ಜಿಲ್ಲಾ ಸುದ್ದಿತಾಜಾ ಸುದ್ದಿ

ಕಲಾವಿದರಿಗೆ ಆರ್ಥಿಕ ನೆರವು ದೊರೆತಾಗಲೇ ರಂಗಚಟುವಟಿಕೆಗಳ ನಿರಂತರತೆ ಸಾಧ್ಯ…

Share Below Link

ಶಿವಮೊಗ್ಗ: ಕಲಾವಿ ದರಿಗೆ ಆರ್ಥಿಕ ನೆರವು ಒದಗಿಸಿ, ಸಾರ್ವಜನಿಕರ ಸಹಭಾಗಿತ್ವ ಹೆಚ್ಚಿಸಿ ದಾಗ ಮಾತ್ರ ರಂಗಚಟುವಟಿಕೆ ಗಳನ್ನು ನಿರಂತರವಾಗಿ ಬೆಳೆಸಲು ಸಾಧ್ಯ ಎಂದು ರಂಗಕರ್ಮಿ ಲಕ್ಷ್ಮೀ ನಾರಾಯಣ ರಾವ್ ಅಭಿಪ್ರಾಯಪಟ್ಟರು.


ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ದಸರಾ ಅಂಗವಾಗಿ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ (ರಂಗಾಯಣ) ಸೋಮವಾರ ಆಯೋಜಿಸಿದ್ದ ರಂಗದಸರಾ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಣೇಶೋತ್ಸವದ ಮಾದರಿ ಯಲ್ಲಿ ಸಾರ್ವಜನಿಕರ ಸಹಭಾಗಿತ್ವ ದೊಂದಿಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಬೆಳೆಸಬೇಕು. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಜನರೇ ಯಕ್ಷಗಾನ ಸೇರಿದಂತೆ ವಿವಿಧ ಕಲಾಪ್ರಕಾರ ಗಳನ್ನು ಸಂಘಟಿಸುತ್ತಿದ್ದರು. ಈಗ ಕಾರ್ಯಕ್ರಮಗಳ ಆಯೋಜನಾ ವೆಚ್ಚ ಹೆಚ್ಚಾಗಿರುವುದರಿಂದ ಕಲಾವಿದರಿಗೆ ಸರ್ಕಾರದ ನೆರವು ಅಗತ್ಯವಾಗಿದೆ ಎಂದರು.


ಈ ಬಾರಿಯ ರಂಗದಸರಾ ದಲ್ಲಿ ಮಕ್ಕಳು, ಹಿರಿಯರು, ಕಾಲೇಜು ವಿದ್ಯಾರ್ಥಿಗಳು, ಗ್ರಾಮೀಣ ಕಲಾವಿದರು ಹಾಗೂ ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳವರು ನಾಟಕಗಳಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ. ಕಾಡು, ಪ್ರಕೃತಿ, ಜನಜೀವನದ ಸಮಸ್ಯೆಗಳು ಹಾಗೂ ನಕ್ಸಲ್ ಚಟುವಟಿಕೆ ಗಳಂತಹ ಸಾಮಾಜಿಕ ಸಂಘರ್ಷ ಗಳನ್ನು ರಂಗಭೂಮಿಯ ಮೂಲಕ ಜನರ ಮುಂದಿಡಬೇಕು ಎಂದು ಹೇಳಿದರು.
ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ ಮಾತನಾಡಿ, ೨೦೧೨ರಲ್ಲಿ ಆರು ನಾಟಕಗಳು ಹಾಗೂ ರೂ.೬೦ ಸಾವಿರ ಬಜೆಟ್ ನೊಂದಿಗೆ ಆರಂಭವಾದ ರಂಗ ದಸರಾ ಇಂದು ೨೪ ನಾಟಕಗಳು ಸೇರಿದಂತೆ ೩೯ ಕಾರ್ಯಕ್ರಮ ಗಳನ್ನು ಆಯೋಜಿಸುವ ಮಟ್ಟಕ್ಕೆ ಬೆಳೆದಿದೆ. ಈ ಬಾರಿ ೫೦೦ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದು, ೧೫ರಿಂದ ೨೦ ಸಾವಿರ ಜನರನ್ನು ತಲುಪುವ ನಿರೀಕ್ಷೆ ಇದೆ ಎಂದರು.
ಶಿವಮೊಗ್ಗ ದಸರೆಗೆ ಸಾಂಸ್ಕೃತಿಕ ಮೆರುಗು ನೀಡುವಲ್ಲಿ ರಂಗದಸರಾ ಪ್ರಮುಖ ಪಾತ್ರ ವಹಿಸಿದೆ. ನಗರದಲ್ಲಿರುವ ೩೦ಕ್ಕೂ ಹೆಚ್ಚು ರಂಗತಂಡಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತಿವರ್ಷ ಹೊಸ ಕಾರ್ಯಕ್ರಮ ಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.


ರಂಗಾಯಣ ಆಡಳಿತಾಧಿಕಾರಿ ಡಾ. ಎ.ಸಿ. ಶೈಲಜಾ ಮಾತನಾಡಿ, ಈ ಬಾರಿ ರಂಗಾಯಣದಲ್ಲಿ ೧೪ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಯುವಪೀಳಿಗೆ ಯನ್ನು ರಂಗಭೂಮಿಯತ್ತ ಸೆಳೆಯುವುದು, ಹೊಸ ಕಲಾ ವಿದರಿಗೆ ವೇದಿಕೆ ಒದಗಿಸುವುದು ಹಾಗೂ ಹೊಸ ನಾಟಕಗಳ ಸೃಷ್ಟಿಗೆ ಅವಕಾಶ ನೀಡುವುದು ಇದರ ಉದ್ದೇಶವಾಗಿತ್ತು ಎಂದರು.
ಕುಟುಂಬ ರಂಗದಡಿ ನಾಟಕ ಪ್ರದರ್ಶನ:
ಕುಟುಂಬ ರಂಗ ಕಾರ್ಯಕ್ರಮದಡಿ ಶರಾವತಿ ನಗರದ ಯೋಗ ಕುಟುಂಬ ತಂಡದಿಂದ ಶ್ರೀಧರ್ ಆಚಾರ್ಯ ನಿರ್ದೇಶನದ ನೈಜ ಘಟನೆ ಆಧಾರಿತ ಅನ್ನದಾನ ನಾಟಕ ಪ್ರದರ್ಶನಗೊಂಡಿತು. ದೂರವಾಣಿ ಕಾಲೋನಿಯ ಸ್ನೇಹಕೂಟ ಬಳಗದಿಂದ ಖುಷಿ ಜೋಡಿ ನಾಟಕ ಪ್ರದರ್ಶಿಸಲಾ ಯಿತು. ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಕಲಾವಿದರು ಕಾರ್ಯಕ್ರಮ ನಿರ್ವಹಿಸಿದರು.
ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ, ರಂಗದಸರಾ ಸದಸ್ಯ ಕಾರ್ಯದರ್ಶಿ ಮಧು ನಾಯ್ಕ್, ರಂಗಭೂಮಿ ಕಲಾವಿದರಾದ ಹರಿಗೆ ಗೋಪಾಲ ಸ್ವಾಮಿ, ಜಿ.ಆರ್. ಲವ, ರಂಗನಾಥ ನೀನಾಸಂ, ಸಾಸ್ವೆಹಳ್ಳಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *