ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ನಿವೃತ್ತರಾದ ಪೊಲೀಸ್ ಅಽಕಾರಿಗಳಿಗೆ ಆತ್ಮೀಯ ಬೀಳ್ಕೊಡಿಗೆ…

Share Below Link

ಶಿವಮೊಗ್ಗ : ಜಿ ರಕ್ಷಣಾಽಕಾರಿಗಳ ಕಛೇರಿಯಲ್ಲಿಂದು ಕಳೆದ ೩೫ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸಿದ ಜಿ ಹೆಚ್ಚುವರಿ ಪೊಲೀಸ್ ಅಽಕ್ಷಕ ಎಸ್.ಕೆ. ರಮೇಶ್ ಕುಮಾರ್ ಹಾಗೂ ಎಎಸ್‌ಐ ಲಕ್ಷ್ಮಣ್ ಎಚ್.ಎನ್., ಮತ್ತು ಮುನಿಸ್ವಾಮಿ ಅವರು ಇಂದು ಸುಽರ್ಘ ಸೇವೆಯಿಂದ ಸೇವಾ ನಿವೃತ್ತಿಗೊಂಡಿದ್ದು ಜಿ ಪೊಲೀಸ್ ವರಿಷ್ಠಾಽಕಾರಿ ನಿಖಿಲ್ ಬಿ. ಮತ್ತು ಇತರ ಸಿಬ್ಬಂದಿಗಳು ನಿವೃತ್ತರನ್ನು ಆತ್ಮೀಯವಾಗಿ ಗೌರವಿಸಿ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಪಿ ನಿಖಿಲ್, ನಿವೃತ್ತಿ ಸಾಮಾನ್ಯ ಪ್ರಕ್ರಿಯೆ. ಪೊಲೀಸ್ ಇಲಾಖೆಗೆ ತಮ್ಮ ಜೀವನದ ಬಹುಭಾಗವನ್ನು ಧಾರೆ ಎರೆದಿದ್ದೀರಿ. ಇನ್ನು ಮುಂದೆ ಕುಟುಂಬಕ್ಕೆ ಸಮಯ ನೀಡಿ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಮತ್ತು ನಮಗೆ ಮಾರ್ಗದರ್ಶನ ನೀಡುತ್ತೀರಿ ಎಂದು ನಿವೃತ್ತ ಅಽಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಸಿಬ್ಬಂದಿಗಳ ಕುಟುಂಬದೊಂದಿಗೆ ಮಾತನಾಡಿದ ಅವರು, ಪೊಲೀಸರು ೨೪ ಗಂಟೆ ತುರ್ತು ಸೇವಾ ನಿರತರಾಗಿದ್ದು, ಅನೇಕ ಭಾರಿ ರಾತ್ರಿ ಎರಡು-ಮೂರು ಗಂಟೆಯ ಸಮಯಕ್ಕೆ ಮನೆಗೆ ಬಂದಾಗ ಕೂಡ ಸಿಟ್ಟಾಗದೆ ಕರ್ತವ್ಯಕ್ಕೆ ಪ್ರಾಧಾನ್ಯತೆ ನೀಡಿದ್ದಕ್ಕೆ ನಿಮಗೆ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದು ವಿಶೇಷವಾಗಿತ್ತು. ಪೊಲೀಸ್ ಕುಟುಂಬ ಕೂಡ ರಕ್ಷಣಾಽಕಾರಿಗಳಿಗೆ ನಮನ ಸಲ್ಲಿಸಿ ಭಾವನಾತ್ಮಕವಾಗಿ ಬೀಳ್ಕೊಟ್ಟ ರೋಚಕ ಕ್ಷಣಗಳು ಕಂಡು ಬಂದವು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿ ಪೊಲೀಸ್ ಅಽಕ್ಷಕ ಕಾರ್ಯಪ್ಪ, ಉಪಾಽಕ್ಷಕರುಗಳಾದ ಬಾಬು ಅಂಜನಪ್ಪ, ಸಂಜೀವ್‌ಕುಮಾರ್ ಹಾಗೂ ಪಿಐಗಳಾದ ಸಂತೋಷ್‌ಕುಮಾರ್, ರಾಘವೇಂದ್ರ ಖಂಡಿಕೆ ಮತ್ತು ಹಿರಿಯ ಪೊಲೀಸ್ ಅಽಕಾರಿಗಳು ಹಾಗೂ ನಿವೃತ್ತ ಪೊಲೀಸರ ಕುಟುಂಬಸ್ಥರು ಉಪಸ್ಥಿತರಿದ್ದರು.