ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಐತಿಹಾಸಿಕ ಪ್ರಾಚೀನ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ….

Share Below Link

ಶಿವಮೊಗ್ಗದ ತುಂಗಾ ತೀರದ ಬಿ.ಬಿ. ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯವು ಪ್ರಾಚೀನ ಹಾಗೂ ಐತಿಹಾಸಿಕ ಹಿನ್ನೆಲೆ ಇರುವ ಕಾರಣಿಕ ದೇವಾಲಯವಾಗಿದೆ.
ಸುಮಾರು ೭೦೦ ರಿಂದ ೮೦೦ ವರ್ಷಗಳ ಹಿಂದೆ ಸಾಗರದಲ್ಲಿರುವ ನೀಚಡಿ ಗ್ರಾಮದಲ್ಲಿ ನೆಲೆಸಿದ್ದ ಲಕ್ಷ್ಮಿ ನಾರಾಯಣ ಸ್ವಾಮಿ ದೇವರ ಸುಂದರ ವಿಗ್ರಹವು ಕೆಳದಿ ಅರಸರ ಕಾಲದಲ್ಲಿ ಬಿದನೂರಿಗೆ ಸ್ಥಳಾಂತರ ವಾಗಿದ್ದು, ತದನಂತರ ನಾಯಕರ ಕಾಲದಲ್ಲಿ ಶಿವಮೊಗ್ಗದ ತುಂಗಾ ತೀರದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಯನ್ನು ಕಾರ್ತಿಕ ಬಹುಳ ಪಂಚಮಿಯಂದು ಪ್ರತಿಷ್ಠಾಪಿ ಸಲಾಯಿತು. ಹೀಗಾಗಿ ಪ್ರತಿ ವರ್ಷ ಕಾರ್ತಿಕ ಬಹುಳ ಪಂಚಮಿಯ ದಿನದಂದು ವಾರ್ಷಿಕ ಪ್ರತಿಷ್ಠಾಪನಾ ದಿನವಾಗಿ ಆರಾಧನೆ ಮಾಡಲಾ ಗುತ್ತದೆ. ಇಲ್ಲಿರುವ ಲಕ್ಷ್ಮೀನಾರಾಯಣ ಸ್ವಾಮಿ ಯ ವಿಗ್ರಹವು ಅತಿ ಸುಂದರವಾಗಿಯೂ ಮೋಹಕ ರೂಪದ ಪ್ರಸನ್ನವದನನಾಗಿ ಕಂಗೊಳಿಸುವಂತಿದೆ.
ಚತುರ್ಭುಜದಾರಿಯಾದ ಲಕ್ಷ್ಮಿ ನಾರಾಯಣ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ನಿರ್ಮಾಣಗೊಂಡಿದ್ದು ಮೇಲ್ಗಡೆ ಬಲಗೈಯಲ್ಲಿ ಪುಷ್ಪವನ್ನು ಕೆಳಗಿನ ಬಲ ಕೈಯಲ್ಲಿ ಶಂಖವನ್ನು ಹಾಗೂ ಮೇಲ್ಗಡೆ ಎಡಗೈಯಲ್ಲಿ ಗದೆಯನ್ನು ಕೆಳಗಿನ ಎಡಗೈಯಲ್ಲಿ ಚಕ್ರವನ್ನು ಧರಿಸಿzನೆ.ಎಡತೊಡೆಯ ಮೇಲೆ ಕುಳಿತಿರುವ ಲಕ್ಷ್ಮೀದೇವಿಯು ನಾರಾಯಣಸ್ವಾಮಿಯನ್ನು ಬಲಗೈಯಿಂದ ಹಿಡಿದು ಎಡಗೈಯಲ್ಲಿ ಮಾಫಲ ವನ್ನು ಹಿಡಿದುಕೊಂಡು ತನ್ಮಯತೆ ಯಿಂದ ನಾರಾಯಣಸ್ವಾಮಿಯನ್ನು ನೋಡುವ ಭಂಗಿಯಲ್ಲಿದೆ.
