ಉದ್ಯೋಗಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಬೋರ್‌ವೆಲ್… ಡಿಸಿ ಕೊಟ್ಟ ವಾರ್ನಿನ್ ಏನು ಗೊತ್ತಾ…?

Share Below Link

ಶಿವಮೊಗ: ಬರಗಾಲದ ಹಿನ್ನೆಲೆ ಮಾನವೀಯತೆ ದೃಷಿಯಿಂದ ರೈತರಿಗೆ ಎಸ್‌ಆರ್ ದರದಂತೆ ಕೊಳವೆ ಬಾವಿಗಳನ್ನು ಕೊರೆದುಕೊಡಬೇಕು. ಹೆಚ್ಚಿನ ದರಗಳನ್ನು ವಿಧಿಸಿ ರೈತರಿಂದ ಹಣ ಪಡೆಯುವ ಕುರಿತು ದೂರುಗಳು ಬಂದಲ್ಲಿ, ಅಂತಹ ಕೊಳವೆಬಾವಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದರು.
ಸರ್ಕಾರದ ಇಲಾಖೆಗಳ ವಿವಿಧ ಯೋಜನೆಗಳಡಿ ಹಾಗೂ ಖಾಸಗಿ ರೈತರ ಜಮೀನುಗಳಲ್ಲಿ ಕೊಳವೆ ಬಾವಿಗಳ ಕೊರೆಯುವ ಕುರಿತು ಜಿಯ ರಿಗ್ ವಾಹನ ಮಾಲೀಕರು ಹಾಗೂ ಏಜೆನ್ಸಿಯವರೊಂದಿಗೆ ಜಿಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಇಲಾಖೆ ಗಳಡಿ ವಿಶೇಷವಾಗಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯಡಿ ವಿವಿಧ ಯೊಜನೆಗಳಡಿಯಲ್ಲಿ ಕೊರೆಯುವ ಕೊಳವೆ ಬಾವಿಗಳ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲು ರಿಗ್/ಕೊಳವೆಬಾವಿ ಮಾಲೀಕರು ಕರಾರು ಮಾಡಿಕೊಂ ಡಿದ್ದು, ಸೂಕ್ತ ಸಮಯ ದಲ್ಲಿ ಡ್ರಿಲ್ಲಿಂಗ್ ಗಳನ್ನು ಮಾಡದೇ ಇರುವುದು ಜಿಡಳಿತದ ಗಮನಕ್ಕೆ ಬಂದಿರುತ್ತದೆ.
ಪ್ರಸಕ್ತ ಸಾಲಿನಲ್ಲಿ ಬರ ಪರಿಸ್ಥಿತಿ ಇರುವುದರಿಂದ ಬೇಸಿಗೆ ಹಂಗಾಮಿ ನಲ್ಲಿ ಜಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವುದು ಅತ್ಯಂತ ಆದ್ಯತೆಯ ಹಾಗೂ ತುರ್ತು ಕೆಲಸವಾಗಿರುವ ಹಿನ್ನೆಲೆ ಯಲ್ಲಿ ಬಾಕಿ ಇರುವ ಎ ಕೊಳವೆ ಬಾವಿಗಳನ್ನು ಇನ್ನೆರಡು ದಿನಗಳಲ್ಲಿ ಕೊರೆದು ಪೂರ್ಣಗೊಳಿಸಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯತನ ತೋರಿದಲ್ಲಿ ಜಿ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಹಾಗೂ ಸೂಕ್ತ ಕಾನೂನು ಗಳಡಿ ಕ್ರಮ ಕೈಗೊಳ್ಳಲಾಗುವು ದೆಂದು ಸೂಚಿಸಿದರು.
