ಜು. 29ರ ಬುಧವಾರ ಶ್ರೀ ಗುರುಪೂರ್ಣಿಮ…
ಗುರುಬ್ರಹ್ಮ, ಗುರುವಿಷ್ಣು ಗುರುದೇವೊ ಮಹೇಶ್ವರ|
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ||
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮೆಯನ್ನು ಆಚರಿಸುತ್ತಾರೆ. ವ್ಯಾಸರನ್ನು ನಾವು ಆದಿ ಗುರು ಎಂದೂ ಪೂಜಿಸುತ್ತೇವೆ. ಜು.೨೯ರ ಬುಧವಾರ ಗುರು ಸ್ಮರಣೆ ಪೂಜೆ ಮಾಡಬೇಕು. ಈ ದಿನ ಗುರುಗಳ ಪಾದ ಪೂಜೆ ಮಾಡಿ ಅವರಿಗೆ ಗುರು ದಕ್ಷಿಣೆ ಸಮರ್ಪಿಸಬೇಕು. ವ್ಯಾಸ ಮಹರ್ಷಿಗಳು ಪುನಃ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದರೆಂದು ನಂಬಲಾಗಿದೆ.
ನಿಜವಾದ ಗುರು ಯಾರು? ಇಂದು ಗುರು ಶಿಷ್ಯ ಸಂಬಂಧ ಹೇಗಿದೆ? ಹಿಂದೆ ಹೇಗಿತ್ತು? ಈಗ ಹೀಗೇಕಾಗಿದೆ. ಇದನ್ನು ಸರಿಪಡಿಸಲು ಏನು ಮಾಡಬೇಕು? ಎಂಬ ವಿಚಾರಗಳನ್ನು ಮಂಥನ ಮಾಡಿ ಗುರು ಸೇವಾ ತತ್ಪರರಾಗಬೇಕೆಂಬುದೇ ಈ ಲೇಖನದ ಉzಶ.
ಗುರು ಎಂದರೆ ಯಾರು :
ವಿದ್ಯಾದಾನ ಮಾಡುವವನು ಉಪಾಧ್ಯಾಯ, ಶಿಕ್ಷಕ ಉಪದೇಶಿಸು ವವನು ಎಂದರ್ಥ. ಗುರು ಎಂಬ ಪದದಲ್ಲಿನ ‘ಗು’ ಎಂಬ ಅಕ್ಷರಕ್ಕೆ ಅಂಧಕಾರವೆಂದೂ ‘ರು’ ಎಂಬುದಕ್ಕೆ ಅದನ್ನು ನಿರೋಧಿಸುವವನೆಂದು ಅರ್ಥೈಸುತ್ತಾರೆ. ಗುರು ಪೂಜೆ ಮಾಡದೇ ಯಾವ ಕಾರ್ಯವನ್ನು ಆರಂಭಿಸಬಾರದು. ತಂದೆಯನ್ನು, ಉಪನಯನ ಮಾಡಿದವನನ್ನು, ವಿದ್ಯಾದಾನ ಮಾಡಿದವನನ್ನು, ಅನ್ನದಾತನನ್ನು, ಭಯದಲ್ಲಿ ರಕ್ಷಿಸಿದವನನ್ನು, ಈ ಐವರನ್ನು ಗುರುಗಳೆಂದು ಪರಿಗಣಿಸುತ್ತಾರೆ.
ಪ್ರಾಚೀನ ಭಾರತದ ಶಿಕ್ಷಣ ಪದ್ದತಿ ಯಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಬರ ಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನೂ ನೀಡುತ್ತಿದ್ದನು. ಶಿಷ್ಯರು ತಮ್ಮ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ಇದ್ದು ವಿದ್ಯಾರ್ಜನೆ ಮಾಡುತ್ತಿದ್ದರು. ಆ ಗುರುಗಳ ಆಶ್ರಮ ದಲ್ಲಿದ್ದು, ಅವರ ಸೇವೆ ಮಾಡಿ ಅವರ ಮನೆಯ ಎಲ್ಲ ಕೆಲಸಗಳನ್ನು ಭಕ್ತಿಯಿಂದ, ಶ್ರzಯಿಂದ, ಶುದ್ಧ ಮನಸ್ಸಿನಿಂದ, ಸ್ವಾರ್ಥ ರಹಿತನಾಗಿ ಮಾಡಿ ಗುರುಕೃಪೆಗೆ ಪಾತ್ರನಾಗುತ್ತಿದ್ದನು. ಅಂಥ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದನು.
