ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿ.ಹೆಚ್. ರಸ್ತೆಯುದ್ದಕ್ಕೂ ಡ್ರೈನೇಜ್‌ನಿಂದ ಹೊರತೆಗೆದ ಮಣ್ಣು ಗುಡ್ಡೆ; ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ…

Share Below Link

ರಾಕೇಶ್ ಡಿಸೋಜ -9482482182
ಶಿವಮೊಗ್ಗ, ವ ೧೨: ನಗರದ ಹೃದಯಭಾಗವೆಂದೇ ಪರಿಗಣಿಸ ಲ್ಪಡುವ ಬಿ.ಹೆಚ್. ರಸ್ತೆಯಲ್ಲಿ ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ಮಹಾನಗರ ಪಾಲಿಕೆ ಕೈಗೊಂಡಿರುವ ಡ್ರೈನ್ ಸ್ವಚ್ಚತಾ ಕಾರ್ಯ ಇದೀಗ ಸಾರ್ವ ಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ತಿಂಗಳುಗಳಿಂದ ಡ್ರೈನ್ ಒಳಗೆ ಶೇಖರಣೆಯಾಗಿದ್ದ ಮಣ್ಣು, ಪ್ಲಾಸ್ಟಿಕ್ ಹಾಗೂ ಕಸಕಡ್ಡಿಗಳನ್ನು ಹೊರತೆಗೆದು ಸ್ವಚ್ಚಗೊಳಿಸಿರುವುದು ಆರಂಭದಲ್ಲಿ ನಾಗರಿಕರಲ್ಲಿ ಸ್ವಲ್ಪಮಟ್ಟಿನ ನೆಮ್ಮದಿ ಮೂಡಿಸಿತ್ತಾದರೂ, ಕಾಮಗಾರಿ ನಡೆಸುತ್ತಿರುವ ರೀತಿ ನೋಡಿದರೆ ಇದೀಗ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವೈeನಿಕ ಕಾರ್ಯವೈಖರಿಯ ನಿದರ್ಶನವಾಗಿ ಪರಿಣಮಿಸಿದೆ.
ಕಳೆದ ಕೆಲ ದಿನಗಳಿಂದ ಸಮಾರೋಪಾದಿಯಲ್ಲಿ ಬಿ.ಹೆಚ್. ರಸ್ತೆಯ ಮಧ್ಯೆ ನಿರ್ಮಿಸಿರುವ ಡಿವೈಡರ್ ಕೆಳಗಿನ ಡ್ರೈನ್‌ಗಳಿಂದ ಮಣ್ಣು ಮತ್ತು ಕಸ ಹೊರತೆಗೆಯ ಲಾಗುತ್ತಿದ್ದು ಹೀಗೆ ಹೊರತೆಗೆದ ಮಣ್ಣು ಮತ್ತು ಕಸದ ರಾಶಿಗಳನ್ನು ತಕ್ಷಣವೇ ಸ್ಥಳಾಂತರಿಸ ಬೇಕಾಗಿದ್ದರೂ, ಅವನ್ನು ರಸ್ತೆ ಬದಿಯ ಗುಡ್ಡೆ ಹಾಕಿ ಬಿಟ್ಟಿರುವುದು ವಾಹನ ಸವಾರರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ವಾಗಿದೆ. ಬಿ.ಹೆಚ್. ರಸ್ತೆಯುದ್ದಕ್ಕೂ ರಾಶಿಯಾಗಿ ಬಿದ್ದಿರುವ ಮಣ್ಣು ನಗರದ ಸೌಂದರ್ಯದ ಜೊತೆಗೆ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ಅಪಘಾತ ಗಳಿಗೆ ಆಹ್ವಾನ ನೀಡುವಂತಾಗಿದೆ. ವಿಶೇಷವಾಗಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರಿಗೆ ಇದು ಜೀವಭಯ ಹುಟ್ಟಿಸುವ ಪರಿಸ್ಥಿತಿ ನಿರ್ಮಿಸಿದೆ.
ಇನ್ನೊಂದೆಡೆ ಕಳೆದ ಕೆಲವು ದಿನಗಳಿಂದ ನಗರದಲ್ಲಿ ಅನಿರೀಕ್ಷಿತ ಮಳೆಯಾಗತೊಡಗಿದ್ದು, ರಸ್ತೆ ಬದಿಯಲ್ಲಿ ಹಾಕಿರುವ ಮಣ್ಣು ಹಾಗೂ ಕಸ ಮತ್ತೆ ಡ್ರೈನ್ ಒಳಗೆ ಸೇರಿಬಿಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಕಾಲುವೆ ನೀರು ಸರಾಗವಾಗಿ ಹರಿಯದೇ ರಸ್ತೆಗಳಲ್ಲಿ ನೀರು ನಿಲ್ಲುವ ಆತಂಕ ಮತ್ತಷ್ಟು ಗಂಭೀರವಾಗಿದೆ. ಈಗಾಗಲೇ ಸ್ವಲ್ಪ ಮಳೆಯಾದರೂ ಬಿ.ಹೆಚ್. ರಸ್ತೆಯ ಇಕ್ಕೆಲಗಳಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಚ್ಚತಾ ಕಾರ್ಯದ ಬಳಿಕ ಹೊರತೆಗೆದ ತ್ಯಾಜ್ಯವನ್ನು ತೆರವು ಗೊಳಿಸದೇ ಅ ಬಿಟ್ಟು ಹೋಗಿರು ವುದು ಪಾಲಿಕೆಯ ಕಾರ್ಯವೈಖರಿ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ.
ಮಳೆಗಾಲಕ್ಕೂ ಮುನ್ನ ಡ್ರೈನ್ ಸ್ವಚ್ಚ ಮಾಡುವುದು ಒಳ್ಳೆಯ ಕೆಲಸ. ಆದರೆ ಹೊರತೆಗೆದ ಕಸವನ್ನು ರಸ್ತೆ ಬದಿಯ ಬಿಟ್ಟು ಹೋಗುವುದರಿಂದ ಏನು ಪ್ರಯೋಜನ? ಒಂದು ಮಳೆ ಬಂದರೆ ಮತ್ತೆ ಅದೇ ಕಸ ಕಾಲುವೆಗೆ ಸೇರಿ ಸಮಸ್ಯೆ ಮರುಕಳಿಸುವುದಿಲ್ಲವೇ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿzರೆ.
ನಗರದ ಅತ್ಯಂತ ಪ್ರಮುಖ ರಸ್ತೆಯ ಈ ರೀತಿಯ ಅವೈeನಿಕ ಹಾಗೂ ನಿರ್ಲಕ್ಷ್ಯಪೂರ್ಣ ಕಾಮಗಾರಿ ನಡೆಯುತ್ತಿರುವಾಗ, ನಗರದ ಒಳಭಾಗದ ಇತರ ಪ್ರದೇಶಗಳ ಪರಿಸ್ಥಿತಿ ಹೇಗಿರಬಹುದು ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೇವಲ ಕೆಲಸ ಮಾಡಿದ್ದೇವೆ ಎಂಬ ದಾಖಲೆಗಾಗಿ ಕಾಮಗಾರಿ ನಡೆಸದೇ, ಸಂಪೂರ್ಣ ಪ್ರಮಾಣದಲ್ಲಿ ಸ್ವಚ್ಚತಾ ಕಾರ್ಯ ಮುಗಿಸಿ ಹೊರತೆಗೆದ ಮಣ್ಣು ಮತ್ತು ಕಸವನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿzರೆ.
ನಿತ್ಯವೂ ಇದೇ ರಸ್ತೆಯಲ್ಲಿ ಓಡಾಡುವ ಶಾಸಕ ಎಸ್.ಎನ್. ಚನ್ನಬಸಪ್ಪನವರ ಕಣ್ಣಿಗೂ ಇದು ಕಾಣಿಸಲಿಲ್ಲವೇ ಅಥವಾ ಕಂಡರೂ ಈ ಕುರಿತು ಶಾಸಕರು ಕೂಡ ನಿರ್ಲಕ್ಷ್ಯ ತೋರಿದ್ದಾರೆಯೇ ಎಂಬುದು ಸಾರ್ವಜನಿಕರ ಅಸಮಾಧಾನ ಹೆಚ್ಚಲು ಕಾರಣವಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ನಗರದಲ್ಲಿ ನೀರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾದರೆ, ಅದರ ಹೊಣೆಗಾರಿಕೆ ಮಹಾನಗರ ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೇ ಬೀಳಲಿದೆ. ಪಾಲಿಕೆಯ ಅಸಮರ್ಪಕ ಕಾಮಗಾರಿಗಳಿಂದ ಸಮಸ್ಯೆ ಪರಿಹಾರವಾಗುವ ಬದಲು ಮತ್ತಷ್ಟು ಗಂಭೀರವಾಗುವ ಭೀತಿ ಇದೀಗ ನಾಗರಿಕರಲ್ಲಿ ಮನೆಮಾಡಿದೆ.

Leave a Reply

Your email address will not be published. Required fields are marked *