ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ಬಿ.ವಿ.ಕಾರಂತ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಪ್ರಸನ್ನ ಆಯ್ಕೆ

Share Below Link

ಶಿವಮೊಗ್ಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ೨೦೨೫-೨೬ನೇ ಸಾಲಿನ ಪ್ರತಿಷ್ಠಿತ ಬಿ.ವಿ.ಕಾರಂತ ಪ್ರಶಸ್ತಿಗೆ ಸಾಗರ ತಾಲ್ಲೂಕಿನ ಹೊನ್ನೇಸರದ ಚರಕ ಸಂಸ್ಥೆ ಸಂಸ್ಥಾಪಕ, ಹಿರಿಯ ರಂಗ ಕರ್ಮಿ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ೫ ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಗಾಂಧಿವಾದಿ ಪ್ರಸನ್ನ ಅವರು ರಂಗಭೂಮಿ, ಸಾಂಸ್ಕೃತಿಕ ಚಟು ವಟಿಕೆ ಮತ್ತು ಸಾಮಾಜಿಕ ಚಳವಳಿಗಳ ಮೂಲಕ ನಾಡಿನ ಜನಮಾನಸದಲ್ಲಿ ನೆಲೆಯಾಗಿzರೆ. ಕಳೆದ ೫೦ ವರ್ಷಗಳಿಂದ ನಿರಂತರ ವಾಗಿ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡಿzರೆ. ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದ ಅವರು, ಪ್ರಶಸ್ತಿ ಬಂದಿದ್ದು ಸಂತೋಷವಾ ಗಿದೆ. ಅದರಲ್ಲೂ ಬಿ.ವಿ.ಕಾರಂತರ ಹೆಸರಿನಲ್ಲಿ ಬಂದಿದ್ದು ಹೆಚ್ಚು ಸಂತೋಷ ತಂದಿದೆ. ರಂಗಭೂಮಿ ಯಲ್ಲಿ ಕಾರಂತರರದ್ದು ಬಹಳ ದೊಡ್ಡ ಹೆಸರು. ಪ್ರಶಸ್ತಿಯನ್ನು ಸ್ವೀಕರಿಸುವು ದೆಂದರೆ ಸಮಾಜ ನೀಡುವ ಗೌರವವನ್ನು ಸ್ವೀಕರಿಸುವುದೆಂದು ಅರ್ಥ. ನನಗೆ ಪ್ರಶಸ್ತಿಯ ಹಣದ ಅಗತ್ಯವಿಲ್ಲ; ನನಗೆ ಎರಡು ಹೊತ್ತಿನ ಊಟ ಹಾಕಿ ಸಾಕುತ್ತಿರುವ ಚರಕ ಸಂಸ್ಥೆಗೆ ಈ ಪ್ರಶಸ್ತಿಯ ಹಣವನ್ನು ನೀಡುತ್ತಿzನೆ. ಇದು ಕೂಡ ಬಹಳ ಸಂತೋಷದ ಸಂಗತಿ ಎಂದರು.
ಚರಕದ ಮಹಿಳೆಯರು ಈ ಕೈಮಗ್ಗ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುತ್ತಿzರೆ. ಅಷ್ಟೇ ಅಲ್ಲ, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಚರಕದ ಅಡಿಯಲ್ಲಿ ಗಾಂಧಿ ಸಂಸ್ಥೆ ಯನ್ನು ಆರಂಭಿಸಲು ಸಿದ್ಧತೆ ಕೈಗೊಂಡಿzರೆ. ಆ ಸಂಸ್ಥೆಯ ಮೂಲಕ ರಾಜ್ಯದ ಎ ಯುವಕ- ಯುವತಿಯರಿಗೆ ಸುಸ್ಥಿರ ಬದುಕಿನ ತರಬೇತಿ ನೀಡಲಿzರೆ. ಗಾಂಧಿ ಸಂಸ್ಥೆಯ ಮುಂದಾಳತ್ವವನ್ನು ವಹಿಸಿಕೊಳ್ಳಬೇಕೆಂದು ನನಗೆ ತಿಳಿಸಿzರೆ. ನಾನು ಸಂತೋಷ ದಿಂದ ಒಪ್ಪಿzನೆ. ಆ ಕೆಲಸಕ್ಕೆ ಈ ಪ್ರಶಸ್ತಿಯ ಹಣ ವಿನಿಯೋಗ ವಾಗಲಿದೆ ಎಂದರು.