ಸೂಳೇಬೈಲ್ ಬೈಪಾಸ್ ಸರ್ಕಲ್ ಟರ್ನಿಂಗ್ನಲ್ಲಿ ಎರಡು ಹೈಮಾಸ್ಕ್ ಲೈಟ್ ಅಳವಡಿಕೆ…
ಶಿವಮೊಗ್ಗ: ನಗರದ ೩೫ನೇ ವಾರ್ಡಿಗೊಳಪಟ್ಟಿರುವ ಸೂಳೇಬೈಲು ಬಡಾವಣೆಯ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರ ವತಿಯಿಂದ ಸೂಳೇಬೈಲ್ ಬೈಪಾಸ್ ಸರ್ಕಲ್ ಟರ್ನಿಂಗ್ನಲ್ಲಿ ಎರಡು ಹೈಮಾಸ್ಕ್ ಲೈಟ್ ಹಾಕಿಸಿದ್ದು, ಮತ್ತು ಸೂಳೇಬೈಲ್ ಈದ್ಗಾನಗರ ಸರ್ಕಲ್ನಲ್ಲಿ ಒಂದು ಹೈಮಾಸ್ಟ್ ಲೈಟ್ ಅಳವಡಿಸಿದ್ದು, ಇದರ ಉದ್ಘಾಟನೆಯನ್ನು ಶಿವಮೊಗ್ಗ ನಗರದ ೩೫ನೇ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಮಜೀಬ್, ಶಿವಮೊಗ್ಗ ಜಿ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಶಿವಮೊಗ್ಗ ಜಿ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನಕುಮಾರ್ ಮತ್ತು ಮಾಜಿ ಶಾಸಕರಾದ ಕರಿಯಣ್ಣ ಶ್ರೀನಿವಾಸ್, ಶಾಸಕಿ ಬಲ್ಕೀಸ್ ಬಾನು ನೇತೃತ್ವದಲ್ಲಿ ಈಚೆಗೆ ಉದ್ಘಾಟನೆ ಮಾಡಲಾಯಿತು.
ಮತ್ತೂರು ಗ್ರಾಮದ ವರುಣಾ ನಂದ ಸ್ವಾಮಿಜಿ, ಸೂಳೇಬೈಲು ಮಕ್ಕಾ ಮಸೀದಿಯ ಗುರುಗಳಾದ ಜಬೀ ಮಲಾನ ಇವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು.

