ಜಿಲ್ಲಾ ಸುದ್ದಿತಾಜಾ ಸುದ್ದಿ

ಕೋಟೆ ಆಂಜನೇಯ ದೇವಸ್ಥಾನಕ್ಕೆ ದ್ವಾರ ಬಾಗಿಲು ನಿರ್ಮಿಸಲು ಮನವಿ

Share Below Link

ಶಿವಮೊಗ್ಗ : ನಗರದ ಐತಿಹಾಸಿಕ ಕೋಟೆ ಶ್ರೀ ಸೀತಾ ರಾಮ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸುಸಜ್ಜಿತ ಹಾಗೂ ಆಕರ್ಷಕ ಹೆಬ್ಬಾಗಿಲು ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂದನ್ ಅವರಿಗೆ ಮನವಿ ಸಲ್ಲಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ದೇವೇಂದ್ರಪ್ಪ ಅವರು ಮನವಿ ಪತ್ರ ಸಲ್ಲಿಸಿ, ದೇವಸ್ಥಾನದ ಮಹತ್ವ ಹಾಗೂ ಹೆಬ್ಬಾಗಿಲಿನ ಅಗತ್ಯವನ್ನು ವಿವರಿಸಿದರು.
ನಗರದ ತುಂಗಾ ನದಿ ದಡದಲ್ಲಿರುವ ಕೋಟೆ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನವು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ರಾಜ್ಯದ ವಿವಿಧ ಭಾಗಗಳು ಸೇರಿದಂತೆ ಹೊರರಾಜ್ಯ ಹಾಗೂ ವಿದೇಶ ಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಭಕ್ತರ ಪಾಲಿಗೆ ಈ ದೇವಸ್ಥಾನವು ಶ್ರದ್ಧೆ, ಭಕ್ತಿ ಹಾಗೂ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ನಗರ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ದೇವಸ್ಥಾನದ ಧಾರ್ಮಿಕ ಮಹತ್ವಕ್ಕೆ ತಕ್ಕಂತೆ ಪ್ರವೇಶದ್ವಾರ ನಿರ್ಮಿಸು ವುದು ಅಗತ್ಯವಾಗಿದೆ. ನಗರದ ಹೊಳೆ ಸೇತುವೆ ಸಮೀಪದ ಚೆಕ್‌ನಾಕಾ ಕಲ್ಲಿನ ಎದುರಿನ ಭಾಗದಲ್ಲಿ ದೇವಸ್ಥಾನವನ್ನು ಸುಲಭವಾಗಿ ಗುರುತಿಸುವಂತಾ ಗಲು, ಭವ್ಯ ಹಾಗೂ ಸುಸಜ್ಜಿತ ಹೆಬ್ಬಾಗಿಲು ನಿರ್ಮಿಸಬೇಕು. ಇದರಿಂದ ಸ್ಥಳೀಯರು ಮಾತ್ರ ವಲ್ಲದೆ ಹೊರ ಊರುಗಳಿಂದ ಆಗಮಿಸುವ ಭಕ್ತರಿಗೂ ದೇವಸ್ಥಾನದ ಪ್ರವೇಶ ಮಾರ್ಗ ಸ್ಪಷ್ಟವಾಗಿ ಗೋಚರಿಸಲಿದೆ. ಆದ್ದರಿಂದ ಸೂಡಾ ಪ್ರಾಧಿಕಾರದ ವತಿಯಿಂದ ಹೆಬ್ಬಾಗಿಲು ನಿರ್ಮಿಸುವ ಕಾರ್ಯಕ್ಕೆ ಆದ್ಯತೆ ನೀಡಿ, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಮಿತಿ ಮನವಿ ಮಾಡಿದೆ.


ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಜವಳಿ ನಿಗಮದ ಅಧ್ಯಕ್ಷ ಕೆ. ಚೇತನ್, ಸಮಿತಿ ಸದಸ್ಯರಾದ ಆರ್. ರಾಜಶೇಖರ್, ರೇಖಾ ರಂಗನಾಥ್, ಎಚ್.ಎಸ್. ಬಾಲಾಜಿ ಶೆಟ್ಟಿ, ಎಸ್.ಟಿ. ಚಂದ್ರಶೇಖರ್, ರೂಪಾ ಚಿದಾನಂದ, ಕಾಂಗ್ರೆಸ್ ಮುಖಂಡ ರಂಗನಾಥ್ ಕೆ. ಹಾಗೂ ಕೋಟೆ ಗೆಳೆಯರ ಬಳಗದ ಮುಖಂಡರಾದ ಸತೀಶ್ ಶೆಟ್ಟಿ, ರಂಜಿತ್, ಪ್ರವೀಣ್, ಲೋಕೇಶ್, ದುರ್ಗಾಪ್ರಸಾದ್, ಮಂಜುನಾಥ್, ವೀಣಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *