ಈಶ್ವರಪ್ಪನವರಿಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆ: ಎಸ್‌ಪಿಗೆ ದೂರು
ಶಿವಮೊಗ್ಗ : ತಮಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆ ಬಂದಿದ್ದು, ಸೂಕ್ತ ಕ್ರಮಕೈಗೊಂಡು ರಕ್ಷಣೆ ನೀಡಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಅವರು ಇಂದು ಜಿ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.

ತಮ್ಮ ಅಧಿಕೃತ ಮೊಬೈಲ್ ಸಂಖ್ಯೆ ೯೮೮೦೦೩೦೦೦೪ಗೆ ಅ.೧೭ ರಂದು ಇಬ್ಬರು ಮುಸಲ್ಮಾನ್ ವ್ಯಕ್ತಿಗಳಿಂದ ಕರೆ ಬಂದಿದ್ದು, ೭೦೧೯೯೯೪೯೮೧ ಸಂಖ್ಯೆಯಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗಿದೆ. ರಿಜ್ವಾನ್ ಬೇಗ್ ಎಂಬಾತ ೯೮೨೩೬೫೮೫೨೭ ಸಂಖ್ಯೆಯಿಂದ ರಾತ್ರಿ ೮:೪೯ ಮತ್ತು ೧೦:೪೯ಕ್ಕೆ ಕರೆ ಮಾಡಿzನೆ. ಟ್ರಾಯ್ ತಂತ್ರಾಂಶ ದಿಂದ ಈ ಮಾಹಿತಿ ತಿಳಿದು ಬಂದಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಂಡು ತಮಗೆ ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಮನವಿಯಲ್ಲಿ ಕೋರಿzರೆ.
ಮೊದಲ ಕರೆಯಲ್ಲಿ ರಿಜ್ವಾನ್ ಬೇಗ್ ಎಂಬಾತ ಕರೆ ಮಾಡಿದಾಗ ನಾನು ಕುಟುಂಬದ ಜೊತೆಗೆ ಚಿತ್ರಮಂದಿರದಲ್ಲಿz. ಆತ ನೀವು ಮಾಜಿಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಲ್ಲವೇ ಎಂದು ಪ್ರಶ್ನಿಸಿದ. ಆನಂತರ ಏನೇನೋ ಮಾತನಾಡಲು ಆರಂಭಿಸಿದ. ಆತನ ಮಾತು ಸ್ಪಷವಾಗಿ ಕೇಳಿಸಲಿಲ್ಲ. ಆಗ ನಾನು ಸರಿಯಾಗಿ ಮಾತನಾಡುವುದಿದ್ದರೆ ಮಾತನಾಡು, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡಬೇಕಾ ಗುತ್ತದೆ ಎಂದಾಗ, ದೂರು ಕೊಡಿ ಎಂದು ಹೇಳಿ ಕರೆಕಟ್ ಮಾಡಿದ ಎಂದು ಆರೋಪಿಸಿದರು.

ಗೃಹ ಮಂತ್ರಿ ವಿರುದ್ದ ಕೆಎಸ್‌ಈ ಆಕ್ರೋಶ:
ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಮನರಂಜನೆಯ ವ್ಯಕ್ತಿಯಾಗಿzರೆ ಹೊರತು ಗೃಹ ಖಾತೆಯನ್ನು ನಿಭಾಯಿಸುವ ಶಕ್ತಿ ಅವರಿಗಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿzರೆ.
ರಾಜ್ಯದಲ್ಲಿ ಭ್ರಷ್ಟಚಾರ, ಕೊಲೆ ಮುಂತಾದ ಹಲವು ವಿಕೃತಗಳು ನಡೆಯುತ್ತಿದ್ದರು ಕೂಡ ಅದನ್ನೆ ಬಿಟ್ಟು ಬೇರೆ ವಿಚಾರಗಳು ಮಾತ ನಾಡುತ್ತಿzರೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದು, ಕೇಂದ್ರ ಸಚಿವರು ಎಂಬ ಕನಿಷ್ಟ ಗೌರವವನ್ನು ತೋರಿಸದೆ ಕುಮಾರ ಸ್ವಾಮಿ ಅವರ ವಿರುದ್ದ ಮಾತ ನಾಡುವುದು ಮಾಡುತ್ತಿzರೆ. ಅವರು ನಡೆದು ಕೊಳ್ಳುವ ರೀತಿ ನೋಡಿದರೆ ಅವರಿಗೆ ಈ ಗೃಹಖಾತೆ ಸರಿ ಹೊಂದುವುದಿಲ್ಲ. ಯಾವುದಾರೂ ಮನರಂಜನೆಗೆ ಸಂಬಂಧಪಟ್ಟ ಇಲಾಖೆಯನ್ನು ತೆಗೆದುಕೊಳ್ಳಿ ಎಂದು ವಾಗ್ದಾಳಿ ನಡೆಸಿದ ಅವರು ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ಅವರು ಮೊ ದಲು ಅರಿತುಕೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್, ಮೋಹನ್ ಜಾಧವ್, ಲಕ್ಷ್ಮೀ ಶಂಕರ್ ನಾಯ್ಕ್, ಬಾಲು, ಶಂಕರ್‌ನಾಯ್ಕ, ಅನಿತಾ, ಶಿವಾಜಿ, ವಿಜಯ್ ಕುಮಾರ್ , ಸಂತೋಷ್ ಮತ್ತಿತರರು ಇದ್ದರು.