ಲಕ್ಷ್ಮೀನಾರಾಯಣ ಸ್ವಾಮಿಯ ಪ್ರಭಾವಳಿ ಯಲ್ಲಿ ದಶಾವತಾರದ ಸುಂದರವಾದ ಕೆತ್ತನೆ ಮನಮೋಹಕವಾಗಿದೆ. ನಾಲ್ಕು ವರೆ ಅಡಿಯ ಈ ಸ್ವಾಮಿಯು ಗರುಡಪೀಠದ ಮೇಲೆ ಕುಳಿತಿದ್ದು ಗರುಡ ದೇವನು ಲಕ್ಷ್ಮೀನಾರಾಯಣ ಸ್ವಾಮಿ ಯನ್ನು ಭಕ್ತಿಭಾವದಿಂದ ಹೊತ್ತಿರುವಂತಿದೆ.
ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ನಮ್ಮ ಎಡ ಭಾಗದಲ್ಲಿ ಲಕ್ಷ್ಮಿನರಸಿಂಹ ಸ್ವಾಮಿಯ ಗುಡಿ ಇದೆ. ನರಸಿಂಹದೇವರು ಲಕ್ಷ್ಮಿಯನ್ನು ತನ್ನ ಎಡತೊಡೆಯ ಮೇಲೆ ಕೂರಿಸಿಕೊಂಡಿದ್ದು ಚತುರ್ಭುಜದಾರಿಯಾಗಿ ಬಲಗೈಯಲ್ಲಿ ಪುಷ್ಪವನ್ನು ಕೆಳಗಡೆಯ ಬಲಗೈಯಲ್ಲಿ ಚಕ್ರವನ್ನು ಹಾಗೂ ಮೇಲ್ಗಡೆಯ ಎಡಗೈಯಲ್ಲಿ ಗದೆಯನ್ನು ಹಾಗೂ ಕೆಳಗಡೆಯ ಎಡಗೈಯಲ್ಲಿ ಶಂಖವನ್ನು ಧರಿಸಿzನೆ.
ನರಸಿಂಹ ದೇವರ ಎಡತೊಡೆಯ ಮೇಲೆ ಕುಳಿತ ಲಕ್ಷ್ಮಿದೇವಿಯು ಎಡಗೈಯಲ್ಲಿ ಮಾಫಲ ವನ್ನು ಹಿಡಿದುಕೊಂಡು ಬಲಗೈಯಿಂದ ನರಸಿಂಹ ಸ್ವಾಮಿಯನ್ನು ಹಿಡಿದುಕೊಂಡಿದ್ದು ಪ್ರಭಾವಳಿಯಲ್ಲಿ ದಶಾವತಾರದ ಸುಂದರ ಕೆತ್ತನೆ ಇದೆ .
ಇಲ್ಲಿರುವ ಲಕ್ಷ್ಮೀನಾರಾಯಣ ಸ್ವಾಮಿಯ ಹಾಗೂ ಲಕ್ಷ್ಮೀನರಸಿಂಹ ದೇವರ ವಿಗ್ರಹಗಳ ಕೆತ್ತನೆಯಲ್ಲಿ ಬಹಳಷ್ಟು ಸಾಮ್ಯತೆ ಇರುವುದನ್ನು ಗಮನಿಸಬಹುದಾಗಿದೆ.


ಇಲ್ಲಿರುವ ಲಕ್ಷ್ಮೀನಾರಾಯಣ ಸ್ವಾಮಿ ಯನ್ನು ನೋಡುತಲಿದ್ದರೇ ಬೇಲೂರು ನಲ್ಲಿರುವ ಚನ್ನಕೇಶವ ದೇವರಮೂರ್ತಿಯನ್ನು ನೋಡಿದ ಅನುಭವವಾಗುತ್ತದೆ. ಇಲ್ಲಿನ ದೇವಾಲಯದ ಕುರಿತು ಇತಿಹಾಸ ಸ್ಪಷ್ಟವಾಗಿ ದಾಖಲಾಗದಿದ್ದರೂ ದೇವರ ವಿಗ್ರಹ , ಕಲ್ಲಿನ ಕಂಬಗಳು, ಕೆತ್ತನೆಗಳು, ದೇವಾಲಯದ ಪ್ರಾಚೀನತೆಯನ್ನು ಹಾಗೂ ಹೊಯ್ಸಳ ಮತ್ತು ಕೆಳದಿ ಅರಸರ ಶಿಲ್ಪಕಲೆಗೆ ಹೊಂದಿಕೆ ತರುತ್ತದೆ.
