ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾವತಿಯಲ್ಲಿ ಹೋಟೆಲ್, ಬೇಕರಿಗಳ ಮೇಲೆ ಅಽಕಾರಿಗಳ ದಾಳಿ

Share Below Link

ಭದ್ರಾವತಿ, ಅ.೧೫: ನಗರದ ಹೋಟೆಲ್‌ಗಳು, ಬೇಕರಿಗಳು, ಸಿಹಿತಿನಿಸುಗಳ ತಯಾರಿಕಾ ಕೇಂದ್ರಗಳು ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಉಪವಿಭಾಗಾಽಕಾರಿ ಡಾ. ಮೈತ್ರಿ ಮತ್ತು ತಹಶೀಲ್ದಾರ್ ಪ್ರದೀಪ್ ದೇವಗಿರಿ ನೇತೃತ್ವದ ಅಽಕಾರಿಗಳ ತಂಡ ದಿಢೀರ್ ದಾಳಿ ನಡೆಸಿ, ಆಹಾರ ಸುರಕ್ಷತೆ ಹಾಗೂ ಸ್ವಚ್ಛತೆಯಲ್ಲಿನ ಹಲವು ಲೋಪಗಳನ್ನು ಪತ್ತೆಹಚ್ಚಿದೆ.


ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್‌ಗಳು, ಬೇಕರಿಗಳು ಹಾಗೂ ಇತರ ಆಹಾರ ಮಾರಾಟ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ ಅಽಕಾರಿಗಳು, ಅವಽ ಮೀರಿದ ಆಹಾರ ಪದಾರ್ಥಗಳ ಬಳಕೆ, ಆಹಾರ ತಯಾರಿಕೆಯಲ್ಲಿ ರಾಸಾಯನಿಕ ಬಣ್ಣಗಳ ಉಪಯೋಗ ಮತ್ತು ಅನಽಕೃತ ತಿಂಡಿತಿನಿಸುಗಳ ಪ್ಯಾಕೆಟ್‌ಗಳನ್ನು ಪತ್ತೆಹಚ್ಚಿದರು. ಕೆಲವು ಮಳಿಗೆಗಳ ಸುತ್ತಮುತ್ತ ದುರ್ವಾಸನೆ ಹರಡಿದ್ದು, ಸ್ವಚ್ಛತೆಯ ಕೊರತೆಯೂ ಕಂಡುಬಂದಿತು.
ಸಿಹಿತಿನಿಸು, ಬ್ರೆಡ್, ಬನ್, ಕ್ರೀಮ್ ಹಾಗೂ ಕೇಕ್ ತಯಾರಿಕಾ ಕೇಂದ್ರಗಳಲ್ಲಿಯೂ ಬಳಕೆಗೆ ಯೋಗ್ಯವಲ್ಲದ ವಸ್ತುಗಳು ಪತ್ತೆಯಾಗಿವೆ. ಆಹಾರ ಪದಾರ್ಥ ಗಳ ಗುಣಮಟ್ಟ ಪರಿಶೀಲನೆಗಾಗಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಅಽಕಾರಿಗಳು ಕ್ರಮ ಕೈಗೊಂಡರು. ರಾಸಾಯನಿಕ ಬಣ್ಣ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.
ಹೋಟೆಲ್ ಮತ್ತು ಅಂಗಡಿಗಳ ಮಾಲೀಕರು ಅಗತ್ಯ ಪರವಾನಗಿಗಳನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಸೂಚಿಸಿದ ಅಽಕಾರಿಗಳು, ಮಾಂಸಾಹಾರಿ ಹೋಟೆಲ್‌ಗಳ ಸ್ವಚ್ಛತೆ ಹಾಗೂ ಆಹಾರ ತಯಾರಿಕೆಗೆ ಬಳಸುವ ಉಪಕರಣಗಳ ಸ್ಥಿತಿಯನ್ನು ಪರಿಶೀಲಿಸಿದರು. ಅನುಪಯುಕ್ತ ಉಪಕರಣಗಳನ್ನು ತೆರವುಗೊಳಿಸಿ, ಸ್ವಚ್ಛ ಪರಿಸರದಲ್ಲಿ ಆಹಾರ ತಯಾರಿಸುವಂತೆ ಎಚ್ಚರಿಕೆ ನೀಡಿದರು.
ಉಪವಿಭಾಗಾಽಕಾರಿ ಡಾ. ಮೈತ್ರಿ ಅಽಕಾರ ವಹಿಸಿಕೊಂಡ ಬಳಿಕ ಆಹಾರ ಸುರಕ್ಷತೆಗೆ ಆದ್ಯತೆ ನೀಡಿ ನಿರಂತರ ಪರಿಶೀಲನೆ ನಡೆಸುತ್ತಿzರೆ.
ದಾಳಿಯಲ್ಲಿ ಎಫ್‌ಎಸ್‌ಎಸ್‌ಎಐ ಆಹಾರ ನಿರೀಕ್ಷಕರಾದ ಶಶಿಕುಮಾರ್, ಬಿ.ಎಂ. ಮನೋಜ್, ಉಮೇಶ್, ಮನೋಜ್ ಮತ್ತು ಸುಮಾ, ಉಪತಹಶೀಲ್ದಾರ್ ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಾಽಕಾರಿ ಶಿವಣ್ಣ ಕೂಡ್ಲಿಗೆರೆ ಹಾಗೂ ಆರ್‌ಐ ಅನಿಲ್ ರಾಜ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *