ಜಿಲ್ಲಾ ಸುದ್ದಿತಾಜಾ ಸುದ್ದಿ

ಏ.೧೮:ನಾನೇ ಭಾರತ-ತಾಯಿ ಭಾರತಿಗೆ ಕನ್ನಡದಾರತಿ ಎಂಬ ಐತಿಹಾಸಿಕ ಕಾರ್ಯಕ್ರಮ

Share Below Link

ಶಿವಮೊಗ್ಗ:ವಂದೇ ಮಾತರಂಗೆ ೧೫೦ ವರ್ಷ ತುಂಬಿದ ಹಿನ್ನಲೆಯಲ್ಲಿ ನಗರದ ಅನವರತ ಫೌಂಡೇಷನ್ ಮತ್ತು ಸಂಸ್ಕಾರ ಭಾರತಿ ಸಹಯೋಗದೊಂದಿಗೆ ಏ.೧೮ರಂದು ಬೆಳಿಗ್ಗೆ ೯ ರಿಂದ ರಾತ್ರಿ ೮ರ ವರೆಗೆ ನಾನೇ ಭಾರತ-ತಾಯಿ ಭಾರತಿಗೆ ಕನ್ನಡದಾರತಿ ಎಂಬ ಐತಿಹಾಸಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅನವರತ ಫೌಂಡೇಷನ್ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಇತಿಹಾಸದ ಸತ್ಯ ಸಂಗತಿ ಗಳನ್ನು ಸಾರ್ವಜನಿಕರಿಗೆ ತಿಳಿಸು ವುದು ಹಾಗೂ ಕಾಲೇಜು ವಿದ್ಯಾ ರ್ಥಿಗಳಲ್ಲಿ ದೇಶಪ್ರೇಮ ಮೂಡಿ ಸುವ ಸಂಗತಿಗಳ ಬಗ್ಗೆ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಉzಶವಾಗಿದೆ ಎಂದ ಅವರು, ಮೂರು ಹಂತಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ ೯ ಗಂಟೆಗೆ ಕರ್ನಲ್ ಡಾ.ಎ.ಎಸ್. ರಘುನಾಥ್, ಅವರಿಂದ ರಾಷ್ಟ್ರಧ್ವಜರೋಹಣ ನಡೆಯಲಿದ್ದು, ಶಿವಮೊಗ್ಗದ ಸಂಗೀತ ಶಾಲೆಗಳ ೧೫೦ ಪ್ರತಿಭೆಗಳಿಂದ ವಂದೇ ಮಾತರಂ ಸಮೂಹ ಗಾಯನ ನಡೆಯಲಿದೆ. ಬಳಿಕ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವಾಸುದೇವ್ ಬಲವಂತ್ ಫಡ್ಕೆ ಅವರಅಧಮ್ಯ ಭಾರತ ಕುರಿತು ವಿಶೇಷ ಪ್ರದರ್ಶಿನಿ ನಡೆಯಲಿದೆ.


ಇದರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹಾಗೂ ಭಾರತದ ಪರಂಪರೆ, ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಮೂರನೇ ಹಂತದಲ್ಲಿ ಸಂಜೆ ೫.೩೦ಕ್ಕೆ ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಸಂಗೀತ ದಿಗ್ಗಜಗಳಾದ ಪ್ರಹ್ಲಾದ್ ದೀಕ್ಷಿತ್, ವಿದ್ವಾನ್ ಹೆಚ್.ಎಸ್. ನಾಗರಾಜ್, ಗಾಯಕ ಅರುಣ್ ಅವರಿಂದ ದೇಶಭಕ್ತಿ ಗೀತಗಾಯನ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿ ಸುವ ರಸಪ್ರಶ್ನೆ ಕಾರ್ಯಕ್ರಮವು ಏರ್ಪಾಟಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾ ಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ನಾಗರಾಜ್, eನೇಶ್ವರ, ಮೋಹನ, ಸಂಸ್ಕಾರ ಭಾರತೀಯ ಸವಿತಾ ಮಾಧವ್, ರಂಜನಿ ಬಿದರಳ್ಳಿ, ಚೈತ್ರಾ ಸಜ್ಜನ್, ವಸುಂ ಧರಾ, ಮಂಜುನಾಥ್, ಸಹನಾ ಚೇತನಾ ಮೊದಲಾದವರಿದ್ದರು.