ಇಲ್ಲಿರುವ ಲಕ್ಷ್ಮೀನರಸಿಂಹ ದೇವರ ವಿಗ್ರಹವು ಸುಮಾರು ೮೦ ರಿಂದ ೯೦ ವರ್ಷಗಳ ಹಿಂದೆ ಬಿ. ಬಿ. ರಸ್ತೆಯಲ್ಲಿ ವಾಸವಾಗಿದ್ದ ಸುಂದರಂ ಅಯ್ಯರ್‌ರವರು ತಮ್ಮ ಹರಕೆರೆ ಜಮೀನಿನಲ್ಲಿ ದೊರೆತ ಲಕ್ಷ್ಮಿ ನರಸಿಂಹ ದೇವರ ಮೂರ್ತಿ ಯನ್ನು ತಂದು ಈ ದೇವಸ್ಥಾನದಲ್ಲಿ ಸ್ಥಾಪಿಸಲಾ ಗಿತ್ತು.ನಂತರದಲ್ಲಿ ೨೦೨೨ರಲ್ಲಿ ಹರಿಹರಪುರದ ಶ್ರೀಗಳಿಂದ ಲಕ್ಷ್ಮೀನರಸಿಂಹ ದೇವರಮೂರ್ತಿ ಯನ್ನು ಪುನಃ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ.
ಶ್ರೀಲಕ್ಷ್ಮೀ ನಾರಾಯಣ ಸ್ವಾಮಿಯ ಗರ್ಭ ಗುಡಿಯನ್ನು ಪ್ರದಕ್ಷಣೆ ಮಾಡುವಾಗ ಗುಡಿಯ ಹಿಂಭಾಗದ ಗೋಡೆಯ ಗೂಡಿನಲ್ಲಿ ಸಿದ್ಧಿ ವಿನಾಯಕನ ಸುಂದರವಾದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಈ ಗಣಪತಿಯನ್ನು ಸಿದ್ಧಿ ವಿನಾಯಕ ಸ್ವಾಮಿ ಎಂದು ಕರೆಯಲಾಗಿದೆ. ಭಕ್ತರ ಪಾಲಿಗೆ ಇಷ್ಟಾರ್ಥಗಳನ್ನು ಸಿದ್ಧಿಸುವ ವಿನಾಯಕನೆಂಬ ಭಕ್ತಿ ಭಾವ ಅಚಲವಾಗಿ ಬೇರೂರಿದೆ.
ಲಕ್ಷ್ಮೀನಾರಾಯಣ ದೇವರ ಗರ್ಭ ಗುಡಿಯ ಹಿಂಭಾಗದಲ್ಲಿ ಸಂತಾನ ಗೋಪಾಲ ಕೃಷ್ಣನ ಪುಟ್ಟ ಗುಡಿಯಿದೆ. ಇಲ್ಲಿರುವ ಗೋಪಾಲಕೃಷ್ಣನ ವಿಗ್ರಹವು ಸುಮಾರು ೭೦ ರಿಂದ ೮೦ ವರ್ಷಗಳ ಹಿಂದೆ ಗೋಪಾಳ ದಲ್ಲಿರುವ ಆದಿ ರಂಗನಾಥ ಸ್ವಾಮಿಯ ದೇವಾಲಯದ ಗರುಡಗಂಬದ ಬಳಿ ಇದ್ದುದ್ದನ್ನು ಅಂದಿನ ಅರ್ಚಕರು ಈ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದ ರೆಂದು, ಈ ದೇವರಿಗೆ ಸಂತಾನ ಇಲ್ಲದವರು ಹರಕೆ ಹೊತ್ತುಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ .
