ಜಿ ವಿಶೇಷ ಸಹಕಾರ ತರಬೇತಿ

ಶಿವಮೊಗ್ಗ, ಅ.೧೪: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿ ಸಹಕಾರ ಯೂನಿಯನ್, ಶಿಮೂಲ್ ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಭದ್ರಾವತಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿ ಗಳಿಗೆ ಒಂದು ದಿನದ ಜಿ ವಿಶೇಷ ಸಹಕಾರ ತರಬೇತಿ ಶಿಬಿರ ಮಾಚೇನಹಳ್ಳಿಯ ಶಿಮೂಲ್ನ ಡಾ.ವರ್ಗೀಸ್ ಕುರಿಯನ್ ಸಭಾಂಗಣದಲ್ಲಿ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಶಿಮೂಲ್ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ್, ಸಹಕಾರ ಕ್ಷೇತ್ರದಲ್ಲಿ ಕಾನೂನಿನ ಅರಿವು ಅತ್ಯಗತ್ಯ. ಕಾಲಕಾಲಕ್ಕೆ ಕಾನೂನಿನಲ್ಲಿ ಆಗುವ ಬದಲಾವಣೆ ಗಳನ್ನು ಕಾರ್ಯದರ್ಶಿಗಳು ತಿಳಿದುಕೊಂಡು ಸಂಘಗಳ ಆಡಳಿತವನ್ನು ನಿಯಮಾನುಸಾರ ನಡೆಸಬೇಕು. ಈ ನಿಟ್ಟಿನಲ್ಲಿ ಜಿ ಯೂನಿಯನ್ ಅಗತ್ಯ ತರಬೇತಿ ನೀಡುತ್ತಿದೆ ಎಂದರು.
ರಾಜ್ಯ ಸಹಕಾರ ಮಹಾ ಮಂಡಳದ ಉಪಾಧ್ಯಕ್ಷ ಹಾಗೂ ಯೂನಿಯನ್ ನಿರ್ದೇಶಕ ಬಿ.ಕೆ. ಶಿವಕುಮಾರ್ ಮಾತನಾಡಿ, ಸಹಕಾರ ಶಿಕ್ಷಣ ನಿಽಯನ್ನು ಇಂತಹ ತರಬೇತಿಗಳಿಗೆ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಯದರ್ಶಿಗಳು ತರಬೇತಿಯ ಸದುಪಯೋಗ ಪಡೆದು ಗುಣಮಟ್ಟದ ಹಾಲು ಉತ್ಪಾದನೆ ಹೆಚ್ಚಿಸಿ, ಸದಸ್ಯರ ಹಿತ ಕಾಪಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಹನುಮಂತಪ್ಪ ಆಗರದಳ್ಳಿ ಮಾತನಾಡಿ, ಯೂನಿಯನ್ ಜಿಯ ಎ ಸಹಕಾರ ಸಂಘ, ಬ್ಯಾಂಕುಗಳ ಶ್ರೇಯೋಭಿವೃದ್ಧಿಗೆ ನಿರಂತರ ತರಬೇತಿ ನೀಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶಿಮೂಲ್ ನಿರ್ದೇಶಕರಾದ ಹೆಚ್.ಬಿ. ದಿನೇಶ್ ಬುಳ್ಳಾಪುರ, ಆನಂದ್ ಡಿ, ಎಸ್.ಕುಮಾರ್, ಕೇಂದ್ರ ಬ್ಯಾಂಕ್ ನಿರ್ದೇಶಕ ದಶರಥಗಿರಿ, ಶಿಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಮಂಜೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಾರಶೆಟ್ಟಿಹಳ್ಳಿ ಸಂಘದ ಕಾರ್ಯ ದರ್ಶಿ ಕುಮುದಾ ಪ್ರಾರ್ಥಿಸಿದರು. ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಽ ಕಾರಿ ಯಶವಂತ ಕುಮಾರ್ ಹೆಚ್ ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತಿಸಿದರು. ವ್ಯವಸ್ಥಾಪಕ ಸಿ. ಹನುಮಂತಪ್ಪ ವಂದಿಸಿ ನಿರೂಪಿಸಿದರು.