ಗುರು ಪೀಠ ಪರಂಪರೆಯ ಮಹತ್ವ ಇಂದಿಗೂ ಇದೆ. ಕಾಲ ಬದಲಾಗಿದೆ. ಹಿಂದಿನ ಗುರು-ಶಿಷ್ಯ ಸಂಬಂಧ ಈಗ ಉಳಿದಿಲ್ಲ. ಇದಕ್ಕೆ ಕಾರಣ ಧನ – ಅಧಿಕಾರಗಳೆರಡೇ ಕಾರಣ. ಆದರ್ಶ ಗುರು ಆದರ್ಶ ಶಿಷ್ಯ ಇಂದು ದುರ್ಲಭವಾಗಿದೆ.
ಗುರುವಿನ ಅವಶ್ಯಕತೆ:
ಎಲ್ಲ ಧಾರ್ಮಿಕ ಪಂಥಗಳಿಗೂ ಒಬ್ಬ ಗುರು ಇzನೆ. ಆ ಪಂಥ ಮುಂದು ವರೆಯಬೇಕಾದರೆ ಅವನ ಅವಶ್ಯವಿದೆ. ಸತ್ಯಸ್ವರೂಪದ ಮೂಲತತ್ವಗಳು ಧ್ಯಾನ ಅಥವಾ ಗ್ರಂಥಾವಲೋಕನದಿಂದಲೇ ಲಭಿಸಲಾರವೆಂಬುದು, ದೈವ ಪ್ರೇರಣೆಯ ಪರಂಪರೆಯ ಗುರು ಅಗತ್ಯವೆಂಬ ಭಾವನೆಯೂ ಇದಕ್ಕೆ ಮುಖ್ಯ ಕಾರಣ.
ಆದಿ ಗುರುವಿನಿಂದ ಪರಂಪರಾನುಗತವಾಗಿ ಮುಂದಿನ ಗುರುಗಳಿಗೆ ಹಸ್ತಗತವಾಗುತ್ತಾ ಬಂದಿರುವ ಆ ಸತ್ಯದರ್ಶನ ಕೇವಲ ಮಂತ್ರ ಪಠಣ ದಿಂದ ಲಭ್ಯವಾಗುತ್ತಿಲ್ಲ. ಅದು ಗುರು ಮುಖೇನ ಲಭಿಸಬೇಕು. ಗುರು ಅನುಗ್ರಹಿಸುವ ದೀಕ್ಷೆಯಿಂದ ಮಾತ್ರ ಸಾಧ್ಯ. ಧ್ಯಾನ ಮಾರ್ಗವು ಕಠಿಣವೂ ಮತ್ತು ದುರ್ಗಮವೂ ಆಗಿದೆ. ಅದಕ್ಕೆ ಪೂರ್ವಭಾಗಿಯಾಗಿ ಸಾಧಿಸಬೇಕಾದ ಶಾಂತಿ ಸಂಯಮಗಳು ಬೇಕು. ಅವುಗಳನ್ನು ಅನುಷ್ಠಾನಕ್ಕೆ ತರಲು ಸಮರ್ಥ ಗುರುವಿನ ನಿರ್ದೇಶನ ಬೇಕು. ಆದ್ದರಿಂದ ಯಾವುದೇ ಧರ್ಮದ ಅನುಷ್ಠಾನಕ್ಕೆ ಯೋಗ್ಯ ಆದರ್ಶ ಸತ್ಪರಂಪರೆ ರಕ್ಷಿಸಿ ಪೋಷಿಸಿಕೊಂಡು ಹೋಗಲು ಒಬ್ಬ ಗುರು ಬೇಕು.
