ಜಿಲ್ಲಾ ಸುದ್ದಿತಾಜಾ ಸುದ್ದಿ

ಜೂ.13: ಕಾರೇಹಳ್ಳಿ ಗ್ರಾಮದಲ್ಲಿ ಸಂತ ಅಂತೋಣಿ ಅವರ ವಾರ್ಷಿಕ ಮಹೋತ್ಸವ…

Share Below Link

ಭದ್ರಾವತಿ : ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜೂ.೧೩ರ ನಾಳೆ ವಿಜೃಂಭಣೆಯಿಂದ ಜರುಗಲಿದ್ದು, ವಾರ್ಷಿಕ ಮಹೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಧರ್ಮ ಕೇಂದ್ರದ ಗುರುಗಳಾದ ರೆ|-| ಸಂತೋಷ್ ಅಲ್ಮೇಡ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು .
ಪ್ರತಿ ವರ್ಷ ಗ್ರಾಮದ ಸರ್ವ ಧರ್ಮದವರು ಒಟ್ಟಾಗಿ ಈ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಗ್ರಾಮದೆಡೆ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಮಹೋತ್ಸವದ ಮೊದಲು ೯ ದಿನಗಳ ಕಾಲ ಆಧ್ಯಾತ್ಮಿಕ ಭಕ್ತಿ ಕಾರ್ಯಗಳು ಪ್ರಾರಂಭ ಗೊಂಡಿದ್ದು, ಕಳೆದ ಬುಧವಾರ ಸಂಜೆ ಕಾರವಾರ ಧರ್ಮಾಧ್ಯಕ್ಷರಾದ ಪರಮಪೂಜ್ಯ ಬಿಷಪ್ ಡುಮಿಂಗ್ ಡಯಾಸ್ ರವರಿಂದ ಸಂತ ಅಂತೋಣಿಯವರ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಚಾಲನೆ ದೊರೆತಿದೆ. ಜೂ.೧೩ರ ನಾಳೆ ಹಬ್ಬದ ಪೂಜಾವಿಽಗಳನ್ನು ಶಿವಮೊಗ್ಗ ಧರ್ಮಕ್ಷೇತ್ರದ ಶ್ರೇಷ್ಠಗುರು ರೆ|-| ಸ್ಟ್ಯಾನಿ ಡಿಸೋಜ ಅವರ ಸಾನಿಧ್ಯದಲ್ಲಿ ನೆರವೇರಲಿದೆ.


ಜೂ.೧೨ರ ಇಂದು ಸಂಜೆ ೫ ಗಂಟೆಗೆ ಸಂತ ಅಂತೋಣಿಯವರ ಭವ್ಯ ತೇರಿನ ರಾಜಬೀದಿ ಉತ್ಸವಕ್ಕೆ ರೆ|-| ಪಿಯೂಸ್ ಡಿಸೋಜ ಅವರು ಚಾಲನೆ ನೀಡಲಿದ್ದು, ಜೂ.೧೩ರ ಶುಕ್ರವಾರ ಸಂತ ಅಂತೋಣಿಯವರ ಸ್ಮರಣೆಗಾಗಿ ವಾರ್ಷಿಕ ಮಹೋತ್ಸವದ ಪೂಜಾವಿಽಗಳು ಜರುಗಲಿವೆ. ಅಂದು ವಿಶೇಷ ಪೂಜಾ ಪ್ರಾರ್ಥನೆ, ಪ್ರಭೋದನೆ ನಂತರ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದರು.
ಈ ಮಹೋತ್ಸವಕ್ಕೆ ರಾಜ್ಯದ ವಿವಿಧ ಧರ್ಮಕೇಂದ್ರಗಳ ಗುರುಗಳು, ಕನ್ಯಾಸೀಯರು ಹಾಗೂ ಅಽಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಧರ್ಮ ಕೇಂದ್ರದ ಧರ್ಮಭಗಿನಿ ಸಿಸ್ಟರ್ ಲಾಲಮ್ಮ ತಿಳಿಸಿದರು.
ಪುಣ್ಯಕ್ಷೇತ್ರ ವಿಶೇಷತೆ :
ಈ ಪುಣ್ಯಕ್ಷೇತ್ರದಲ್ಲಿ ಬೇಡಿದ್ದನ್ನು ಪಡೆದಿರುವ ನಂಬಿಕೆ ಭಕ್ತರಲ್ಲಿ ಆಳವಾಗಿ ಬೇರೂರಿದೆ. ಅನೇಕ ಪವಾಡಗಳು ನಡೆದಿರುವುದು ಭಕ್ತರಿಂದ ತಿಳಿದು ಬಂದಿದೆ. ಈ ಹಿಂದೆ ಸೇವೆ ಸಲ್ಲಿಸಿದ್ದ ರೆ|-| ಅಂತೋಣಿ ಪೀಟರ್ ರವರ ಸೇವಾ ಅವಽಯಲ್ಲಿ `ದೇವರ ಸುವಾರ್ತೆಯನ್ನು ಪ್ರಬೋಽಸಿದ ಸಂತ ಅಂತೋಣಿಯವರ ನಾಲಿಗೆಯ ಅವಶೇಷವನ್ನು ಇಟಲಿಯ ಪಾದುವ ದೇಶದಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಅಂದಿನಿಂದ ಪ್ರತಿ ತಿಂಗಳ ಮೂರನೇ ಭಾನುವಾರ ಪ್ರತಿಷ್ಠಾಪಿಸಿರುವ ಅವಶೇಷ ಹೊರಗೆ ತೆಗೆದು ಭಕ್ತಾದಿಗಳ ದರ್ಶನಕ್ಕೆ ಇಡಲಾಗುತ್ತದೆ. ಅಂದು ತಿಂಗಳ ಹಬ್ಬ ಎಂದು ವಿಶೇಷ ಪೂಜಾ ವಿಽ-ವಿಧಾನ, ಆರಾಧನೆ, ರೋಗಿಗಳಿಗೆ ತೈಲಾಭಿಷೇಕದ ಪ್ರಾರ್ಥನೆ ಮತ್ತು ಅನ್ನಸಂತರ್ಪಣೆ ಕಾರ್ಯಗಳು ನಡೆಯುತ್ತವೆ.


ಅವಶೇಷದ ಬಳಿ ಬಂದು ಪ್ರಾರ್ಥಿಸುವವರ ಪ್ರಾರ್ಥನೆಗಳು ನೆರವೇರುತ್ತಿದ್ದು, ಭಕ್ತಾಽಗಳಲ್ಲಿ ಹೆಚ್ಚು ವಿಶ್ವಾಸ, ನಂಬಿಕೆ, ಭಕ್ತಿ ಬೆಳೆಯುವಂತೆ ಮಾಡಿದೆ. ಇದರಿಂದ ಪುಣ್ಯಕ್ಷೇತ್ರವು ಪ್ರಸಿದ್ದಿ ಮತ್ತು ಪ್ರಖ್ಯಾತಿ ಪಡೆದಿದೆ ಎಂದು ಸೇಂಟ್ ಡೊಮಿನಿಕ್ ಸಿಸ್ಟರ್ ಲಾಲಾಮ್ಮ ಅವರು ತಿಳಿಸಿದರು.
ವಾರ್ಷಿಕ ಮಹೋತ್ಸವಕ್ಕೆ ಆಗಮಿಸ ಲಿರುವ ಭಕ್ತರಿಗಾಗಿ ಚರ್ಚ್ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬಂದಂತಹ ಭಕ್ತರಿಗೆ ಊಟದ ವ್ಯವಸ್ಥೆ, ಶೌಚಾಲಯ, ಪಾರ್ಕಿಂಗ್, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಡಿಕೊಂಡ ಬೇಡಿಕೆಗಳು ಫಲಿಸಿರುವ ಕಾರಣ ಹರಕೆ ತೀರಿಸಲು ಅಂದು ದೂರದ ಊರುಗಳಿಂದ ಅನೇಕ ಭಕ್ತಾಽಗಳು ಕಾಲ್ನಡಿಗೆಯ ಬರುವುದು ವಿಶೇಷ ಎಂದು ಧರ್ಮ ಕೇಂದ್ರದ ಪ್ರಮುಖರಾದ ಮೋಕ್ಷ ಅವರು ತಿಳಿಸಿದರು.

Leave a Reply

Your email address will not be published. Required fields are marked *