ನೀತಿ ಸಂಹಿತೆ ಹಿನ್ನಲೆ ಕಮಲದ ಚಿಹ್ನೆ – ಪಿಎಂ-ಸಿಎಂ- ಸಚಿವರ ಭಾವಚಿತ್ರ ತೆರವಿಗೆ ಕಾಂಗ್ರೆಸ್ ಆಗ್ರಹ…
ಶಿವಮೊಗ್ಗ: ವಿಮಾನ ನಿಲ್ದಾಣದ ಮೇಲಿರುವ ಕಮಲ ಚಿಹ್ನೆಯನ್ನು ಚುನಾವಣೆಯ ನೀತಿಸಂಹಿತೆಯ ಹಿನ್ನಲೆಯಲ್ಲಿ ಬಟ್ಟೆಯಿಂದ ಸಂಪೂರ್ಣ ವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಶಿವಮೊಗ್ಗ ವಿಮಾನ ನಿಲ್ದಾಣ ದಲ್ಲಿ ನೂತನವಾಗಿ ಉದ್ಘಾಟನೆ ಯಾಗಿರುವ ವಿಮಾನ ನಿಲ್ದಾಣದ ಕಟ್ಟಡದ ವಿನ್ಯಾಸ ಸಂಪೂರ್ಣವಾಗಿ ಬಿಜೆಪಿ ಪಕ್ಷದ ಚಿಹ್ನೆಯಾಗಿರುವ ಕಮಲದ ವಿನ್ಯಾಸ ದಲ್ಲಿದೆ. ಈ ಬಗ್ಗೆ ಕಟ್ಟಡ ಪ್ರಾರಂಭ ವಾದಾಗಲು ಸಹ ಬಿಜೆಪಿ ಚಿಹ್ನೆ ಕಮಲವನ್ನು ಪ್ರತಿನಿಧಿಸಬಾರದು ಎಂದು ಸಾರ್ವಜನಿ ಕರು, ವಿವಿಧ ಸಂಘಟನೆಗಳು ಹೋರಾಟ ಮಾಡಿದ್ದವು. ಆದರೆ ಕಲಮದ ಚಿಹ್ನೆಯನ್ನು ಹಾಗೆ ಉಳಿಸಿಕೊಂಡಿ ದ್ದಾರೆ. ಇದು ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆಗೆ ಅಡ್ಡಿ ಬರುತ್ತದೆ ಎಂದು ಮನವಿದಾರರು ದೂರಿದರು.
ಆದ್ದರಿಂದ ಚುನಾವಣಾಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಮಲದ ಚಿಹ್ನೆ ಇರುವ ಎಲ್ಲಾ ಭಾಗವನ್ನು ಮುಚ್ಚಬೇಕು. ನೀತಿ ಸಂಹಿತೆಯನ್ನು ಕಾಪಾಡಬೇಕು. ಒಂದು ಪಕ್ಷ ಜಿಲ್ಲಾಡಳಿತ ಅಥವಾ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಕೆಪಿಸಿಸಿ ವತಿಯಿ ಂದಲೇ ಅದನ್ನು ಮುಚ್ಚಲಾಗು ವುದು ಎಂದು ಎಚ್ಚರಿಕೆ ನೀಡಿದರು.
ಅದೇ ರೀತಿ ಕೆಎಸ್ಆರ್ಟಿಸಿ ಸರ್ಕಾರಿ ಬಸ್ಗಳ ಮೇಲೆ ಮುಖ್ಯ ಮಂತ್ರಿಗಳು ಹಾಗೂ ಪ್ರಧಾನ ಮಂತ್ರಿ ಮತ್ತು ಸಚಿವ ಸಂಪುಟದ ಮಂತ್ರಿಗಳ ಮುಖವಿರುವ ಜಾಹಿ ರಾತುಗಳು ಇವೆ. ಜೊತೆಗೆ ಸ್ಟಿಕರ್ಗಳು ರಾರಾಜಿಸುತ್ತಿವೆ. ಇದು ಕೂಡ ಚುನಾವಣಾ ನೀತಿ ಸಂಹಿತೆಗೆ ವಿರೋಧವಾಗಿದೆ. ಕೂಡಲೇ ಬಸ್ಗಳ ಮೇಲಿರುವ ಭಾವಚಿತ್ರದ ಬರಹ ಗಳನ್ನು ತೆಗೆದುಹಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸ ಲಾಗಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಪ್ರಮುಖರಾದ ಅರ್ಚನಾ ನಿರಂಜನ್, ಸ್ಟೆಲಾ ಮಾರ್ಟಿನ್, ಕವಿತಾ ರಾಘವೇಂದ್ರ, ಮಧುಕು ಮಾರ್, ಬಾಲಾಜಿ, ವಿನಯ್ ಸೇರಿದಂತೆ ಹಲವರಿದ್ದರು.