ಜಿಲ್ಲಾ ಸುದ್ದಿತಾಜಾ ಸುದ್ದಿ

ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯದಲ್ಲಿ ನಗು ಇಮ್ಮಡಿಯಾಗಲಿ…

Share Below Link

ಶಿವಮೊಗ್ಗ: ಚಾಮುಂ ಡೇಶ್ವರಿಯ ಕೃಪೆಯಿಂದ ಇಡೀ ರಾಜ್ಯದಲ್ಲಿ ನಗು ಇಮ್ಮಡಿಯಾಗಲಿ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತಷ್ಟು ಮೆರಗು ದೊರೆಯಲಿ ಎಂದು ಖ್ಯಾತ ಚಲನಚಿತ್ರ ನಟ ಶ್ರೀನಾಥ್ ಹಾರೈಸಿದರು.
ಜಿಡಳಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಶಿವಮೊಗ್ಗ ದಸರಾ ಉತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಬ್ಬಗಳು ಸಂಸ್ಕೃತಿ ಮತ್ತು ಸಮೃದ್ಧಿಯ ಸಂಕೇತಗಳಾ ಗಿದ್ದು, ಅವುಗಳ ವೈಭವ ಜನರ ಸಂಭ್ರಮ ಹಾಗೂ ಪರಂಪರೆಯ ಪ್ರತಿಬಿಂಬವಾಗಿದೆ ಎಂದರು.
ಮೈಸೂರು ದಸರಾದಷ್ಟೇ ಶಿವಮೊಗ್ಗ ದಸರಾವೂ ಪ್ರಸಿದ್ಧ ವಾಗಿದೆ ಎಂಬುದನ್ನು ಕೇಳಿz. ಇಲ್ಲಿನ ಉತ್ಸವವನ್ನು ಕಣ್ತುಂಬಿ ಕೊಳ್ಳಬೇಕೆಂಬ ಆಸೆ ಈ ಬಾರಿ ಈಡೇರಿದೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸದ ಆಹ್ವಾನಕ್ಕೆ ಗೌರವ ನೀಡಿ ಆಗಮಿಸಿzನೆ. ದಸರಾ ಮೆರವಣಿಗೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡ ಜನರ ಸಂಭ್ರಮ ಕಂಡು ತಾನೂ ಅವರೊಂದಿಗೆ ಹೆಜ್ಜೆ ಹಾಕುವಂತಾಯಿತು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ದುಷ್ಟಶಕ್ತಿಯ ಸಂಹಾರ ಮತ್ತು ವಿಜಯದ ಸಂಕೇತ ವಾಗಿ ದಸರಾ ಆಚರಿಸಲಾಗುತ್ತದೆ. ಇಂದು ಯಾರನ್ನೂ ಸಂಹರಿಸುವ ಅಗತ್ಯವಿಲ್ಲ. ನಮ್ಮೊಳಗಿನ ಅರಿಷಡ್ವರ್ಗಗಳನ್ನು ಜಯಿಸಿ ಮುನ್ನಡೆಯಬೇಕು ಎಂದರು. ರಾಜ್ಯದ ಜನರು ಎದುರಿಸುತ್ತಿರುವ ಸಂಕಷ್ಟಗಳು ದೂರವಾಗಿ ಸುಖ- ಸಮೃದ್ಧಿ ನೆಲೆಸಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ದಸರಾ ಉತ್ಸವ ಮಹತ್ವದ ಪಾತ್ರ ವಹಿಸುತ್ತದೆ. ಉತ್ಸವದ ಯಶಸ್ಸಿನಲ್ಲಿ ಪೌರಕಾರ್ಮಿಕರು ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಯ ಶ್ರಮ ಗಣನೀಯವಾಗಿದೆ ಎಂದರು.
ವೇದಿಕೆಯಲ್ಲಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದ, ಮಾಜಿ ಸದಸ್ಯೆ ಸುರೇಖಾ ಮುರಳೀಧರ್ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮಹಾನಗರ ಪಾಲಿಕೆ ಆವರಣದಿಂದ ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ದವರೆಗೆ ಚಾಮುಂಡೇಶ್ವರಿ ಉತ್ಸವಮೂರ್ತಿಯ ಮೆರವಣಿಗೆ ನಡೆಸಿ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.

Leave a Reply

Your email address will not be published. Required fields are marked *