ಗಾಯಕಿ ಸುರೇಖಾ ಹೆಗಡೆ ನೇತೃತ್ವದಲ್ಲಿ ಸಂಗೀತ ಸೀಮೋಲ್ಲಂಘನ
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿರುವ ಶಿವಮೊಗ್ಗ ದಸರಾ-೨೦೨೬ರ ಸಾಂಸ್ಕೃತಿಕ ದಸರಾ ಅಂಗವಾಗಿ ಖ್ಯಾತಗಾಯಕಿ ಸುರೇಖಾ ಹೆಗಡೆ ಅವರ ನೇತೃತ್ವ ದಲ್ಲಿ ಸಂಗೀತ ಸೀಮೋಲ್ಲಂಘನ ಕಾರ್ಯಕ್ರಮ ಅ.೨೧ರಂದು ಜರುಗಲಿದೆ.

ನಗರದ ಫ್ರೀಡಂ ಪಾರ್ಕ್ನ ಶ್ರೀ ಅಲ್ಲಮಪ್ರಭು ಬಯಲು ಮೈದಾನದಲ್ಲಿ ಸಂಜೆ ೩.೪೫ಕ್ಕೆ ಕಾರ್ಯಕ್ರಮ ಉದ್ಘಾಟನೆ ಗೊಳ್ಳಲಿದೆ. ಸಂಜೆ ೪ ಗಂಟೆಗೆ ಶಿವಮೊಗ್ಗದ ೫೫ ಗಾಯಕ- ಗಾಯಕಿಯರಿಂದ ಸಂಗೀತ ಸ್ವನಸಮೂಹ ಗಾಯನ, ೪.೨೦ಕ್ಕೆ ನೃತ್ಯ ನಮನ, ೪.೩೦ಕ್ಕೆ ಶಿವಮೊಗ್ಗದ ಖ್ಯಾತವಕೀಲರುಗಳಿಂದ ವಕೀಲ ಗಾನ ಲಹರಿ ವೃಂದಗಾಯನ, ೪.೫೦ಕ್ಕೆ ವಿಶೇಷ ವಕೀಲರ ಹಾಡಿನ ಬಿಡುಗಡೆ ಹಾಗೂ ೪.೫೫ಕ್ಕೆ ಶಿವಮೊಗ್ಗದ ೫೦ ಶಿಕ್ಷಕರಿಂದ ಶಿಕ್ಷಕ ಸ್ವರ ಮೇಳ ಸಮೂಹ ಗಾಯನ ನಡೆಯಲಿದೆ.

ಸಂಜೆ ೫.೩೦ಕ್ಕೆ ನಡೆಯಲಿರುವ ಮುಖ್ಯಆಕರ್ಷಣೆಯ ಸಂಗೀತ ಸೀಮೋಲ್ಲಂಘನ ಸಂಧ್ಯಾ ಕಾರ್ಯಕ್ರಮದಲ್ಲಿ ಗಾಯಕಿ ಸುರೇಖಾ ಹೆಗಡೆ ಅವರೊಂದಿಗೆ ಬೆಂಗಳೂರಿನ ಅಜಯ್ ವಾರಿಯರ್, ಉಡುಪಿಯ ಸಂಗೀತಾ ಬಾಲಚಂದ್ರ, ಕಿರಣ್ ಚೆನ್ನಗಿರಿ, ಕು.ಸ್ವರ ಹೆಗಡೆಅವರು ಹಾಡಲಿzರೆ. ವಿನೂತನ ಕಲ್ಪನೆಯಲ್ಲಿ ಯಕ್ಷ ಭಾವ ನೃತ್ಯ ಪ್ರದರ್ಶನ ನಡೆಯಲಿದ್ದು, ಕಾರ್ಯಕ್ರಮವನ್ನು ವಿನಯ್ ಶಿವಮೊಗ್ಗ ನಿರೂಪಿಸಲಿzರೆ.