ಇದಲ್ಲದೇ, ಪ್ರಸಕ್ತ ಸಾಲಿನಲ್ಲಿ ಬರಗಾಲ ಇರುವುದರಿಂದ ರೈತರಿಗೆ ಮಾನವೀಯತೆ ದೃಷಿಯಿಂದ ಅನುಮೋದಿತ ದರ ಪಟ್ಟಿಗಳನ್ವಯ ಕೊಳವೆ ಬಾವಿಗಳನ್ನು ಕೊರೆಯ ಬೇಕು. ರೈತರಿಂದ ಹೆಚ್ಚಿನ ದರ ಪಡೆದಿರುವ ಕುರಿತು ಹಲವು ದೂರುಗಳು ಬಂದಿದ್ದು, ಪುನಃ ಹೆಚ್ಚಿನ ದರಗಳನ್ನು ರೈತರಿಂದ ಪಡೆಯುವ ಕುರಿತು ದೂರುಗಳು ಬಂದಲ್ಲಿ, ಅಂತಹ ರಿಗ್ ಮಾಲೀಕರು/ಏಜೆನ್ಸಿಗಳ ವಿರುದ್ಧ ನಿರ್ದಾಕ್ಷಣ್ಯ ಕ್ರಮ ವಹಿಸಲಾಗು ವುದು ಹಾಗೂ ಜಿ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನಿಯಮಾನುಸಾರ ರಿಗ್ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುದು ಎಂದರು.
ತಾಲ್ಲೂಕು ಮಟ್ಟದಲ್ಲಿ ಬರಪರಿಸ್ಥಿತಿ ನಿರ್ವಹಿಸಲು ತಹಶೀಲ್ದಾರ್, ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ರಿಗ್ ಮಾಲೀಕರು /ಏಜೆನ್ಸಿಗಳು ಕೊಳವೆ ಬಾವಿ ಕೊರೆಯಲು ಅಸಮಂಜಸ ದರಗಳನ್ನು ರೈತರಿಗೆ ಬೇಡಿಕೆ ಇಟ್ಟಲ್ಲಿ ಹಾಗೂ ರೈತರಿಗೆ ಕಿರುಕುಳ ನೀಡಿದಲ್ಲಿ, ಅಂಥಹ ರೈತರು/ಬಾಧಿತರು ದೂರುಗಳನ್ನು ಈ ಸಮಿತಿಗೆ ಸಲ್ಲಿಸಲು ಅವಕಾಶ ಇರುತ್ತದೆ. ಸಮಿತಿಯು ಇಂತಹ ದೂರುಗಳನ್ನು ಪರಿಶೀಲಿಸಿ ೩ ದಿನಗಳಲ್ಲಿ ಇತ್ಯರ್ಥಪಡಿಸುವಂತೆ ತಿಳಿಸಿದರು.
ಜಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎ ಖಾಸಗಿ ಕೊಳವೆಬಾವಿ ಮಾಲೀಕರು ಕರ್ನಾಟಕ ಅಂತರ್ಜಲ (ಅಭಿವದ್ಧಿ ಮತ್ತು ನಿರ್ವಹಣೆಯ ವಿನಿಯ ಮನ ಹಾಗೂ ನಿಯಂತ್ರಣ) ಅಧಿನಿಯಮ ೨೦೧೧ ಮತ್ತು ನಿಯಮಾವಳಿ ೨೦೧೨ ರನ್ವಯ ಫಾರ್ಮ್ -೬ ರಲ್ಲಿ ರಿಗ್ ಯಂತ್ರಗಳ/ಘಟಕಗಳ ನೋಂದಣಿ ಮಾಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಿ ಫಾರ್ಮ್ -೭ಎ ರಲ್ಲಿ ಏಜೆನ್ಸಿಯ ನೋಂದಣಿಯನ್ನು ಕಡ್ಡಾಯವಾಗಿ ಪಡೆದು ನಂತರ ಕಾರ್ಯ ನಿರ್ವಹಿ ಸುವಂತೆ ಸೂಚಿಸಿದ ಅವರು ಈ ಕುರಿತು ನಮೂನೆಗಳನ್ನು ಹಿರಿಯ ಭೂ ವಿeನಿಗಳು, ಜಿ ಅಂತರ್ಜಲ ಕಛೇರಿ, ಶಿವಮೊಗ್ಗರವರ ಕಚೇರಿಯನ್ನು ಸಂಪರ್ಕಿಸಬಹುದೆಂದರು.
ಸಭೆಯಲ್ಲಿ ಜಿಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಆರ್‍ಡಬ್ಲ್ಯುಎಸ್ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಪ್ರಸಾದ್, ಜಿ ಅಂತರ್ಜಲ ಕಚೇರಿಯ ಹಿರಿಯ ಭೂ ವಿeನಿ ನಿರ್ಮಲಾ ನಾದನ್ ಇತರೆ ಇಲಾಖೆ ಅಧಿಕಾರಿಗಳು, ಕೊಳವೆಬಾವಿ/ರಿಗ್ ಮಾಲೀಕರು ಹಾಜರಿದ್ದರು.