ಖಾತೆಗಾಗಿ ಸಚಿವರ ಕ್ಯಾತೆ; ಒಳ್ಳೆಯದಲ್ಲ :ಸಿ.ಟಿ. ರವಿ
ಶಿವಮೊಗ್ಗ, ಜೂ.೬: ಸಚಿವರು ಖಾತೆಗಾಗಿ ಕ್ಯಾತೆ ತೆಗೆದಿರುವುದು ಸರ್ಕಾರ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿzರೆ.
ಇಂದು ಸುದ್ದಿಗಾರರೊಂದಿಗೆ ಮಾತ ನಾಡಿ, ಅವರು ಇನ್ನು ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ಆಗಿಲ್ಲ. ಈಗಲೇ ಅಸಮಾಧಾನ ಉಂಟಾದರೆ ಪೂರ್ಣ ಪ್ರಮಾಣದ ಸಂಪುಟದ ನಂತರ ಪರಿಣಾಮ ಏನು ಆಗಬಹುದು. ಇದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಇವರನ್ನು ಸಂಭಾಳಿಸುವುದನ್ನು ಬಿಟ್ಟು ಸಿಎಂಗೆ ಬೇರೆ ಕೆಲಸ ಮಾಡಲು ಆಗುವುದಿಲ್ಲ ಎಂದರು.

೧,೩೪,೦೦೦ ಕೋಟಿ ರೂ. ಸಾಲ ಮಾಡಬೇಕಾಗುತ್ತದೆ ಎಂದು ಬಜೆಟ್ ಪೂರ್ವ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಡಿಕೆಶಿ ಕೂಡ ಮತ್ತಷ ಘೋಷಣೆ ಮಾಡಿzರೆ. ಇದು ಕೇಳಲು ಮತ್ತಷ ಚಂದ. ಉಚಿತ ಬಸ್ ಪಾಸ್ ಎಂದರೆ ಇನ್ನಷ ಸಾಲ ಮಾಡ ಬೇಕಾಗುತ್ತೆ. ಜನರ ಮೇಲೆ ತೆರಿಗೆ ಹಾಕಬೇಕಾಗುತ್ತದೆ ಎಂದರು.
ಡಿಕೆಶಿ ಅನುಭವ ಹೊಂದಿರುವ ಸಿಎಂ ಆಗಿರಬಹುದು. ಆದರೆ, ರಾಜ್ಯವನ್ನು ಅಭಿವೃದ್ಧಿ ಪಡಿಸುವ ಇಚ್ಛಾ ಶಕ್ತಿಯ ಕೊರತೆ ಇದೆ. ಸಿದ್ದರಾಮಯ್ಯ ಈಗಲೂ ಕೂಡ ಪವರ್ ಫುಲ್. ಸಿದ್ದರಾಮಯ್ಯನವರನ್ನು ಕಡೆಗಣಿಸಿ ರಾಜಕಾರಣ ಮಾಡುವುದು ಅ? ಸುಲಭ ಅಲ್ಲ. ಮಾಸ್ ಲೀಡರ್ಸ್ ಅಧಿಕಾರದಲ್ಲಿರಲಿ, ಇಲ್ಲದಿರಲಿ ಅವರ ಪ್ರಭಾವ ಇರುತ್ತದೆ ಎಂದರು.
ದನಗಳಿಗೆ ಹಾಕುವುದು ಬೇರೆಯವರ ಹೊಲಗಳಿಗೆ ನುಗ್ಗಬಾರದು ಎಂದು. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರಿಗೂ ತೊಂಡಿ ಹಾಕಲಾಗಿದೆ. ಡಿಕೆಶಿ ಬೇರೆ ಖಾತೆಗಳಿಗೆ ಕೈ ಹಾಕಬಾರದು ಎಂದು ತೊಂಡಿ ಹಾಕುವ ಕೆಲಸ ಮಾಡಿzರೆ. ಒಬ್ಬರಿಗೆ ಹೆಚ್ಚುವರಿ ಜವಾಬ್ದಾರಿ ಕೊಟ್ಟಿದ್ದಕ್ಕೆ ಸಚಿವರು ಮುನಿಸಿಕೊಂಡಿzರೆ. ಹಿರಿತನಕ್ಕೆ ತಕ್ಕ ಖಾತೆ ಕೊಟ್ಟಿಲ್ಲ ಎಂದು ಮತ್ತೊಬ್ಬರು ಮುನಿಸಿಕೊಂಡಿzರೆ ಎಂದರು.

ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕು ಎಂದು ರಾಮಲಿಂಗಾರೆಡ್ಡಿ ಮುನಿಸಿಕೊಂಡ ವಿಚಾರದ ಬಗ್ಗೆ ಮಾತನಾಡಿ, ಬೆಂಗಳೂರಿನಲ್ಲಿ ಅತಿವೃಷ್ಟಿಯಲ್ಲಿ ಲಾಭ ಇದೆ. ಬರದಲ್ಲೂ ಲಾಭ ಇದೆ. ಬೆಂಗಳೂರಿನಲ್ಲಿ ಮಳೆಗೂ ಬೆಳೆಗೂ ಏನು ಸಂಬಂಧ ಇಲ್ಲ. ಬೆಂಗಳೂರಿನಲ್ಲಿ ಮಳೆ ಜಸ್ತಿ ಬಂದರೂ ಬರದಿದ್ದರೂ ಬೆಳೆ ಇರುತ್ತದೆ ಎಂದರು.
ರಾಜ್ಯದ ಮೂರು ವಷದ ಸರ್ಕಾರದ ಅವಲೋಕನ ಮಾಡಿದಾಗ ಭ್ರಷಚಾರ ರಹಿತ ಆಡಳಿತ ಕೊಡಬಹುದು ಅನಿಸುತ್ತಿಲ್ಲ. ಡಿಕೆಶಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಬರಲಿ ಎಂದು ನಿರೀಕ್ಷೆ ಮಾಡುತ್ತೇವೆ. ಡಿಕೆಶಿ ಆದಾಯದಷೆ ರಾಜ್ಯದ ಆದಾಯವೂ ಅದೇ ರೀತಿ ಏರಿಕೆ ಆಗಲಿ. ನವ ಕರ್ನಾಟಕದ ನಿರ್ಮಾತೃ ಎಂಬ ಬಿರುದು ನಿಮಗೆ ಸಿಗುವಂತೆ ಆಗಲಿ. ಒಂದು ಕಡೆ ಆಲೂಗಡ್ಡೆ ಹಾಕಿ ಚಿನ್ನದ ಬೆಳೆ ತೆಗೆಯುವಂತೆ ರಾಜ್ಯದ ದೃಷ್ಟಿ ಯಿಂದಲೂ ಆಗಲಿ. ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ವಿದ್ಯೆ ಗೊತ್ತಿರುವ ಕಲಾವಿದರು ಇzರೆ. ಅದು ರಾಜ್ಯಕ್ಕೆ ಬಳಕೆ ಆಗಲಿ ಎಂದರು.

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಅಣ್ಣಾಮಲೈ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ನಾನು ಅನ್ನುವುದಿಲ್ಲ. ಅಣ್ಣಾಮಲೈ ಮಹತ್ವಾಕಾಂಕ್ಷಿ ಒಳ್ಳೆಯ ಮನುಷ.
ಮನುಷನ ಸಮರ್ಪಿಕ ಜೀವನದಿಂದ ಸಾರ್ಥಕತೆ ಬರುತ್ತದೆ ಅದೇ ರೀತಿ ಇzರೆ. ತಮಿಳು ನಾಡಲ್ಲಿ ಲಾಭ-ನಷದ ಲೆಕ್ಕಾಚಾರ ಹಾಕಿಲ್ಲ. ನಾವು ಲಾಭವನ್ನು ಗಳಿಸಿಲ್ಲ ಎಂದರೆ ನಷದ ಲೆಕ್ಕ ಹೇಗೆ? ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಎಷ ಮತ ಗಳಿಕೆ ಆಯ್ತು ಈ ಹಿಂದೆ ಎಷಗಿದೆ ಎಂಬ ವಿಮರ್ಶೆಗೆ ಹೋಗಲ್ಲ. ಅಣ್ಣಾ ಮಲೈಯ ಮೂಲಕ ದೇಶಕ್ಕೆ ರಾಜ್ಯಕ್ಕೆ ಒಳ್ಳೆದಾಗಲಿ. ದೇಶಭಕ್ತಿಯನ್ನು ಉಳಿಸಿಕೊಂಡು ರಾಜಕಾರಣ ಮಾಡುವುದಾದರೆ ನಾನು ಯಾಕೆ ಬೇಡ ಎನ್ನಲಿ ಎಂದರು.

