ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಪ್ರಧಾನಿ ಮೋದಿ ಅವರಿಂದ ಸುದೀರ್ಘ ಆಡಳಿತದ ದಾಖಲೆ: ಬಿವೈಆರ್…

Share Below Link

ಶಿವಮೊಗ್ಗ: ಬಿಜೆಪಿಯ ನಾಯಕರಾದ ನರೇಂದ್ರ ಮೋದಿ ಅವರು ಸುಮಾರು ೪,೩೯೯ ದಿನಗಳ ಸುದೀರ್ಘ ಕಾಲ ಯಶಸ್ವಿಯಾಗಿ ಪ್ರಧಾನಿಯಾಗಿ ಆಡಳಿತ ನಡೆಸುವುದರ ಮೂಲಕ ೪೩೯೮ ದಿನಗಳ ಕಾಲ ಭಾರತದ ಪ್ರಧಾನಿಯಾಗಿ ಆಡಳಿತ ನಡೆಸಿದ ಜವಾಹರಲಾಲ್ ನೆಹರು ಅವರ ಸುದೀರ್ಘ ಆಡಳಿತದ ದಾಖಲೆ ಮುರಿದಿದ್ದಲ್ಲದೆ ಭಾರತವನ್ನು ವಿಶ್ವನಾಯಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಸಾಮಾನ್ಯ ಜನರ ಕಲ್ಯಾಣಕ್ಕೋಸ್ಕರ ಗರೀಬ್ ಕಲ್ಯಾಣ್ ಯೋಜನೆ, ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಜಲಜೀವನ್ ಮಿಷನ್ ಯೋಜನೆ, ರೈತರಿಗೆ ಪಿಎಂ ಕಿಸಾನ್ ಯೋಜನೆ, ಜನ್ ಧನ್ ಯೋಜನೆ, ಯುವಜನ ಸಬಲೀಕರಣ, ಬಡ ಮಹಿಳೆಯರಿಗಾಗಿ ಉಜ್ವಲ್ ಯೋಜನೆ, ಡಿಜಿಟಲ್ ಇಂಡಿಯಾ, ಆರೋಗ್ಯ ಕಾಳಜಿ ಗಾಗಿ ಆಯುಷ್‌ಮಾನ್ ಆರೋಗ್ಯ ಯೋಜನೆಗಳಂಥಹ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿದ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿzರೆ ಎಂದರು.
ಮೋದಿ ಅವರು ಪ್ರಧಾಯಾಗುವುದಕ್ಕೂ ಮೊದಲು ಅಂದರೆ ೨೦೧೪ರಲ್ಲಿ ದೇಶದಲ್ಲಿ ಕೇವಲ ಐದು ನಗರಗಳಲ್ಲಿ ಮಾತ್ರ ಮೆಟ್ರೋ ಜಾಲಗಳಿದ್ದು ಈಗ ಅದು ೨೯ ನಗರಗಳಲ್ಲಿ ೧,೩೦೦ ಕಿ.ಮೀ.ಗೆ ಏರಿಕೆಯಾಗಿದೆ. ಇನ್ನೂ ೯೦೦ ಕಿ.ಮೀ. ಮೆಟ್ರೋ ರೈಲು ಮಾರ್ಗದ ನಿರ್ಮಾಣ ಪ್ರಗತಿ ಯಲ್ಲಿದೆ ಎಂದ ಅವರು, ಯುಪಿಐ ಡಿಜಿಟಲ್ ಇಂಡಿಯಾ ಮೂಲಕ ಶೇ.೮೫ರಷ್ಟು ಹಣಕಾಸಿನ ವ್ಯವಹಾರಗಳು ನಡೆಯುತ್ತಿದ್ದು ಇದರಲ್ಲೂ ಭಾರತ ವಿಶ್ವಗುರು ಆಗುವತ್ತ ದಾಪುಕಾಲಿಡುತ್ತಿದೆ. ಮಾರ್ಚ್ ೨೦೨೬ರ ಹೊತ್ತಿಗೆ ೨,೨೬೪ ಸಾವಿರ ಕೋಟಿ ರೂ. ವಹಿವಾಟು ನಡೆಸಲಾಗಿದೆ. ೨೦೧೪ರಲ್ಲಿ ದೇಶದ ಜಿಡಿಪಿ ೧೦೬ ಲಕ್ಷ ಕೋಟಿ ರೂ.ಇದ್ದು ಮೋದಿ ಆಡಳಿತದಲ್ಲಿ ಅದು ಮೂರು ಪಟ್ಟು ಹೆಚ್ಚಾಗಿದೆ ಎಂದರು.


ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಽಸಿದಂತೆ ೨೦೧೪ ರಿಂದ ಇಲ್ಲಿಯವರೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರ್ಕಾರದಿಂದ ೭೩ ಯೋಜನೆಗಳಿಗೆ ಸುಮಾರು ೨೦ರಿಂದ ೨೨ ಸಾವಿರ ಕೋಟಿ ರೂ.ಗಳ ಅನುದಾನ ಬಂದಿದೆ. ೯೯೦ ಕೋಟಿ ರೂ.ವೆಚ್ಚಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತರಲಾಗಿದೆ. ಶಿವಮೊಗ್ಗದಲ್ಲಿ ಕುವೆಂಪು ಹೆಸರಿನಲ್ಲಿ ವಿಮಾನ ನಿಲ್ದಾಣ, ಶರಾವತಿ ನದಿಗೆ ಅಡ್ಡಲಾಗಿ ಸಿಗಂಧೂರು ಸೇತುವೆ ನಿರ್ಮಾಣವಾಗಿದೆ. ಈಗ ಶಿವಮೊಗ್ಗ- ಶೃಂಗೇರಿ- ಮಂಗಳೂರಿಗೆ ರೈಲ್ವೇ ಮಾರ್ಗ ಕ್ಕಾಗಿ ಸರ್ವೇ ಕಾರ್ಯ ಆರಂಭಿಸ ಲಾಗಿದೆ ಎಂದರು.
ಒಂದು ದೇಶ ಒಂದು ತೆರಿಗೆ ತಿಯಲ್ಲಿ ಜಿಎಸ್ ಟಿ ಪದ್ಧತಿ ತರಲಾಗಿದೆ. ಇದರಿಂದ ಉದ್ಯೋಗ ಸ್ಥರು, ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ವಾಗಿದೆ. ಶಿವಮೊಗ್ಗದ ಕೈಗಾರಿಕಾ ಕೇಂದ್ರ ಮಾಚೇನಹಳ್ಳಿಯಿಂದ ಸುಮಾರು ೩೦ ದೇಶಗಳಿಗೆ ವಿವಿಧ ಉತ್ಪಾದಿತ ವಸ್ತುಗಳು ರಪ್ತಾಗುತ್ತಿವೆ ಎಂದ ಅವರು, ಮೋದಿ ಆಡಳಿತದಲ್ಲಿ ಇಡೀ ದೇಶದ ಜೊತೆಗೆ ಶಿವಮೊಗ್ಗ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ಬಿಡುಗಡೆ ಯಾಗುತ್ತಿದ್ದು ಜನತೆಗೆ ಅಭಿವೃದ್ಧಿ ಪಥದಲ್ಲಿ ಸಾಗಲು ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ಬಿಜೆಪಿ ಜಿಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಹರಿಕೃಷ್ಣ, ಎನ್.ಡಿ.ಸತೀಶ್, ಕುಪೇಂದ್ರಪ್ಪ ಆಯನೂರು, ದರ್ಶನ್, ಪದ್ಮಿನಿ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *