ಜೂ.೯:ಪ್ರೊ ಬಿ.ಕೃಷ್ಣಪ್ಪ ರವರ ೮೯ನೇ ಜನ್ಮ ದಿನಾಚರಣೆ …
ಶಿಕಾರಿಪುರ ,ಜೂ.೬: ಕರ್ನಾ ಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ ಬಿ.ಕೃಷ್ಣಪ್ಪರವರ ೮೯ನೇ ಜನ್ಮ ದಿನಾಚರಣೆ ಜೂ.೯ ರಂದು ಶಿವಮೊಗ್ಗದ ಸರ್ಕಾರಿ ನೌಕ ರರ ಭವನದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗು ತ್ತಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಜನತೆ ಪಾಲ್ಗೊಂಡು ಯಶಸ್ವಿಗೊಳಿ ಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾ.ಶಾಖೆಯ ಸಂಚಾಲಕ ಜಗದೀಶ್ ಚುರ್ಚು ಗುಂಡಿ ತಿಳಿಸಿದರು.

ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು,ಡಾ.ಅಬೇಂಡ್ಕರ್ ನಂತರದಲ್ಲಿ ದಲಿತ ಚಳುವಳಿಯನ್ನು ಹುಟ್ಟುಹಾಕಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಪ್ರೊ.ಕೃಷ್ಣಪ್ಪ ಕೊಡುಗೆ ಅಪಾರವಾಗಿದೆ ಎಂದರು. ೧೯೭೪-೭೫ ರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿ ರಾಜ್ಯದ ಮೂಲೆಮೂಲೆ ಯಲ್ಲಿ ಸಂಚರಿಸಿ ಸಂಘಟನೆಯನ್ನು ಸದೃಡವಾಗಿಸಿದ ಅವರು ಸಮಾಜ ದಲ್ಲಿ ಅತ್ಯಂತ ಹೀನಾಯ ಸ್ಥಿತಿಯ ಲ್ಲಿದ್ದ ದಲಿತರಿಗೆ ಕಾನೂನು ಮೂಲಕ ಹಕ್ಕು ದೊರಕಿಸಿಕೊಡು ವಲ್ಲಿ ಹಲವು ಚಳುವಳಿ ಹೋರಾ ಟದ ಮೂಲಕ ಪ್ರಾಮಾಣಿಕವಾಗಿ ಶ್ರಮಿಸಿ ನ್ಯಾಯ ದೊರಕಿಸಿಕೊಟ್ಟಿ zರೆ ಎಂದು ತಿಳಿಸಿದರು.

ದಲಿತರ ಪ್ರಾಣ-ಮಾನಹರಣ ಮಾಡಿದವರಿಗೆ ಹಾಗೂ ಸಾಮಾಜಿಕ ಬಹಿಷ್ಕಾರ ಹಾಕಿದವರ ವಿರುದ್ದ ಹೋರಾಡಿ ಕಾನೂನಿನಡಿ ಶಿಕ್ಷೆ ದೊರಕಿಸಿಕೊಡಲು ಕೃಷ್ಣಪ್ಪನವರ ಹೋರಾಟ ಬಹು ಮುಖ್ಯ ವಾಗಿದ್ದು, ೧೯೭೭ ರಲ್ಲಿ ಭದ್ರಾವತಿ ತಾಲೂಕಿನ ಸಿದ್ಲಿಪುರ ಗ್ರಾಮದಲ್ಲಿ ಸತತ ೧.೫ ವರ್ಷ ನಡೆದ ಭೂ ಹೋರಾಟದ ಪರಿಣಾಮ ಕಡುಬಡತನದ ಬೇಗೆಯಿಂದ ಕಷ್ಠ ಪರಿಹಾರಕ್ಕಾಗಿ ಪರಬಾರೆ ಮಾಡಿದ ಭೂಮಿಯನ್ನು ಯಾವುದೇ ದಲಿತ ರಿಂದ ಖರೀದಿಸಿದಲ್ಲಿ ವಾಪಾಸ್ ದೊರಕಿಸಿಕೊಡುವಂತೆ ಭೂ ಪರಬಾರೆ ನಿಷೇಧ (ಪಿಟಿಸಿಎಲ್) ಕಾಯ್ದೆ ಜರಿಗೆ ಕೃಷ್ಣಪ್ಪ ನವರ ಹೋರಾಟ ಕಾರಣವಾಗಿದೆ ಎಂದ ಅವರು,ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಅಮಾನವೀಯ ಬೆತ್ತಲೆ ಸೇವೆ ವಿರುದ್ದ ಪ್ರಾಣ ಪಣವಾಗಿಟ್ಟು ಹೋರಾಡಿದ ಪ್ರತಿಫಲವಾಗಿ ೧೯೮೬ ರಲ್ಲಿ ಬೆತ್ತಲೆ ಸೇವೆ ನಿಷೇದ ಕಾಯ್ದೆ ಜರಿಯಾಗಿದೆ ಎಂದರು.

ಅತ್ಯಂತ ಅಪರೂಪದ ಧೀಮಂತ ವ್ಯಕ್ತಿ ಪ್ರೊ.ಕೃಷ್ಣಪ್ಪನವರ ದ್ಯೇಯೋzಶಗಳು ಸಮಾಜಕ್ಕೆ ಸದಾ ಕಾಲ ಅಗತ್ಯವಾಗಿದ್ದು ಅವರ ಬದುಕಿನ ಸಂದೇಶಗಳನ್ನು ಮುಂದು ವರಿಸಿಕೊಂಡು ಹೋಗುವ ಉzಶ ದಿಂದ ಇದೇ ಜೂ.೯ ರಂದು ಶಿವ ಮೊಗ್ಗದ ಜಿ ಸರ್ಕಾರಿ ನೌಕರರ ಭವನದಲ್ಲಿ ಪ್ರೊ ಬಿ ಕೃಷ್ಣಪ್ಪರವರ ೮೯ ನೇ ಜನ್ಮದಿನಾಚರಣೆಯನ್ನು ರಾಜ್ಯ ಸಂಚಾಲಕ ಎಂ.ಗುರು ಮೂರ್ತಿ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾ ಗಿದ್ದು ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿಯ ತಾ. ಸಂಚಾಲಕ ಈಸೂರು ಪರಮೇಶ್, ಕುಮಾರ್,ಹನುಮಂತಪ್ಪ, ಸುರಗೀಹಳ್ಳಿ ಮಂಜುನಾಥ್, ಪರಶುರಾಮ, ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

