ಸೇವಾ ಮನೋಭಾವವೇ ಷಡಾಕ್ಷರಿಯವರ ಯಶಸ್ಸಿನ ಮೂಲ…
ಶಿವಮೊಗ್ಗ, ಜು. ೨೪: ಗ್ರಾಮೀಣ ಹಿನ್ನೆಲೆಯಿಂದ ರಾಜ್ಯ ಮಟ್ಟದ ನಾಯಕತ್ವದವರೆಗೆ ಬೆಳೆಯಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರಲ್ಲಿದ್ದ ಬದ್ಧತೆ, ಪ್ರಾಮಾಣಿಕತೆ, ನಿರಂತರ ಪರಿಶ್ರಮ ಮತ್ತು ಸೇವಾ ಮನೋಭಾವವೇ ಪ್ರಮುಖ ಕಾರಣ ಎಂದು ಹಿರಿಯ ವಕೀಲ ಕೆ. ಬಸಪ್ಪ ಗೌಡ ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಸಿ.ಎಸ್. ಷಡಾಕ್ಷರಿ ಅಭಿಮಾನಿ ಬಳಗದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸೇವಾ ವಿಕಾಸ ಕೇಂದ್ರದಲ್ಲಿ ಅವರ ೪೭ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಮಾಜಮುಖಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಇಲಾಖೆಯಲ್ಲಿ ಸಾಮಾನ್ಯ ನೌಕರರಾಗಿ ಸೇವೆ ಆರಂಭಿಸಿ ರಾಜಧ್ಯಕ್ಷ ಸ್ಥಾನಕ್ಕೇರಿರುವುದು ಅಪರೂಪದ ಸಾಧನೆ. ಸಮಾಜದ ಬಗ್ಗೆ ಕಾಳಜಿ ಹೊಂದಿರುವವರಿಗೆ ನಾಯಕತ್ವ ಸಹಜವಾಗಿ ದೊರೆಯುತ್ತದೆ. ಸರ್ಕಾರಿ ನೌಕರರಷ್ಟೇ ಅಲ್ಲದೆ, ಸಮಾಜದ ಎಲ್ಲ ವರ್ಗಗಳ ವಿಶ್ವಾಸಾರ್ಹ ನಾಯಕರಾಗಿ ಷಡಾಕ್ಷರಿ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು.
ರೈತ ಸಂಘದ ರಾಜಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಮಾತನಾಡಿ, ಹಿಂದಿನ ನಾಯಕರು ಸರ್ಕಾರದೊಂದಿಗೆ ಸಂಘರ್ಷದ ಮೂಲಕ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಿದರೆ, ಷಡಾಕ್ಷರಿಯವರು ಸಂವಾದ ಮತ್ತು ಸೌಹಾರ್ದಯುತ ಸಂಬಂಧಗಳ ಮೂಲಕ ನೌಕರರ ಬೇಡಿಕೆಗಳನ್ನು ಸಮರ್ಥವಾಗಿ ಈಡೇರಿಸುವಲ್ಲಿ ಯಶಸ್ವಿ ಯಾಗಿzರೆ ಎಂದು ಪ್ರಶಂಸಿಸಿದರು.
ಸಂಘಟನೆ, ಬದ್ಧತೆ, ದೂರದೃಷ್ಟಿ ಮತ್ತು ಜಣ್ಮೆ ನಾಯಕತ್ವದ ಪ್ರಮುಖ ಗುಣಗಳು. ಕುಟುಂಬಕ್ಕಿಂತ ಸಂಘಟನೆಯ ಹಿತವನ್ನೇ ಆದ್ಯತೆಯಾಗಿ ಪರಿಗಣಿಸಿ ನಿರಂತರವಾಗಿ ಕಾರ್ಯನಿರ್ವಹಿಸಿರುವುದರಿಂದ ಸಾವಿರಾರು ನೌಕರರು ಹಾಗೂ ಅಭಿಮಾನಿಗಳ ವಿಶ್ವಾಸವನ್ನು ಗಳಿಸಿzರೆ ಎಂದು ಹೇಳಿದರು.
ಜನ್ಮದಿನದ ಅಂಗವಾಗಿ ಜಿಯ ವಿವಿಧೆಡೆ ಸಮಾಜಮುಖಿ ಕಾರ್ಯ ಕ್ರಮಗಳು ಅರ್ಥಪೂರ್ಣ ವಾಗಿ ನಡೆದವು. ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೃದ್ಧಾಶ್ರಮ ದಲ್ಲಿ ವಿಶೇಷ ಪೂಜೆ ನೆರವೇರಿಸಿ ಹಣ್ಣುಗಳನ್ನು ವಿತರಿಸಲಾಯಿತು. ಯಡಿಯೂರಪ್ಪ ಉಚಿತ ವಿದ್ಯಾರ್ಥಿ ನಿಲಯದ ಆವರಣ ದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಲಾಯಿತು.

ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಹಾಯಕರು ಹಾಗೂ ಕುಟುಂಬಸ್ಥರಿಗೆ ದೇಶೀಯ ದರ್ಶಿನಿಯ ಅವಿನಾಶ್ ಬಿದರೆ ಅವರ ಸಹಯೋಗದಲ್ಲಿ ಅನ್ನದಾಸೋಹ ಏರ್ಪಡಿಸಲಾಯಿತು. ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ, ಶಿವಮೊಗ್ಗ ವತಿಯಿಂದ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ವಿಶೇಷ ಸೇವಾ ಕಾರ್ಯಕ್ರಮ ಆಯೋಜಿಸಿ, ಮಕ್ಕಳಿಗೆ ಸಿಹಿತಿಂಡಿ ಹಾಗೂ ಹಣ್ಣುಗಳನ್ನು ವಿತರಿಸಿ ಅವರೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳಲಾಯಿತು.
ಸ್ವಯಂಪ್ರೇರಿತರಾಗಿ ಸಹಸ್ರಾರು ಅಭಿಮಾನಿಗಳು ಆಗಮಿಸಿ ಷಡಾಕ್ಷರಿಗೆ ಜನ್ಮದಿನದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಮೋಹನ್ ಕುಮಾರ್, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಡಿಎಸ್‌ಎಸ್ ಗುರುಮೂರ್ತಿ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ, ಪ್ರಮುಖರಾದ ಡಾ. ವಾಣಿ ಕೋರಿ, ಸತೀಶ್ ಕುಮಾರ್ ಶೆಟ್ಟಿ, ಮ.ಸ. ನಂಜುಂಡಸ್ವಾಮಿ, ಮಹೇಶ್ವರಪ್ಪ, ಷಡಾಕ್ಷರಿ ಅವರ ತಾಯಿ ಬೋರಾಂಬಿಕಾ, ಪತ್ನಿ ಬೇಬಿ ಮತ್ತು ಮಕ್ಕಳು, ಬಳ್ಳೆಕೆರೆ ಸಂತೋಷ್, ಆರ್. ಪಾಪಣ್ಣ ಸೇರಿದಂತೆ ಗಣ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.

