ಜೂ.14: ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಶೋರೂಂ ಉದ್ಘಾಟನೆ : ಭರ್ಜರಿ ರಿಯಾಯಿತಿ – ಆಕರ್ಷಕ ಕೊಡುಗೆಗಳು – ಮೆಗಾ ಲಕ್ಕಿ ಡ್ರಾ…
ಶಿವಮೊಗ್ಗ : ತೀರ್ಥಹಳ್ಳಿ ಜನತೆಯಲ್ಲಿ ಸುಮಾರು ೮ ದಶಕಗಳಿಂದ ಮನೆ ಮಾತಾಗಿರುವ ಚಿರಪರಿಚಿತ ನಂಬಿಕೆ ಬ್ರ್ಯಾಂಡ್ ಕಳೆದ ಎರಡು ದಶಕಗಳಿಂದ ಚಿನ್ನಾಭರಣ ವ್ಯವಹಾರದಲ್ಲಿ ತೊಡಗಿಸಿ ಕೊಂಡಿರುವ ನ್ಯಾಷನಲ್ ಗೋಲ್ಡ್ ಮತ್ತು ಡೈಮಂಡ್ನ್ನು ಜಿ ಕೇಂದ್ರವಾದ ಶಿವಮೊಗ್ಗದ ಹೃದಯ ಭಾಗದಲ್ಲಿ ತನ್ನ ಷೋ ರೂಂ ಅನ್ನು ಜೂ.೧೪ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಬಿ.ಹೆಚ್. ರಸ್ತೆಯಲ್ಲಿರುವ ಪರೇಖ್ ವಿನಾಯಕ ಮಾಲ್ ಎದುರು ಆರಂಭವಾಗಲಿದೆ ಎಂದು ನ್ಯಾಷನಲ್ ಗೋಲ್ಡ್ ಮತ್ತು ಡೈಮಂಡ್ನ ಪಾಲುದಾರ ಯೂಸುಫ್ ಹೈದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಷೋ ರೂಂ ಅನ್ನು ನ್ಯಾಷನಲ್ ಗ್ರೂಪ್ನ ಸ್ಥಾಪಕ ಹಾಜಿ ಶೇಖ್ ಅಹ್ಮದ್ ಉದ್ಘಾಟಿಸಲಿದ್ದು, ಸಮಾಜದ ಪ್ರಮುಖ ಗಣ್ಯರು ಮತ್ತು ಫ್ಯಾಷನ್ ಪ್ರಿಯರು ಮುಖ್ಯ ಅತಿಥಿಯಾಗಿ ಭಾಗವಹಿಸಲಿzರೆ ಎಂದರು.

ಗ್ರಾಹಕರ ಅಪೇಕ್ಷೆ ಮೆರೆಗೆ ಶಿವಮೊಗ್ಗದಲ್ಲಿ ಷೋ ರೂಂ ಆರಂಭಿಸು ತ್ತಿದ್ದು, ಗ್ರಾಹಕರ ಅನುಕೂಲಕ್ಕಾಗಿ ಮೂರು ಅಂತಸ್ತುಗಳ ವೈಶಿಷ್ಟ ಪೂರ್ಣ ವಿಶಾಲವಾದ, ಸುಸಜ್ಜಿತ, ಸಂಪೂರ್ಣ ಹವಾ ನಿಯಂತ್ರಿತ ಷೋ ರೂಂ ಹೊಂದಿದೆ. ನೆಲ ಮತ್ತು ಪ್ರಥಮ ಅಂತಸ್ತಿನಲ್ಲಿ ರೇಗ್ಯಲುರ್ ವೇರ್, ಲೈಟ್ ವೇಟ್ ಆಭರಣಗಳನ್ನು ಹಾಗೂ ಆಂಟಿಕ್ ಮತ್ತು ಮದುವೆ ಆಭರಣಗಳ ಸಂಗ್ರಹ, ವಜ್ರಾಭರಣ, ಮುತ್ತುರತ್ನ ಖಚಿತ ಅಮೂಲ್ಯ ಆಭರಣಗಳಿವೆ. ಎರಡನೇ ಅಂತಸ್ತಿನಲ್ಲಿ ಸೂಕ್ತವಾದ ಉಡುಗೊರೆಗಳು, ಆಂಟಿಕ್ ಬೆಳ್ಳಿ ಆಭರಣ ಮತ್ತು ಬೆಳ್ಳಿಯ ಸಾಮಾಗ್ರಿಗಳ ಅನನ್ಯ ಸಂಗ್ರಹ ಮತ್ತು ವಿಶ್ವವಿಖ್ಯಾತ ಪ್ರಸಿದ್ದ ಬ್ರಾಂಡ್ಗಳ ವಾಚ್ಗಳನ್ನು ಪ್ರದರ್ಶಿಸಲಾಗಿದೆ ಎಂದರು.