ಗುರು ಪೂಜಾ ಕ್ರಮ:
ಇಂದು ಎಲ್ಲರ ಮನೆಯಲ್ಲಿಯೂ ಸಹ ಗುರು ಪೂಜೆ ಮಾಡಬೇಕು. ಮೊದಲು ಸ್ನಾನಾದಿ ನಿತ್ಯ ಕರ್ಮಾದಿಗಳನ್ನು ಮುಗಿಸಿ ‘ಗುರು ಪರಂಪರಾ ಸಿದ್ದಯರ್ಥಂ ವ್ಯಾಸ ಪೂಜಾಂ ಕರಿಷ್ಯೇ’ ಎಂದು ಮಾಡಿ, ಒಂದು ಶುಭ್ರವಸ್ತ್ರವನ್ನು ಹಾಸಿ, ಅದರ ಮೇಲೆ ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಗಂಧದಿಂದ ಹನ್ನೆರಡು ರೇಖೆಗಳನ್ನು ಎಳೆಯುತ್ತಾರೆ. ಇದುವೇ ವ್ಯಾಸಪೀಠ. ನಂತರ, ಬ್ರಹ್ಮ ಪರಾತ್ತರ ಶಕ್ತಿ, ವ್ಯಾಸ, ಶುಕದೇವ, ಶಂಕರಾಚಾರ್ಯ, ಯಾಜ್ಞವಲ್ಕ್ಯ, ಚಿದಂಬರಂ, ಶೇಷಾಚಲ, ಮೃತ್ಯುಂಜೇಶ್ವರ ಮತ್ತು ಅಭೀಷ್ಟ ಗುರು ಸಾಧು-ಸಂತರನ್ನು ಆ ಪೀಠದ ಮೇಲೆ ಆ ವಾಹನ ಮಾಡಿ ಅವರಿಗೆ ಷೋಡಶೋಪಚಾರಗಳಿಂದ ಪೂಜಿಸಿ ಧ್ಯಾನ ಮಾಡುತ್ತಾರೆ.
ಈ ದಿನ ದೀಕ್ಷಾಗುರು ಮತ್ತು ತಂದೆ-ತಾಯಿಯವರ ಪೂಜೆ ಮಾಡುವ ಪದ್ದತಿಯೂ ಇದೆ. ಗುರು ಪೂರ್ಣಿಮೆ ದಿನ ಗುರುತತ್ವವು ಬೇರೆ ಯಾವುದೇ ದಿನಕ್ಕಿಂತ ಒಂದು ಸಾವಿರ ಪಟ್ಟು ಅಧಿಕ ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಈ ದಿನ ಗುರುಗಳಿಗೆ ಸಲ್ಲಿಸಿದ ಸೇವೆ ಮಹತ್ವಪೂರ್ಣ ಹಾಗೂ ವಿಶಿಷ್ಟ, ಇದರಿಂದ ಗುರುಕೃಪೆಗೆ ಪಾತ್ರರಾಗುತ್ತೇವೆ.
ಗುರು ಪೂಜಾ ಕ್ರಮದಲ್ಲಿ ಇನ್ನೊಂದು ರೀತಿ ಇದೆ. ಕೆಲವು ಸಂದರ್ಭಗಳಲ್ಲಿ ಪ್ರತ್ಯಕ್ಷ ಮಾನವ ರೂಪಿ ಸಜೀವ ಗುರುವನ್ನೇ ಕೂಡಿಸಿ ಪೂಜಿಸುವುದು ಉಂಟು. ಅವರನ್ನು ಒಂದು ವಿಶಾಲವಾದ ಪೀಠದಲ್ಲಿ ಕೂಡಿಸಿ, ಪಾದ ಪೂಜೆ ಮಾಡಿ, ಅವರಿಗೆ ಆರತಿ ಮಾಡುವುದು, ಧೂಪ ಹಾಕುವುದು, ಮಂತ್ರ ಹೇಳುವುದು, ಶಿರ ಸಾಷ್ಟಾಂಗ ನಮಸ್ಕಾರ ಸಲ್ಲಿಸುವುದು, ಭಿಕ್ಷೆ ನೀಡುವುದು, ಮಂತ್ರ-ಪುಷ್ಪ ಮಾಡುವುದು, ಅವರಿಂದ ಫಲ ಮಂತ್ರಾಕ್ಷತೆ ಪಡೆಯುವುದು, ಪಾದ ತೊಳೆದ ನೀರನ್ನು ಭಕ್ತ ವೃಂದದವರು ತೀರ್ಥ ಎಂದು ಸೇವಿಸುವುದು.
ಭಾರತದಲ್ಲಿ ಇಂದಿಗೂ ಗುರುವೇ ದೇವರೆಂದು ಪೂಜಿಸುತ್ತಿರುವ ಅನೇಕ ಪಂಥಗಳಿವೆ. ಆದ್ದರಿಂದಲೇ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬುದು ಇಂದಿಗೂ ಸತ್ಯ.