ಗರ್ಭಗುಡಿಯ ಹಿಂಭಾಗದಲ್ಲಿ ಗಂಗಾ ಧರೇಶ್ವರನ ಗುಡಿ ಇದೆ ಹಿಂದೆ ಇದ್ದ ಗಂಗಾಧರೇಶ್ವರ ಅಮೃತಶಿಲೆಯ ಸ್ಥಳದಲ್ಲಿ ನರ್ಮದಾ ನದಿಯಿಂದ ತಂದ ಪವಿತ್ರ ಲಿಂಗ ವನ್ನು ೨೦೧೩ರಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ . ಲಕ್ಷ್ಮೀನಾರಾಯಣ ಸ್ವಾಮಿಯು ಕೆಳದಿ ಅರಸರಿಂದ ಪೂಜಿಸಲ್ಪಟ್ಟಿದ್ದು ನಂತರದ ಕಾಲದಲ್ಲಿ ಕಾಲ ಕಾಲಕ್ಕೆ ದೇವಾಲಯವನ್ನು ಅಭಿವೃದ್ಧಿ ಪಡಿಸುತ್ತ ಬರಲಾಗಿದೆ .
ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಅನೇಕಾನೇಕ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಭಕ್ತಾದಿಗಳ ಹಾಗೂ ಇಲ್ಲಿನ ಭಕ್ತ ಮಂಡಳಿಯವರಿಂದ ಮತ್ತು ಅರ್ಚಕರಾದ ವಿನಯ ಭಟ್ ರವರಿಂದ ನಡೆಸಿಕೊಂಡು ಬರಲಾಗುತ್ತಿದೆ.
ಪ್ರತಿವರ್ಷ ವೈಶಾಖ ಮಾಸ ಹುಣ್ಣಿಮೆಯ ದಿನ ನಡೆಯುವ , ಬ್ರಹ್ಮರಥೋತ್ಸವ, ಕಾರ್ತಿಕ ಮಾಸದಲ್ಲಿ ಪ್ರತಿ ನಿತ್ಯ ನಡೆಸುವ ದೀಪೋತ್ಸವ, ಮಾರ್ಗಶಿರದ ಶುದ್ಧ ಷಷ್ಠಿ ಕಡೇ ಕಾರ್ತಿಕ ದೀಪೋತ್ಸವ ನಾಗನಿಗೆ ಕುಂಭಾಭಿಷೇಕದಲ್ಲಿ ರಾತ್ರಿ ಪ್ರಾಕಾರೋತ್ಸವ ರಂಗಪೂಜೆ ಅಷ್ಟವಾಧಾನ ಸೇವೆ, ಜೊತೆಗೆ ವರ್ಷದಲ್ಲಿ ಬರುವ ಎ ಹಬ್ಬಗಳಲ್ಲೂ ಲಕ್ಷ್ಮೀ ನಾರಾಯಣ ಸ್ವಾಮಿಗೆ ಅಭ್ಯಂಜನ ಸ್ನಾನ ಪೂಜೆ ಹೀಗೆ ಅನೇಕ ಧಾರ್ಮಿಕ ಮಹೋತ್ಸವಗಳು ಶ್ರದ್ಧಾ ಭಕ್ತಿಯಿಂದ ನಡೆಸಲಾಗುತ್ತಿದೆ.
ಇದರಂತೆ ಲಕ್ಷ್ಮೀನರಸಿಂಹ ಸ್ವಾಮಿಯ ಪ್ರತಿಷ್ಠಾಪನೆಯಾದ ಮಾಘ ಶುದ್ಧ ತ್ರಯೋದಶಿಯ ಪ್ರಯುಕ್ತ ಪ್ರತಿ ವರ್ಷ ವೈಶಾಖ ಶುದ್ಧ ಚತುರ್ದಶಿಯಂದು ನರಸಿಂಹ ಜಯಂತಿಯನ್ನು ಮೂಲ ಮಂತ್ರ ಹವನ ಹಾಗೂ ಕಬ್ಬಿನ ಹಾಲಿನ ಪವಮಾನ ಅಭಿಷೇಕದಿಂದ ಬಹಳ ವಿಜೃಂಭಣೆಯಿಂದ ಶ್ರದ್ಧಾಭಕ್ತಿಯಿಂದ ನಡೆಸಲಾಗುತ್ತದೆ .
