ಜಿಲ್ಲಾ ಸುದ್ದಿತಾಜಾ ಸುದ್ದಿ

ವಚನ ಸಾಹಿತ್ಯವು ಎಲ್ಲರ ಬದುಕಿಗೆ ಉಪಯುಕ್ತವಾಗಬಲ್ಲ ವಚನ ಸಂಗ್ರಹ

Share Below Link

ಶಿವಮೊಗ್ಗ: ವಚನ ಸಾಹಿತ್ಯ ಪರಂಪರೆಯು ಇಡೀ ಸಮಸ್ತ ಲೋಕಕ್ಕೆ ಶರಣರು ನೀಡಿದ ಶ್ರೇಷ ಕೊಡುಗೆ. ವಚನ ಸಾಹಿತ್ಯವು ಜತಿ, ಸಮುದಾಯವ ಮೀರಿದ್ದು, ಎಲ್ಲರ ಬದುಕಿಗೂ ಉಪಯುಕ್ತ ಆಗಬಲ್ಲ ಸಾಹಿತ್ಯ ವಚನ ಸಂಗ್ರಹ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ನಗರದ ಬೆಕ್ಕಿನ ಕಲ್ಮಠದಲ್ಲಿ ಶ್ರೀ ಗುರುಬಸವ ಮಹಾಸ್ವಾಮಿಗಳ ೧೧೨ನೇ ಪುಣ್ಯ ಸ್ಮರಣೋತ್ಸವ, ಶರಣ ಸಾಹಿತ್ಯ ಹಾಗೂ ಭಾವೈಕ್ಯ ಸಮ್ಮೇಳನ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಸಮಾಜ ಸಂಘಟಿಸುವ ಶ್ರೇಷ್ಠ ಕಾಯಕವನ್ನು ಬದುಕಿನಲ್ಲಿ ನಡೆಸಿದವರು ವಿಶ್ವಗುರು ಬಸವಣ್ಣ. ಶರಣರ ಕಾಲಘಟ್ಟದಲ್ಲಿ ಬಸವಣ್ಣ ಅವರ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬ ವ್ಯಕ್ತಿಯು ಶ್ರೇಷ್ಠ ಶರಣ ರಾಗಿ ಗುರುತಿಸಿಕೊಂಡ ನಿದರ್ಶನ ಗಳಿವೆ. ಬಸವಣ್ಣ ಅವರನ್ನು ವಿರೋ ಧಿಸುವ ವ್ಯಕ್ತಿಯು ವಚನ ಸಾಹಿತ್ಯದ ಸಾರ ಅರ್ಥ ಮಾಡಿ ಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.
ಶಿವಮೊಗ್ಗದ ಫ್ರೀಡಂ ಪಾರ್ಕ್ ಗೆ ಅಲ್ಲಮಪ್ರಭು ನಾಮಕರಣ ಹಾಗೂ ಬಸವಣ್ಣನನ್ನು ಕರ್ನಾಟಕ ರಾಜ್ಯ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಅತ್ಯಂತ ಸಂತೋ ಷದ ಸಂಗತಿ. ವಚನ ಸಾಹಿತ್ಯ ಸಾರ ಪ್ರತಿಯೊಬ್ಬರ ಜೀವನಕ್ಕೂ ಮಾರ್ಗದರ್ಶನ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಭಾಗವಹಿಸುವಿಕೆಯ ಮಹತ್ವವನ್ನು ಮಕ್ಕಳಲ್ಲಿ ಪೋಷಕರು ಹಾಗೂ ಶಿಕ್ಷಕರು ತಿಳಿಸಬೇಕು. ಸ್ಪರ್ಧೆಯ ಜತೆಯಲ್ಲಿ ಮಕ್ಕಳಿಗೆ ವಚನ ಸಾಹಿತ್ಯ ಶ್ರೇಷ್ಠತೆ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಜಡೆ ಸಂಸ್ಥಾನ ಮಠದ ಶ್ರೀ ಯೋಗಾಚಾರ್ಯ ಡಾ. ಮಹಾಂತ ಸ್ವಾಮೀಜಿ, ಪ್ರಮುಖರಾದ ಎಚ್. ಸಿ. ಯೋಗೀಶ್, ಮಹಾಲಿಂಗಯ್ಯ ಶಾಸ್ತ್ರಿ, ಇ.ವಿಶ್ವಾಸ್, ಸೋಮ ನಾಥ್. ಕೆ.ಆರ್., ಸುಜಯ ಪ್ರಸಾದ್, ಶೀಲಾ ಸುರೇಶ್, ರುದ್ರಯ್ಯಶಾಸ್ತ್ರಿ ಇನ್ನಿತರರಿದ್ದರು.