ಈ ದಿನದ ಮಹತ್ವ ( ವೈಶಿಷ್ಟ್ಯ) :
ಗುರು ಪೂರ್ಣಿಮೆ ನಮ್ಮ ಜೀವನವನ್ನು ಸಾರ್ಥಕಗೊಳಿಸಿದ ಗುರುವನ್ನು ಸ್ಮರಿಸುವ ದಿನ. ನಮ್ಮ ವೇದಗಳು ಆಚಾರ್ಯ ದೇವೋಭವ ಎಂದು ಗುರುಗಳನ್ನು ಮನಸಾ ಗೌರವಿಸಿದ್ದಲ್ಲದೇ, ಅವರಿಗೆ ತಂದೆ- ತಾಯಿಗಳಿಗಿಂತ ಮಿಗಿಲಾದ ಸ್ಥಾನವನ್ನೂ ನೀಡಿದೆ. ಗುರು ಹೇಗಿರುವನು ಎಂಬ ತತ್ವ ಸಾರುವ ಒಂದು ಸುಭಾಷಿತ ಹೀಗಿದೆ.
ಅeನ ತಿಮಿರಾಂಧಸ್ಯ eನಾಂಜನ ಶಲಾಕಯಾ| ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ ||
ಇದರ ಅರ್ಥ , ಶಿಷ್ಯನ ಅeನ ವೆಂಬ ಕಣ್ಣು ಬೇನೆಯನ್ನು eನವೆಂಬ ಕಣ್ಣು ಬೇನೆಯನ್ನು eನವೆಂಬ ಅಂಜನದಿಂದ (ಕಡ್ಡಿಯಿಂದ) ಗುಣಪಡಿಸಿ, ಅವನ ಕೀರ್ತಿ ಎಡೆ ಪಸರಿಸುವಂತೆ ಮಾಡಿದ ಶ್ರೀ ಗುರುವಿಗೆ ಕೃತಜ್ಞತೆ ಅಥವಾ ನಮಸ್ಕಾರಗಳು. ಇಂಥ ಗುರುವಿಗೆ ವಂದಿಸಿ ನಾವು ಕಾರ್ಯೋನ್ಮುಖರಾದಾಗ ಬಾಳಿನಲ್ಲಿ ಸುಖ ಸಂಪತ್ತು ಖಚಿತ. ಹಿಂದೆ ಗುರು ಮುಂದೆ ಗುರಿ ಇzಗ ಮಾತ್ರ ಕಾರ್ಯಗಳಲ್ಲಿ ಯಶಸ್ಸು ನಿಶ್ಚಿತ. ದೇವರಿಗಿಂತ ಗುರು, ಗುರುವಿಗಿಂತ ಗುರುಕೃಪೆ ದೊಡ್ಡದು. ರಾಮ, ಕೃಷ್ಣರೂ ಸಹ ವಿಶಿಷ್ಠ ವಿಶ್ವಾಮಿತ್ರ ಸಾಂದೀಪನಿ ಗಳಂಥ ಗುರುಗಳ ಸೇವೆ ಮಾಡಿ ಫಲ ಪಡೆದವರು.
ಸ್ಕಾಂದ ಪುರಾಣದಲ್ಲಿ ಬರುವ ಗುರು ಗೀತೆಯಲ್ಲಿ ಪ್ರಶಾಂತ ನಂದಾ ದೀಪದ ಮತೆ eನ ಪ್ರಕಾಶ ಬಿತ್ತರಿಸುವ ಸದ್ಗುರುವಿನ ಮಹಿಮೆಯನ್ನು ವಿಸ್ತಾರವಾಗಿ ಉಖಿಸಿದೆ.
ಸಂತಶ್ರೇಷ್ಠ ಕಬೀರದಾಸರು ದೇವರಿಗಿಂತ ಗುರುವೇ ಶ್ರೇಷ್ಠ. ಏಕೆಂದರೆ ದೇವರ ಮಹಿಮೆಯ ಪರಿಚಯ ಮಾಡಿಸಿದವನೇ ಗುರು ಎಂದು ಹೇಳಿದ್ದು ಮಾರ್ಮಿಕವಾಗಿದೆ. ಗುರು ಬಯಸುವದಾದರೂ ಏನು? ಶಿಷ್ಯರು ಸಾಕಷ್ಟು ವಿದ್ಯೆ ಕಲಿಯಲಿ, ನನ್ನಿಂದ ಕಲಿತ ವಿದ್ಯೆಯಿಂದ ಅವರ ಬದುಕು ಶುದ್ಧ ಬಂಗಾರದಂತಾಗಲಿ, ಅವರ ಕೀರ್ತಿ ದಿಗಂತದಾಚೆಗೆ ಪಸರಿಸಲಿ. ಗುರುವಿಗಿಂತ ಮಿಗಿಲಾದ ತತ್ವ ತಪಸ್ಸು ಬೇರೊಂದಿಲ್ಲ. ಈ ರೀತಿಯ ಗುರು-ಶಿಷ್ಯರ ಪ್ರೀತಿ ಭಾರತೀಯ ಸಂಸ್ಕೃತಿಯ ಆದರ್ಶ ಇಂಥ ಗುರುವಿಗೆ ಮುಗಿಲಾದ ತತ್ವ ತಪಸ್ಸು ಬೇರೊಂದಿಲ್ಲ.
