ್ತಿಕೊಂಡಿದ್ದು, ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಹಕ್ಕುಗಳ ರಕ್ಷಣೆ, ಪಾರದರ್ಶಕತೆ, ನಿಯಮಾನುಸಾರ ಪರಿಶೀಲನೆ ಮಾಡುವಲ್ಲಿ ಅಧಿಕಾರಿಗಳು ತಮ್ಮ ಜವಾಭ್ದಾರಿಯರಿತು ಎಚ್ಚರಿಕೆ ಯಿಂದ ಕಾರ್ಯನಿರ್ವಹಿಸುವಂತೆ ಎಸ್‌ಐಆರ್ ಪ್ರಕ್ರಿಯೆಯ ಜಿ ವೀಕ್ಷಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ. ಶಿವಕುಮಾರ್‌ಅವರು ಹೇಳಿದರು.


ಅವರು ಶಿವಮೊಗ್ಗಕ್ಕೆ ಭೇಟಿ ನೀಡಿ ಜಿಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಕುರಿತು ಏರ್ಪಡಿಸ ಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ಮತದಾರರು ಮತ್ತು ವಿವಿಧ ಸಂಘಟನೆಗಳು ಸೂಚಿಸಿವ ವಿಷಯಗಳನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಗಳನ್ವಯ ನಿಯಮಾನುಸಾರ ಪರಿಶೀಲನೆಗೊಳಪಡಿಸುವಂತೆ ಸೂಚಿಸಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಕೈಬಿಡುವ ಪ್ರಕ್ರಿಯೆಯಲ್ಲಿ ದಾಖಲೆ ಗಳನ್ನು ಪರಿಶೀಲಿಸಿ, ಪಂಚರ ಹೇಳಿಕೆ ಪಡೆದುಕೊಳ್ಳಬೇಕು ಎಂದರು.
ಪ್ರಸ್ತುತ ಮತದಾರರ ಕರಡು ಪ್ರಕಟಿಸಲು ಇನ್ನೂ ಕೆಲವು ದಿನಗಳ ಬಾಕಿ ಇರುವ ಈ ಸಂದರ್ಭದಲ್ಲಿ ಅನುಮಾನಾಸ್ಪದ ಎನಿಸಿದ ಪ್ರಕ್ರಿಯೆಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಖಚಿತಪಡಿಸಿಕೊಳ್ಳು ವುದು ಸೂಕ್ತ ಎಂದ ಅವರು, ಮತದಾರರು ಸ್ಥಳಾಂತರ ಗೊಂಡಿದ್ದರೆ ಅಥವಾ ಪತ್ತೆಯಾಗಿಲ್ಲ ಎಂದು ಕಂಡುಬಂದಲ್ಲಿ ಹೆಸರು ಕೈಬಿಡುವ ಬಗ್ಗೆ ಸರಿಯಾದ ಹಾಗೂ ಒಪ್ಪಿತ ಕಾರಣಗಳನ್ನು ಗುರುತಿಸ ಬೇಕು ಎಂದವರು ನುಡಿದರು.
ನೋಟೀಸ್ ನೀಡಿದ ನಂತರ ಹೆಸರು ಕೈಬಿಡುವ ಪ್ರಕ್ರಿಯೆಯಲ್ಲಿ ಮನೆಮನೆಗೆ ಭೇಟಿ ನೀಡಿದ ಬಗ್ಗೆ ದಾಖಲೆ ನಿರ್ವಹಿಸಿ. ಗಣತಿ ಅರ್ಜಿ ಗಳ ಸ್ವೀಕೃತಿ ಅಥವಾ ವಿಲೇವಾರಿ ಕುರಿತು ಹಾಗೂ ಮತದಾರರಿಗೆ ತಮ್ಮ ಹೆಸರು ಕೈಬಿಟ್ಟಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಅಲ್ಲದೇ ಅಗತ್ಯವಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಸಮರ್ಪಕವಾಗಿ ಮಾಹಿತಿ ನೀಡುವಂತೆ ಅವರು ಸಲಹೆ ನೀಡಿದರು.


ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಪಕ್ಷಪಾತ ನಡೆಯ ದಂತೆ, ನಿರ್ದಿಷ್ಟ ಪ್ರದೇಶಗಳು ಅಥವಾ ಸಮುದಾಯಗಳ ಮತದಾರರ ಹೆಸರುಗಳು ಕೈಬಿಡ ದಂತೆ ಗಮನಹರಿಸಬೇಕು. ಮತಗಟ್ಟೆ ಮಟ್ಟದ ಪರಿಶೀಲನೆ ಮತ್ತು ಮೇಲ್ವಿಚಾರಣೆಯಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳಬೇಕು ಎಂದ ಅವರು, ಹೆಸರು ಕೈಬಿಟ್ಟಿರುವ ಕಾರಣಗಳು ಮತ್ತು ಸಂಬಂಧಿತ ಅಧಿಕಾರಿಗಳ ನಿರ್ಧಾರಗಳನ್ನು ಮೇಲಾಧಿಕಾರಿಗಳು ಪುನಃಪುನಃ ಪರಿಶೀಲಿಸ ಬೇಕು ಎಂದವರು ನುಡಿದರು.
ಈ ಹಿಂದಿನ ಮತದಾರರ ಪಟ್ಟಿಯಲ್ಲಿರುವ ಅನರ್ಹ ದಾಖಲೆಯ ಹೆಸರನ್ನು ಅಳಿಸಲು ಅಥವಾ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸಲು ನಮೂನೆ- ೭ರಲ್ಲಿ ಮಾಹಿತಿಯನ್ನು ಪಡೆದು ಕೊಳ್ಳಬೇಕು. ಅದರಂತೆ ಮತದಾರ ಮೃತಪಟ್ಟಿರುವುದು, ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ದಾಖಲಾಗಿರುವುದು ಮತ್ತಿತರ ಕಾರಣಗಳನ್ನು ನಮೂದಿಸಿರ ಬೇಕು. ಈ ಎ ಹೇಳಿಕೆಗಳು ಸತ್ಯವಾಗಿವೆಯೇ ಎಂದು ಪರಿಶೀಲಿಸಬೇಕೆಂದ ಅವರು, ಹೆಸರು ಅಳಿಸುವ ನಿರ್ಧಾರವನ್ನು ಕೇವಲ ಮಖಿಕ ಮಾಹಿತಿ ಅಥವಾ ದೃಢೀಕರಿಸದ ಆರೋಪದ ಆಧಾರದಲ್ಲಿ ಕೈಗೊಳ್ಳಬಾರದು ಎಂದವರು ಸೂಚಿಸಿದರು.


ಸಭೆಯಲ್ಲಿ ಜಿಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಧಿಕಾರಿ ಅಭಿಷೇಕ್ವಿ., ಉಪ ವಿಭಾಗಾಧಿಕಾರಿ ಡಾ| ಮೈತ್ರಿ, ವೀರೇಶ್ ಕುಮಾರ್, ಮಹಾ ನಗರಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಚುನಾವಣಾ ತಹಶೀಲ್ದಾರ್ ಶ್ರೀಮತಿ ಮಂಜುಳಾ ಹೆಗಡಾಳ ಸೇರಿದಂತೆ ವಿವಿಧ ತಾಲೂಕುಗಳ ಚುನಾವಣಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *