ಲೀಡ್ಬ್ಯಾಂಕ್ ನೇತೃತ್ವದಲ್ಲಿ ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್ ತರಬೇತಿ
ಭದ್ರಾವತಿ : ಶಿವಮೊಗ್ಗದ ಲೀಡ್ ಆಕಾಡೆಮಿ ನೇತೃತ್ವದಲ್ಲಿ ನಗರದ ಪೇಸ್ ಕಂಪ್ಯೂಟರ್ ಸಹಯೋಗದಲ್ಲಿ ಸರ್ಕಾರಿ ಸಾಮ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃಧ್ಧಿ ನಿಗಮದಿಂದ ೬೦ ಉದ್ಯೋಗಾಕಾಂಕ್ಷಿಗಳಿಗೆ ಮೂರು ತಿಂಗಳ ಕಾಲ ಡಾಟಾ ಎಂಟ್ರೀ ಆಪರೇಟರ್ ತರಬೇತಿಯನ್ನು ನೀಡಲಾಯಿತು.
ಈ ತರಬೇತಿ ಪಡೆದವರಿಗೆ ಖಾಸಗಿ ಸಂಸ್ಥೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನಗರದ ಮತ್ತು ಮಾಚೇನಹಳ್ಳಿಯ ಕೈಗಾರಿಕೆಗಳಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡಲು ನಿರ್ವಹಿಸಲು ಸಂದರ್ಶನ ನಡೆಸಿ ೪೦ ಉದ್ಯೋಗಿ ಗಳಿಗೆ ಹೊರ ಗುತ್ತಿಗೆ ಆಧಾರದ ಮೆಲೆ ಕಾರ್ಯ ನಿರ್ವಹಿಸಲು ಆಯ್ಕೆ ಮಾಡಿಕೊಳ್ಳಲಾಯಿತು.
ಲೀಡ್ ಆಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಪ್ರೊ| ವಿಲೀಯಂ ಡಿ’ಸೋಜ, ಪೇಸ್ ಕಂಪ್ಯೂಟರ್ನ ವ್ಯವಸ್ಥಾಪಕ ನಿರ್ದೇಶಕ ಅಬೀದ್ ಆಲಿ ಮತ್ತು ಸಿಬ್ಬಂದಿಗಳಾದ ಅನೂಷಾ, ನಗೀನಾ ಭಾನು, ಸ್ನೇಹ, ಅಪೂರ್ವ ರಾಕೇಶ್ ಉಪಸ್ಥಿತರಿದ್ದರು.