ಈ ರೀತಿಯ ಗುರು-ಶಿಷ್ಯ ಪ್ರೀತಿ ಭಾರತೀಯ ಸಂಸ್ಕೃತಿಯ ಆದರ್ಶ. ಇಂಥ ಗುರುವಿಗೆ ವರ್ಷಕ್ಕೊಮ್ಮೆ ಅಭಿನಂದನೆ ಸಲ್ಲಿಸುವುದೇ ಗುರು ಪೌರ್ಣಿಮೆ. ಸಂದೇಶ ಗುರುವಿನ ಮಹತ್ವ ಸಾರುವ ಅಮೃತ ಸಮಾನ ಶಬ್ದಗಳು ಕೆಳಗಿನಂತಿವೆ.
ಗುರು ಶಿಷ್ಯನ ಅeನವನ್ನು ಹೋಗಲಾಡಿಸಿ ಅವನ ಆಧ್ಯಾತ್ಮಿಕ ಉನ್ನತಿಗಾಗಿ ಅವನಿಗೆ ಸಾಧನೆಯನ್ನು ಹೇಳುತ್ತಾರೆಯೋ ಅವರನ್ನು ಗುರು ಅನ್ನುತ್ತಾರೆ. ಗುರುಗಳು ಶಿವದಿಶೆಯಲ್ಲಿ ಇರುವುದರಿಂದ ಅವರಿಗೆ ತಾನಾಗಿಯೇ ಶಿಷ್ಯನ ನೆನಪು ಆಗುವುದಿಲ್ಲ. ಆದರೆ ಶಿಷ್ಯನು ಗುರುಗಳನ್ನು ನೆನೆದರೆ ಬಿಂಬ ಪ್ರತಿಬಿಂಬ ನ್ಯಾಯದಂತೆ ಗುರುಗಳಿಗೆ ಶಿಷ್ಯನ ನೆನಪಾಗುತ್ತದೆ.
ಗುರುಗಳ ಕೃಪಾದೃಷ್ಠಿಯಲ್ಲಿ ಶಕ್ತಿ, ಆನಂದ ಮತ್ತು ಶಾಂತಿಯ ಲಹರಿಗಳು ಸಮಾವೇಶಗೊಂಡಿರುತ್ತವೆ. ಗುರುಕೃಪಾ ಇದ್ದರೆ ಮಾತ್ರ ತೀವ್ರ ಪ್ರಾರಬ್ಧದಿಂದ ಪಾರಾಗಲು ಸಾಧ್ಯವಾಗುವುದು. ಗುರುಕೃಪಾ ಯೋಗಾನುಸಾರ ಸಾಧನೆ ಮಾಡುವ ಜೀವವು ಬೇಗನೇ ಗುಣಾತ್ಮಕ ನಾಮ ಜಪದತ್ತ ಸಾಗುತ್ತದೆ.
ಗುರುಕೃಪಾ ಸಾಧನಾ ಸಾಧಕರು ತಾವಾಗಿಯೇ ನಿರ್ಗುಣ ನಾಮ ಜಪದ ಹಂತಕ್ಕೆ ಪ್ರವೇಶಿಸುತ್ತಾರೆ. ಗುರುಕೃಪಾ ಯೋಗದ eನವನ್ನು ಅಧ್ಯಯನ ಮಾಡುವ ಅವಶ್ಯಕತೆ ಇರುವುದಿಲ್ಲ ಮತ್ತು ಕೃತಜ್ಞತೆಯಿಂದ ಅಹಂಭಾವ ಕಡಿಮೆ ಆಗುವುದು. ತೀವ್ರ ಮುಮುಕ್ಷುತ್ವ ಅಥವಾ ಗುರು ಪ್ರಾಪ್ತಿಯ ತೀವ್ರ ತಳಮಳ ಈ ಗುಣದಿಂದಲೇ ಬೇಗನೆ ಗುರು ಕೃಪೆಯು ಸತತವಾಗಿ ಆಗುತ್ತಿರುತ್ತದೆ. ಗುರುಗಳು ತಮಗೆ ತಿಳಿದzಲ್ಲವನ್ನೂ ಶಿಷ್ಯನಿಗೆ ಕಲಿಸಿ ಶಿಷ್ಯನನ್ನೂ ಗುರುವನ್ನಾಗಿ ಮಾಡುತ್ತಾರೆ.