ಈ ದೇವಾಲಯದ ಮುಂದುಗಡೆ ಇರುವ ಏಕಶಿಲಾ ಗರುಡಗಂಬವು ಅತ್ಯಂತ ಪ್ರಾಚೀನ ವಾಗಿದ್ದು ಇದರಲ್ಲಿರುವ ಗರುಡ ಹಾಗೂ ಕೆತ್ತನೆಗಳು ಬಹಳ ವಿಶೇಷತೆಯನ್ನು ಪಡೆದಿದೆ. ಸುಮಾರು ೨೫ ರಿಂದ ೩೦ ಅಡಿ ಎತ್ತರವಿರುವ ಏಕಶಿಲೆಯ ಈ ಗರುಡಗಂಬದ ಹಿಂಭಾಗದಲ್ಲಿ ಹತ್ತಲು ಮೆಟ್ಟಲುಗಳಂತೆ ಮಾಡಿರುವುದು ಹಾಗೂ ಕಡೆ ಕಾರ್ತಿಕದಲ್ಲಿ ಈ ಗರುಡಗಂಬದ ಮೇಲೆ ಹಚ್ಚುವ ದೀಪ , ನೋಡುವುದೇ ವರ್ಣನಾತೀತ .
ಈ ಬಾರಿ ನಡೆಯುವ ನೂತನ ರಥ ಲೋಕಾರ್ಪಣೆ, ಬ್ರಹ್ಮ ರಥೋತ್ಸವ ಹಾಗೂ ನರಸಿಂಹ ಜಯಂತಿಯು ಭಕ್ತರ ಪಾಲಿಗೆ ಮಹತ್ವಪೂರ್ಣವಾಗಿದೆ. ಈ ಹಿಂದೆ ಮೂರು ದಿನಗಳು ನಡೆಯುತ್ತಿದ್ದ ರಥೋತ್ಸವವು ಈ ಬಾರಿ ಏಳು ದಿನಗಳ ಕಾಲ ನಡೆಯುವುದಕ್ಕು ಕಾರಣವಿದೆ.ಶಿಥಿಲವಾಗಿದ್ದ ರಥದ ಬದಲಿಗೆ ನೂತನ ರಥದ ಲೋಕಾರ್ಪಣೆ ಇರುವುದರಿಂದ ಈ ತಿಂಗಳು ದಿನಾಂಕ ೨೬-೪-೨೦೨೬ ರಿಂದ ದಿನಾಂಕ ೨ -೫-೨೦೨೬ ರವರೆಗೆ ಪ್ರತಿದಿನವೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಇದು ಭಕ್ತರ ಪಾಲಿಗೆ ಆಸ್ತಿಕರ ಪಾಲಿಗೆ ವಿಶೇಷ ಪೂರ್ಣವಾಗಿದೆ. ಈ ಎ ಈ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ತನು ಮನ ಧನದೊಂದಿಗೆ ಸಹಕರಿಸಿ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾಗಲು ಸದಾವಕಾಶವು ಒದಗಿ ಬಂದಿದೆ.
ಪ್ರಾಚೀನ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿಯ ದೇವಾಲಯವು ಆಸ್ತಿಕರ ಪಾಲಿಗೆ ಧಾರ್ಮಿಕ , ಸಾಂಸ್ಕೃತಿಕ ಹಾಗೂ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ .


ಮಾರ್ಪಳ್ಳಿ .ಆರ್.ಮಂಜುನಾಥ್ , ಮೊ.ನಂ.೯೯೦೦೨೫೬೦೮೩