ಪ್ರೇರಣಾಗೆ ಎಂಎಸ್ಸಿಯಲ್ಲಿ ರಕ್ಷಾ ವಿವಿಯಿಂದ ಚಿನ್ನದ ಪದಕ ಪ್ರಧಾನ…
ಶಿವಮೊಗ್ಗ : ಅಹಮದಾಬಾದ್ನಲ್ಲಿ ನಡೆದ ರಾಷ್ಟ್ರೀಯ ರಕ್ಷಾ ವಿವಿಯ ೫ನೇ ಘಟಿಕೋತ್ಸವದಲ್ಲಿ ಶಿವಮೊಗ್ಗದ ಖ್ಯಾತ ವೆಬ್ ಆಪ್ಸೆಟ್ ಪ್ರಿಂಟರ್ ಆಗಿದ್ದ ದಿ|ಕಾಶಿ ವಿಶ್ವನಾಥ್ ಹಾಗೂ ಪತ್ರಕರ್ತೆ ಶ್ರೀಮತಿ ಪದ್ಮಿನಿ ವಿಶ್ವನಾಥ್ ಅವರ ಪುತ್ರಿ ಪ್ರೇರಣಾ ಕೆ. ರಾವ್ ಅವರು ಎಂಎಸ್ಸಿ ಸೈಬರ್ ಸೆಕ್ಯುರಿಟಿ ಅಂಡ್ ಡಿಜಿಟಲ್ ಫೋರೆನ್ಸಿಕ್ನಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೆಲ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಬಾಯ್ ಪಟೇಲ್, ಗೃಹ ಸಚಿವರಾದ ನಿತ್ಯಾನಂದ ರಾಯ್, ರಾಷ್ಟ್ರೀಯ ರಕ್ಷಾ ವಿವಿ ಉಪಕುಲಪತಿ ಬಿಮಲ್ ಎನ್ ಪಟೇಲ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಅಭಿನಂದನೆ: ಪ್ರತಿಭಾನ್ವಿತ ವಿದ್ಯಾರ್ಥಿನಿ ಪ್ರೇರಣಾ ಕೆ. ರಾವ್ ಅವರಿಗೆ ಕಾರ್ಯನಿರತ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ನಿರ್ದೇಶಕರು ಅಭಿನಂದಿಸಿದ್ದಾರೆ.