ವ್ಯಾಸೋಚ್ಪಿಷ್ಟಂ- ಮಹರ್ಷಿ ವ್ಯಾಸರ ಪ್ರತಿಯೊಂದು ಶಬ್ದದಲ್ಲಿಯೂ ಚೈತನ್ಯವಿದೆ. ವ್ಯಾಸರು ದ್ವಾಪರ ಯುಗ ದಲ್ಲಿ ಬರೆದ ಗ್ರಂಥಗಳು ಕಲಿಯುಗದಲ್ಲಿನ ಪ್ರಸ್ತುತ ಕಾಲದಲ್ಲಿಯೂ ಅಧ್ಯಯನಕಾರರಿಗೆ ಮಾರ್ಗದರ್ಶಕ ವಾಗಿವೆ. ಇವರು ಏಕಮೇವ ಅದ್ವಿತೀಯರು ಅವರ ತುಲನೆಯಲ್ಲಿ ಯಾರೂ ಸಮನಾಗಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಆಸನದ ಮೇಲೆ ಕುಳಿತು ಕೊಂಡಾಗ ಅದಕ್ಕೆ ವ್ಯಾಸ ಪೀಠ ಎಂದು ಕರೆಯುತ್ತೇವೆ. ವ್ಯಾಸ ಪೀಠ ಸತ್ಯವನ್ನೇ ಮಾತನಾಡುತ್ತದೆ. ಲೋಕ ಗುರು ಭಗವಾನ್ ವೇದವ್ಯಾಸರನ್ನು ಇಂದು ಆರಾಧಿಸಬೇಕು. ಭಾರತೀಯ ಸಂಸ್ಕೃತಿಯ ಶ್ರೇಷ್ಠ ಆಧ್ಯಾತ್ಮಿಕ ಮಲ್ಯಗಳನ್ನು ಎತ್ತಿ ಹಿಡಿದ ಮಹಾಚೇತನ ವೇದವ್ಯಾಸರು.
eನರಾಶಿಗಳಾದ ವೇದಗಳನ್ನು ಅಭ್ಯಾಸ ಮಾಡಲು ಅನುಕೂಲ ವಾಗುವಂತೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ, ವೇದಗಳೆಂದು ವಿಭಾಗಿಸಿ ಪ್ರಸಿದ್ಧವಾದ ಬ್ರಹ್ಮಸೂತ್ರ ಭಗವದ್ಗೀತೆ, ದಶೋಪನಿಷತ್ ಗಳನ್ನು ವ್ಯವಸ್ಥಿತವಾಗಿ ನಿರೂಪಿಸಿಕೊಟ್ಟ ಶ್ರೇಯಸ್ಸು ವ್ಯಾಸರಿಗೆ ಸಲ್ಲುತ್ತದೆ.
ಪಂಚಮ ವೇದವೆಂದು ಪ್ರಸಿದ್ಧಿಯಾದ ಮಹಾಭಾರತ ರಚಿಸಿದರು. ಸರ್ವರಿಗೂ eನಪ್ರಾಪ್ತಿಯಾಗಲಿ ಎಂದು ಕರ್ಮಠರನ್ನಾಗಿ ಮಾಡಲು ಅನೇಕ ಉಪಾಸನೆ ಕ್ರಮಗಳನ್ನು ಪುರಾಣಗಳ ಮೂಲಕ ಉಪದೇಶಿಸಿದರು. ೧೮ ಪುರಾಣಗಳನ್ನು ಲೋಕಕ್ಕೆ ಸಮರ್ಪಿಸಿದವರು ವೇದವ್ಯಾಸರು. ಮನು ಕುಲದ ಮೋಕ್ಷ ರಾಜ್ಯ ಕಾರ್ಯ ನಿರ್ವಹಿಸಲು ಮಾರ್ಗದರ್ಶನ ಪಡೆಯಲು ತಮ್ಮ ಮಹಾರಾಜ ತನ್ನ ಗುರುಗಳಾದ ಯೋಗೀಶ್ವರ ಯಾಜ್ಞವಲ್ಕ್ಯರಿಗೆ ಸರ್ವಜ್ಞ ಪೀಠಾಧಿಪತಿ ಸ್ಥಾನ ಕೊಟ್ಟ ಅವರಿಗೆ ಒಂದು ಸಾವಿರ ಸಾಲಂಕೃತ ಆಕಳುಗಳನ್ನು ಸಮರ್ಪಿಸಿದನು.
