ಜಿಲ್ಲಾ ಸುದ್ದಿತಾಜಾ ಸುದ್ದಿ

ಆಗುಂಬೆಯಲ್ಲಿ ಧಾರಾಕಾರ ಮಳೆ; ಜೋಗ ಜಲಪಾತಕ್ಕೆ ಜೀವಕಳೆ…

Share Below Link

ಶಿವಮೊಗ್ಗ: ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಇನ್ನೂ ಮುಂದುವರಿದಿದ್ದರೂ, ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಮಳೆಗಾಲದ ವೈಭವ ನಿಧಾನವಾಗಿ ಅನಾವರಣಗೊಳ್ಳತೊಡಗಿದೆ. ಲಿಂಗನಮಕ್ಕಿ ಜಲಾಶಯ ಇನ್ನೂ ಸಂಪೂರ್ಣ ಭರ್ತಿಯಾಗದಿದ್ದರೂ ಶರಾವತಿ ನದಿಯಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜೋಗ ಜಲಪಾತ ತನ್ನ ಸಹಜ ಸೌಂದರ್ಯವನ್ನು ಮರಳಿ ಪಡೆದುಕೊಳ್ಳು ತ್ತಿದೆ. ಇದರ ಪರಿಣಾಮ ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಜೋಗದತ್ತ ಮುಖ ಮಾಡಿzರೆ.
ಭಾನುವಾರ ಸರಿಸುಮಾರು ೬ ಸಾವಿರಕ್ಕೂ ಅಧಿಕ ಪ್ರವಾಸಿಗರು ಜೋಗ ಜಲಪಾತಕ್ಕೆ ಭೇಟಿ ನೀಡಿ ಪ್ರಕೃತಿಯ ಅದ್ಭುತ ಸೊಬಗನ್ನು ಕಣ್ತುಂಬಿಕೊಂಡರು. ರಾಜ, ರಾಣಿ, ರೋರರ್ ಹಾಗೂ ರಾಕೆಟ್ ಎಂಬ ನಾಲ್ಕು ಪ್ರಮುಖ ಜಲಧಾರೆಗಳಲ್ಲಿ ಹೆಚ್ಚುತ್ತಿರುವ ನೀರಿನ ಹರಿವು ಪ್ರವಾಸಿಗರನ್ನು ಮನಸೂರೆಗೊಳಿಸಿದ್ದು, ಮಳೆಗಾಲದ ಆರಂಭಿಕ ವೈಭವವೇ ಜೋಗಕ್ಕೆ ಹೊಸ ಚೈತನ್ಯ ತುಂಬಿದೆ. ಇದರ ನಡುವೆಯೇ ಶಿವಮೊಗ್ಗ ಜಿಯ ಆಗುಂಬೆ ಭಾಗದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೫೧ ಮಿ.ಮೀ. ಮಳೆ ದಾಖಲಾಗಿದ್ದು, ರಾಜ್ಯದ ಅತಿ ಹೆಚ್ಚು ಮಳೆ ಸುರಿದ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಯಾಗಿರುವ ಆಗುಂಬೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಶರಾವತಿ ಕಣಿವೆಯ ಜಲಾನಯನ ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುವ ನಿರೀಕ್ಷೆ ಮೂಡಿದೆ.
ರಾಜ್ಯದ ಇತರೆ ಭಾಗಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಉತ್ತರ ಕನ್ನಡ ಜಿಯ ಮಂಕಿಯಲ್ಲಿ ೧೩೦ ಮಿ.ಮೀ., ಗೇರುಸೊಪ್ಪದಲ್ಲಿ ೧೨೦ ಮಿ.ಮೀ., ಕೊಡಗು ಜಿಯ ಪೊನ್ನಂಪೇಟೆಯಲ್ಲಿ ೧೧೦ ಮಿ. ಮೀ., ಚಿಕ್ಕಮಗಳೂರು ಜಿಯ ಕಮ್ಮರಡಿ ಹಾಗೂ ಶೃಂಗೇರಿ, ಶಿವಮೊಗ್ಗ ಜಿಯ ತಾಳಗುಪ್ಪ ಮತ್ತು ಬೆಳಗಾವಿ ಜಿಯ ಖಾನಾಪುರದಲ್ಲಿ ತಲಾ ೯೦ ಮಿ.ಮೀ. ಮಳೆ ದಾಖಲಾಗಿದೆ.
ಇದಲ್ಲದೆ ಉತ್ತರ ಕನ್ನಡ ಜಿಯ ಹೊನ್ನಾವರದಲ್ಲಿ ೮೦ ಮಿ.ಮೀ., ಯಪುರ, ಶಿರಸಿ, ಕುಮಟಾ ಹಾಗೂ ಚಿಕ್ಕಮಗಳೂರು ಜಿಯ ಕೊಟ್ಟಿಗೆಹಾರದಲ್ಲಿ ತಲಾ ೭೦ ಮಿ.ಮೀ. ಮಳೆಯಾಗಿದೆ.
ಬೆಳಗಾವಿ ಜಿಯ ನಿಪ್ಪಾಣಿ ಮತ್ತು ಸಂಕೇಶ್ವರ, ಉತ್ತರ ಕನ್ನಡ ಜಿಯ ಬನವಾಸಿ ಹಾಗೂ ಸಿzಪುರ, ಉಡುಪಿ ಜಿಯ ಕುಂದಾಪುರ, ಬೀದರ್ ಜಿಯ ಔರಾದ್, ಕೊಡಗು ಜಿಯ ಭಾಗಮಂಡಲ ಮತ್ತು ಚಿಕ್ಕಮಗಳೂರು ಜಿಯ ಕೊಪ್ಪದಲ್ಲಿ ೫೦ರಿಂದ ೬೦ ಮಿ.ಮೀ. ಮಳೆಯಾಗಿದೆ.
ಆಗುಂಬೆ ಹಾಗೂ ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆಯ ತೀವ್ರತೆ ಮುಂದುವರಿದರೆ ಲಿಂಗನಮಕ್ಕಿ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದರೊಂದಿಗೆ ಜೋಗ ಜಲಪಾತದ ಜಲರಾಶಿಯ ವೈಭವ ಇನ್ನಷ್ಟು ಮೆರೆಯಲಿದ್ದು, ಮುಂಬರುವ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *