ಪಕ್ಷ ಬಲವರ್ಧನೆಗೆ ಶ್ರಮಿಸಿ: ತೀರ್ಥಯ್ಯ
ಭದ್ರಾವತಿ: ನಗರ ಮತ್ತು ಗ್ರಾಮಾಂತರ ಓಬಿಸಿ ಮೋರ್ಚಾಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಮನವಿ ಮಾಡಿದರು.

ನಗರ ಹಾಗೂ ಗ್ರಾಮಾಂತರ ಮಂಡಲಗಳ ಓಬಿಸಿ ಮೋರ್ಚಾ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯ ಕಾರಿಣಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪಕ್ಷ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದು, ಕೇಂದ್ರ ಸರ್ಕಾರ ಹಲವಾರು ಯೋಜನೆ ಗಳನ್ನು ವಿಶೇಷವಾಗಿ ದಲಿತ ಹಾಗು ಹಿಂದುಳಿದ ವರ್ಗಗಳಿಗಾಗಿ ಜರಿಗೊಳಿಸಿದೆ. ಇವುಗಳ ಸದ್ಬಳಕೆ ಕುರಿತು ಜನರಿಗೆ ಅರಿವು ಮೂಡಿ ಸುವ ಜೊತೆಗೆ ಪಕ್ಷ ಸಂಘಟನೆಗೆ ಕೈಜೋಡಿಸಬೇಕೆಂದರು.
ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಬಿಜೆಪಿ ಪಕ್ಷ ಸರ್ವವ್ಯಾಪಿ- ಸರ್ವಸ್ಪರ್ಶಿ ತತ್ವದಡಿ ಜತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಯನ್ನು ಬಲಪಡಿಸುತ್ತಿದೆ. ಜಿಯಿಂದ ದೊರೆಯುವ ಮಾರ್ಗದರ್ಶನ ದಂತೆ ಓಬಿಸಿ ಮೋರ್ಚಾ ಅಚ್ಚು ಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ಪದಾಧಿಕಾರಿಯೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದರು.
ಬಿಜೆಪಿ ಓಬಿಸಿ ಮೋರ್ಚಾ ಜಿಧ್ಯಕ್ಷ ಕೆ.ಎನ್ ಸುಧಾಕರ್ ಅವರ ಮಾರ್ಗದರ್ಶನದಲ್ಲಿ ನೂತನವಾಗಿ ಜವಾಬ್ದಾರಿ ಸ್ವೀಕರಿಸಿದ ನಗರ ಓಬಿಸಿ ಮೋರ್ಚಾ ಅಧ್ಯಕ್ಷ ರಾಜಶೇಖರ್ ಉಪ್ಪಾರ್ ಹಾಗೂ ಗ್ರಾಮಾಂತರ ಓಬಿಸಿ ಮೋರ್ಚಾ ಅಧ್ಯಕ್ಷ ತೀರ್ಥಪ್ಪರವರ ನೇತೃತ್ವದಲ್ಲಿ ಪದಗ್ರಹಣ ನೆರವೇರಿತು.
ನಗರ ಮಂಡಲ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಳಾಗಿ ಮಂಜುನಾಥ್ ಆಚಾರ್ ಹಾಗೂ ಪಚ್ಚಿಯಪ್ಪ, ಗ್ರಾಮಾಂತರ ಮಂಡಲ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ್ ಮತ್ತು ಶ್ರೀನಿವಾಸ್ ಜವಾಬ್ದಾರಿ ಸ್ವೀಕರಿಸಿದರು.
ಜಿ ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ಎನ್. ಸುಧಾಕರ್, ಪ್ರಮುಖರಾದ ರಘುರಾವ್, ಮೊಸರಹಳ್ಳಿ ಅಣ್ಣಪ್ಪ, ಹನುಮಂತ ನಾಯ್ಕ, ಸರಸ್ವತಿ, ಸುರೇಶಪ್ಪ, ಲೋಕೇಶ್ ಭಗಣಿಕಟ್ಟೆ, ಪ್ರಶಾಂತ್, ಮಮತಾ ರೆಡ್ಡಿ, ಲೋಕೇಶ್, ರೇಖಾ ಬೋಸ್ಲೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