ನಂತರದ ಅನೇಕ ಗುರುಗಳು ವ್ಯಾಸರನ್ನು ಸ್ಮರಿಸಿzರೆ. ಆದ್ದರಿಂದಲೇ ವ್ಯಾಸೋಚ್ಛಷ್ಟಂ ಜಗತ್ ಸರ್ವಮ್ ಎಂದರೆ ಎಲ್ಲ ಮುಂದಿನ ಪೀಳಿಗೆಯ ಗುರುಗಳು ವ್ಯಾಸರ ಪುನರುಕ್ತಿ ಮಾಡಿzರೆ.
ಹೀಗೆ ಗುರು ಎಂದರೆ ಅಖಂಡ eನ ಜಾತಿ ಜಡತ್ವಕ್ಕೆ ಸ್ಪೂರ್ತಿ ತುಂಬಿ, ಶಿಷ್ಯ ಚಿತ್ತಾಪಹಾರನಾಗಿ ತಾನೂ ಬೆಳಗಿ ತನ್ನಂತೆ ಇತರರನ್ನು ಬೆಳಗಿಸುವವನೇ ನಿಜವಾದ ಗುರು. ಗುರು ದೊರಕದಿದ್ದರೂ, ಗುರುವಿನ ಮೂರ್ತಿಯನ್ನಿಟ್ಟು ಪೂಜಿಸಿ, ಅವನಿಂದ ವಿದ್ಯೆ ಪಡೆದ ಏಕಲವ್ಯ. ಆದರ್ಶ ಶಿಷ್ಯ ಗುರು ಆeಯನ್ನು ನಿಷ್ಠೆಯಿಂದ ಪಾಲಿಸಿ ಗುರೂಪದೇಶ ಪಡೆದ ಶ್ರೇಷ್ಠ ಶಿಷ್ಯ ದಾನಶೂರ ಕರ್ಣ. ನಮ್ಮ ದೇಶದ ಪ್ರಥಮ ಉಪ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣರವರು ಗುರುವಿಗಾಗಿ ತಮ್ಮ ಜನ್ಮದಿನವನ್ನೇ ಸಾರಿದರು. ಇವರ ಶಿಷ್ಯರು ಇವರನ್ನು ರೈಲ್ವೆ ಸ್ಟೇಷನ್‌ನ ಚಕ್ಕಡಿಯಲ್ಲಿ ಕುಳ್ಳಿರಿಸಿಕೊಂಡು ತಾವೇ ಹೆಗಲು ಕೊಟ್ಟು ಎಳೆದುಕೊಂಡು ಹೋದರು. ಇದು ಶಿಷ್ಯರು ತೋರಿದ ಗುರುಭಕ್ತಿ.
ಸಧ್ಯದ ಕಾಲದ ಗುರು- ಶಿಷ್ಯ ಸಂಬಂಧ ನೋಡಿ ಅಸಮಾಧಾನ ಹಾಗೂ ವಿಷಾದವಾಗುತ್ತಿದೆ. ಪರೀಕ್ಷೆಯಲ್ಲಿ ನಕಲು ಮಾಡಲು ಬಿಡದ ಗುರುವನ್ನು ಕೊಂದು ಹಾಕಿದ ಶಿಷ್ಯರಿzರೆ. ಗುರು ಇಂದು ನಿಂತು ಕಲಿಸಬೇಕು. ಶಿಷ್ಯ ಕುಳಿತು ಕಲಿಯಬೇಕು. ಆಧುನಿಕ ಗುರು ಎನ್ನಿಸಿಕೊಳ್ಳುವವನೂ ಸಹ ಬದಲಾಗಿzನೆ. ವಿದ್ಯೆ ಧನಕ್ಕಾಗಿ ಮಾಡಬಾರದು ಎಂದು. ಹಿಂದೊಂದು ಕಾಲದಲ್ಲಿತ್ತು. ಆಧುನಿಕ ಕಾಲದಲ್ಲಿ ಎಲ್ಲವೂ ಬದಲಾಗಿದೆ. ಹಿಂದೆ ಗುರುವಿಗೆ ರಾಜಶ್ರಯ ಇತ್ತು. ಇಂದು ಅಧ್ಯಯನ, ಅಧ್ಯಾಪನದ ರೀತಿ ಬದಲಾಗಿದೆ. ಇದು ಉದ್ಯೋಗವಾಗಿದೆ. ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಗುರುವಿನ ಸ್ಥಾನಮಾನದಲ್ಲಿ ವೈಪರೀತ್ಯ ಎದ್ದು ಕಾಣುತ್ತಿದೆ. ಸರ್ವವೂ ಸ್ವಾರ್ಥಮಯ ಜಗತ್ತು.
ಇಂಥ ಕಲಿ ಕಲ್ಮಷ ಕಾಲದಲ್ಲಿಯೂ ಕೂಡಾ ಬೆರಳೆಣಿಕೆಯಷ್ಟು ಗುರುಕುಲ ಪದ್ದತಿ ಶಿಕ್ಷಣ ಮರುಭೂಮಿಯಲ್ಲಿಯ ಓಯಸಿಸ್‌ನಂತೆ ಕೆಲಸ ಮಾಡುತ್ತವೆ. ಅವರೇ ನಿಜವಾದ ಗುರು-ಶಿಷ್ಯರು.
ಏನೇ ಇದ್ದರೂ ನಾಡಿದ್ದು ಬುಧವಾರ ಗುರು ಸ್ಮರಣೆ ದಿನ. ಅಂಥ ಸದ್ಗುರುವಿಗೆ ಇದೋ ನನ್ನ ಹೃದಯಾಂತರಾಳದ ನಮನ.
ಲೇಖಕನ ಅಂತರಾಳದ ಮಾತು :
ಹಿಂದೆ ಗುರು ಇದ್ದರೆ ಮುಂದೆ ಗುರಿ ಇರುತ್ತದೆ ಎಂದು ನಂಬಿದವನು ನಾನು. ಆ ಗುರು ನನ್ನನ್ನು ಸರಿ ದಾರಿಯಲ್ಲಿ ಕೊಂಡೊಯ್ಯುತ್ತಿzನೆ. ನನಗೆ ಆಧ್ಯಾತ್ಮ ಜೀವನ ಕಲಿಸಿದ, ತ್ರಿಲೋಕವನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿರುವ ದೇವರನ್ನು ನಿತ್ಯ ಪೂಜೆಗೈಯ್ಯುವ ಅವಕಾಶ ನೀಡಿದ, ಪತ್ರಿಕೋದ್ಯಮದ ಆಳ-ಅಗಲಗಳನ್ನು ತಿಳಿಸಿದ, ವೃತ್ತಿ ಜೀವನದ ಪಾಠ ಕಲಿಸಿದ, ನಾಲ್ಕು ಅಕ್ಷರಗಳನ್ನು ಗೀಚಲು ಪ್ರೇರೇಪಿಸಿದ, ನನ್ನನ್ನು ತಿದ್ದಿ ತೀಡಿ ಬುದ್ಧಿ ಹೇಳಿದ, ನನಗೆ ವೇದಾಧ್ಯಯನ ಪಾಠ ಮಾಡಿದ, ನನ್ನ ಬರಹಗಳನ್ನು ನಿರಂತರವಾಗಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ನನಗೆ ಸಹಕಾರ ನೀಡುತ್ತಿರುವ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನ್ನ ಏಳಿಗೆಗೆ ಸಹಕರಿಸುತ್ತಿರುವ ಎ ನನ್ನ ಗುರುಗಳಿಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ವಿಶೇಷವಾಗಿ ನನ್ನನ್ನು ಮೊದಲಿನಿಂದಲೂ ವಿರೋಧಿಸುವ OPPOSITION PARTYಗಳಿಗೂ ಸಹ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ಅವರಿಲ್ಲದಿದ್ದರೆ ಇಂದು ನಾನು ಏನನ್ನೂ ಸಾಧಿಸಲು ಆಗುತ್ತಿರಲಿಲ್ಲ.
ಧನ್ಯವಾದಗಳು.
-ಮುರುಳೀಧರ್ ಹೆಚ್ ಸಿ
ಪತ್ರಕರ್ತರು, ಶಿವಮೊಗ್ಗ.
