ಸುರಕ್ಷಿತ ಮಾತೃತ್ವಕ್ಕೆ ಆದ್ಯತೆ: ಶಿವಮೊಗ್ಗದಲ್ಲಿ ಎಒಎಕಾನ್ ರಾಷ್ಟ್ರೀಯ ಸಮ್ಮೇಳನ
ಶಿವಮೊಗ್ಗ, ಅ. ೨೮: ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಪ್ರಸೂತಿ ಅರಿವಳಿಕೆ ಸೇವೆಗಳ ಅಂತರ ಕಡಿಮೆ ಮಾಡಿ, ಸುರಕ್ಷಿತ ಮಾತೃತ್ವಕ್ಕೆ ಒತ್ತು ನೀಡುವ ಉದ್ದೇಶದಿಂದ ಪ್ರಸೂತಿ ಅರಿವಳಿಕೆ ತಜ್ಞರ ಸಂಘದ (ಎಒಎ) ೧೯ನೇ ರಾಷ್ಟ್ರೀಯ ಸಮ್ಮೇಳನ ಎಒಎಕಾನ್-೨೦೨೬ ಅನ್ನು ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಅಧ್ಯಕ್ಷ ಡಾ. ಜಿ.ಎಲ್. ರವೀಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. ೩೦ರಿಂದ ನ. ೧ರವರೆಗೆ ಶಿವಮೊಗ್ಗ ವೈದ್ಯಕೀಯ ವಿeನಗಳ ಸಂಸ್ಥೆ (ಸಿಮ್ಸ್)ಯಲ್ಲಿ ಸಮ್ಮೇಳನ ನಡೆಯಲಿದ್ದು, ದೇಶ-ವಿದೇಶಗಳ ಸುಮಾರು ೮೦೦ ವೈದ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಮಾದರಿ ನೋಂದಣಿ ವ್ಯವಸ್ಥೆಯ (ಎಸ್ಆರ್ಎಸ್) ೨೦೨೧-೨೩ರ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ ಮಾತೃ ಮರಣ ಅನುಪಾತ ೮೮ರಷ್ಟಿದೆ. ಕರ್ನಾಟಕದಲ್ಲಿ ಈ ಪ್ರಮಾಣ ೬೮ ಹಾಗೂ ಕೇರಳದಲ್ಲಿ ೨೪ ಇದೆ. ಇದನ್ನು ೨೦ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿಸುವುದು ಸಮ್ಮೇಳನದ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
ಗರ್ಭಾವಸ್ಥೆ ಮತ್ತು ಹೆರಿಗೆಯ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ, ಅಧಿಕ ರಕ್ತದೊತ್ತಡ, ಸೆಳವು, ಸೋಂಕು ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟುಮಾಡಬಹುದು. ಇಂತಹ ತುರ್ತು ಸಂದರ್ಭಗಳಲ್ಲಿ ಪ್ರಸೂತಿ, ಅರಿವಳಿಕೆ, ನವಜಾತ ಶಿಶು ಮತ್ತು ತೀವ್ರ ನಿಗಾ ಚಿಕಿತ್ಸಾ ತಂಡಗಳ ಸಮನ್ವಯ ಅತ್ಯಗತ್ಯ ಎಂದರು.ಱಱಸಮ್ಮೇಳನದ ಅಂಗವಾಗಿ ನಾಲ್ಕು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಹೆರಿಗೆ ನೋವು ನಿವಾರಣೆ, ತೀವ್ರ ನಿಗಾ ಚಿಕಿತ್ಸೆಯಲ್ಲಿ ಅಲ್ಟ್ರಾಸೌಂಡ್ ಬಳಕೆ, ತಾಯಿಯ ಆರೋಗ್ಯದಲ್ಲಿ ಹಠಾತ್ ಕುಸಿತ ಉಂಟಾದಾಗ ಜೀವ ರಕ್ಷಿಸುವ ವಿಧಾನಗಳು ಹಾಗೂ ಪ್ರಸೂತಿ ಅರಿವಳಿಕೆಯ ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಕಾರ್ಯದರ್ಶಿ ಡಾ. ಬಿ.ವಿ. ಚಂಪಾ ತಿಳಿಸಿದರು.
ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ, ಸಿಂಗಪುರ ಸೇರಿದಂತೆ ವಿವಿಧ ದೇಶಗಳ ಅಂತರರಾಷ್ಟ್ರೀಯ ತಜ್ಞರು ಹಾಗೂ ದೇಶದ ನೂರಕ್ಕೂ ಹೆಚ್ಚು ತಜ್ಞರು ಪಾಲ್ಗೊಳ್ಳಲಿzರೆ. ಉಪನ್ಯಾಸ, ವಿಚಾರ ಸಂಕಿರಣ, ಸಂಶೋಧನಾ ಪ್ರಬಂಧಗಳ ಮಂಡನೆ ಮತ್ತು ಪ್ರಾಯೋಗಿಕ ತರಬೇತಿಗಳು ನಡೆಯಲಿವೆ. ಸಮ್ಮೇಳನಕ್ಕೆ ಸುಮಾರು ರೂ.೧.೫ ಕೋಟಿ ವೆಚ್ಚ ಅಂದಾಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಡಾ. ಎಸ್. ಅಶ್ವಿನಿ, ಡಾ. ಎಂ.ಸಿ. ಶಿವಕುಮಾರ್ ಹಾಗೂ ಡಾ. ಸುನೀಲ್ ಪಾಂಡ್ಯ ಉಪಸ್ಥಿತರಿದ್ದರು.
