ಮುಜರಾಯಿ ದೇವಸ್ಥಾನಗಳಿಗೆ ಬಿಗಿ ಭದ್ರತೆ -ಡಿಜಿಟಲ್ ಪಾವತಿಗೆ ನೂತನ ಮಾರ್ಗಸೂಚಿ
ಶಿವಮೊಗ್ಗ: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ನಡೆಯುವ ಕಳವು, ಹುಂಡಿ ಎಣಿಕೆ ಅಕ್ರಮ ಹಾಗೂ ಹಣ ದುರುಪ ಯೋಗ ತಡೆಯಲು ರಾಜ್ಯ ಸರ್ಕಾರ ಮತ್ತು ಜಿಡಳಿತವು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಕೈಗೊಂಡಿದೆ.
ದೇಶದ ವಿವಿಧ ರಾಜ್ಯಗಳ ದೇವಾ ಲಯಗಳ ಹುಂಡಿಗಳಲ್ಲಿ ನಡೆಯುತ್ತಿ ರುವ ಕಳವು ಪ್ರಕರಣಗಳನ್ನು ಗಂಭೀರ ವಾಗಿ ಪರಿಗಣಿಸಿ ರುವ ಧಾರ್ಮಿಕ ದತ್ತಿ ಇಲಾಖೆಯು, ಕೆಳಕಂಡ ಹೊಸ ಸೂಚನೆಗಳನ್ನು ನೀಡಿದೆ.
ಸಿಸಿಟಿವಿ ಮತ್ತು ಕಣ್ಗಾವಲು ವ್ಯವಸ್ಥೆ: ದೇವಾಲಯಗಳ ಪ್ರಮುಖ ಭಾಗಗಳಲ್ಲಿ ಎಲ್ಲರಿಗೂ ಕಾಣಿಸು ವಂತೆ ಹುಂಡಿಗಳನ್ನು ಅಳವಡಿಸಬೇಕು. ಹುಂಡಿಗಳ ಸುತ್ತಲೂ ನಾಲ್ಕೂ ದಿಕ್ಕು ಗಳಿಂದ ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿ, ಡಿಸಿ ಕಚೇರಿಯ ಮುಜರಾಯಿ ವಿಭಾಗಕ್ಕೆ ಮಾನಿಟರ್ ಮಾಡಲು ಸಂಪರ್ಕ ಕಲ್ಪಿಸಬೇಕು.
ಕ್ಯಾಮೆರಾ ಲೆನ್ಸ್ ಕಪ್ಪು ಹೊಗೆ ಅಥವಾ ಧೂಳಿನಿಂದ ಮುಚ್ಚಿ ಹೋಗದಂತೆ ತಡೆಯಲು ಆಧುನಿಕ ಸಿಸಿಟಿವಿಗಳನ್ನು ಬಳಸಬೇಕು. ಸಿಸಿಟಿವಿ ದೃಶ್ಯಾವಳಿಗಳನ್ನು ಡಿಸಿ, ಎಸ್‌ಪಿ ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಯ ಕಂಟ್ರೋಲ್ ರೂಂಗಳಿಗೆ ಸಂಪರ್ಕಿಸಿ ಡ್ಯಾಶ್ ಬೋರ್ಡ್ ವ್ಯವಸ್ಥೆ ಮಾಡಲಾಗುವುದು.
ಡಿಜಿಟಲ್ ಪಾವತಿ -ಕ್ಯುಆರ್ ಕೋಡ್ ಬಳಕೆಗೆ ಪ್ರೋತ್ಸಾಹ :ಭಕ್ತಾದಿಗಳು ನಗದು ತರುವು ದನ್ನು ಹಾಗೂ ಜೇಬುಗಳ್ಳತನವನ್ನು ಕಡಿಮೆ ಮಾಡಲು ದೇವಾಲಯ ಗಳಲ್ಲಿ ಕ್ಯು ಆರ್ ಕೋಡ್ ಹಾಗೂ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಅಳವಡಿಸಲಾಗುವುದು.
ಡಿಜಿಟಲ್ ಕಾಣಿಕೆಗಳನ್ನು ನೇರವಾಗಿ ದೇವಾಲಯದ ಬ್ಯಾಂಕ್ ಖಾತೆಗೆ (ಐಎಫ್‌ಎಸ್‌ಸಿ ವಿವರಗಳೊಂದಿಗೆ) ಲಿಂಕ್ ಮಾಡಲಾ ಗುವುದು. ಹುಂಡಿ ಬಳಿ ಮಾತ್ರ ಕ್ಯು ಆರ್ ಕೋಡ್ ಅಳವಡಿ ಸಬೇಕು. ಕೆಲವೆಡೆ ಕ್ಯೂಆರ್ ಕೋಡ್ ದುರುಪಯೋಗ ಪಡಿಸಿಕೊಳ್ಳುತ್ತಿರು ವುದು ಕಂಡು ಬಂದಿದ್ದು, ದುಷ್ಕರ್ಮಿ ಗಳು ನಕಲಿ ಕ್ಯುಆರ್ ಕೋಡ್ ಹಾಕಿ ವಂಚಿಸ ದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು.
ಹುಂಡಿ ಎಣಿಕೆಗೆ ಕಟ್ಟುನಿಟ್ಟಿನ ನಿಯಮಗಳು :ಹೆಚ್ಚಿನ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಹಾಗೂ ಸಾಧಾರಣ ದೇವಾಲಯಗಳಲ್ಲಿ ಎರಡು ವಾರ ಕ್ಕೊಮ್ಮೆ ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹುಂಡಿ ಎಣಿಕೆ ಯನ್ನು ಕ್ಯಾಲೆಂಡರ್‌ನಲ್ಲಿ ಮುಂಚಿತ ವಾಗಿಯೇ ಕಡ್ಡಾಯವಾಗಿ ನಿಗದಿಪಡಿಸಬೇಕು. ಹುಂಡಿ ಎಣಿಕೆ ಯನ್ನು ಸಂಬಂಧಪಟ್ಟ ತಹಶೀಲ್ದಾರರ ಸಮ್ಮುಖದ ನಡೆಸಬೇಕು.
ಬಂಗಾರ/ಬೆಳ್ಳಿ ಮಲ್ಯಮಾಪನ: ಎಣಿಕೆ ಸಮಯದಲ್ಲಿ ಸಿಗುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಅಂದೇ ಮಲ್ಯಮಾಪನ ಮಾಡಿಸಿ, ಕಡ್ಡಾಯವಾಗಿ ಜಿ/ಉಪ ಖಜನೆಗೆ ಜಮಾ ಮಾಡಬೇಕು. ಎಣಿಕೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ಯನ್ನು ಪರಿಶೀಲಿಸಲು ಮುಖ ಚಹರೆ ಗುರುತಿಸುವ ತಂತ್ರeನ ಬಳಸಲಾಗುವುದು. ಸಿಬ್ಬಂದಿ ಎಣಿಕೆ ಕೊಠಡಿ ಪ್ರವೇಶಿಸುವ ಮುನ್ನ ತಮ್ಮ ಬಳಿ ಇರುವ ಹಣವನ್ನು ಕಡ್ಡಾಯವಾಗಿ ಘೋಷಿಸಬೇಕು.
ಸಂಪೂರ್ಣ ವೀಡಿಯೋಗ್ರಫಿ – ಖಾಸಗಿ ವ್ಯಕ್ತಿಗಳಿಗೆ ನಿಷೇಧ :ಹುಂಡಿ ತೆರೆಯುವುದರಿಂದ ಹಿಡಿದು, ಎಣಿಕೆ ಮಾಡಿ ಬ್ಯಾಂಕ್‌ಗೆ ಹಸ್ತಾಂತರಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ದಿನಾಂಕ ಮತ್ತು ಸಮಯ ದಾಖ ಲಾಗುವಂತೆ ವೀಡಿಯೊ ಚಿತ್ರೀಕರಣ ಮಾಡುವುದು ಕಡ್ಡಾಯ. ಹುಂಡಿ ಎಣಿಕೆಗೆ ಖಾಸಗಿ ಅಥವಾ ಸಾರ್ವಜನಿಕರ ಸೇವೆಯನ್ನು ಪಡೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕೇವಲ ಗೃಹರಕ್ಷಕ ದಳ, ಬ್ಯಾಂಕ್ ಸಿಬ್ಬಂದಿ ಹಾಗೂ ಸರ್ಕಾರಿ ನೌಕರರನ್ನು ಮಾತ್ರ ಬಳಸಿಕೊಳ್ಳಬೇಕು.
ಎಚ್ಚರಿಕೆ: ಹುಂಡಿ ಎಣಿಕೆ ಸಮಯದಲ್ಲಿ ಅಥವಾ ದೇವಾಲಯದ ಹುಂಡಿಗಳಲ್ಲಿ ಕಳವು ಪ್ರಕರಣಗಳು ಕಂಡುಬಂದಲ್ಲಿ, ಸಂಬಂಧಪಟ್ಟ ದೇವಾಲಯದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆಗಾರರ ನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಅಪರ ಜಿಧಿಕಾರಿ ಅಭಿಷೇಕ್ ವಿ ಪ್ರಕಟಣೆಯಲ್ಲಿ ತಿಳಿಸಿzರೆ.