ಶುಭಾರಂಭದ ಕೊಡುಗೆ : ಶೋ ರೂಂನ ಶುಭಾರಂಭದ ಪ್ರಯುಕ್ತ ಖಚಿತ ಉಚಿತ ಉಡುಗೊರೆಗಳಿವೆ. ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಬಹುಮಾನಗಳಿದ್ದು, ಜೂ.೧೪ ರಿಂದ ೨೮ ರವೆಗೆ ಈ ಕೊಡುಗೆ ಇದೆ. ೧.೫೦ ಲಕ್ಷ ಮೇಲ್ಪಟ್ಟ ಖರೀದಿಗೆ ಉಚಿತ ಚಿನ್ನದ ನಾಣ್ಯ, ೩೦ ಸಾವಿರ ಮೇಲ್ಪಟ್ಟ ಖರೀದಿಗೆ ಉಚಿತ ಬೆಳ್ಳಿಯ ನಾಣ್ಯ, ಹತ್ತು ಸಾವಿರ ಮೇಲ್ಪಟ್ಟ ಖರೀದಿಗೆ ಆಕರ್ಷಕ ಗೃಹೋಪಕರಣ ನೀಡಲಾಗುತ್ತದೆ ಎಂದರು.
ವಿಶೇಷ ರಿಯಾಯಿತಿ : ವಜ್ರಾಭರಣ ಖರೀದಿಗೆ ಪ್ರತಿ ಕ್ಯಾರಟ್ಗೆ ೧೨ ಸಾವಿರ ಬೆಳ್ಳಿ ಆಭರಣ, ಸಾಮಾಗ್ರಿ ಖರೀದಿಗೆ ಪ್ರತಿ ಕೆಜಿಗೆ ೧೫೦೦೦ ರೂ ರಿಯಾಯಿತಿ ಮತ್ತು ವಾಚ್ ಗಳ ಮೇಲೆ ಶೇ.೫ ರಿಂದ ೧೦ ರಿಯಾಯಿತಿ ನೀಡಲಾಗುತ್ತಿದೆ ಎಂದರು.

ಮೆಗಾ ಲಕ್ಕಿ ಡ್ರಾ : ಸೆ.೧೪ರ ವರೆಗೆ ೫೦೦೦ ಮೇಲ್ಪಟ್ಟ ವಾಚ್ ಖರೀದಿಯೊಂದಿಗೆ ಒಂದು ಉಚಿತ ಕೂಪನ್ ನೀಡಲಾಗುವುದು. ಕೂಪನ್ ವಿಜೇತರಿಗೆ ರಾಯಲ್ ಎನ್ಫಿಲ್ಡ್ ಬುಲೆಟ್ ಹಾಗೂ ಸಾಪ್ತಾಹಿಕವಾಗಿ ಜೂ.೨೧ ರಿಂದ ೨೮ರ ವರೆಗೆ ೧೦ ಸಾವಿರ ರೂ. ಚಿನ್ನಾಭರಣ ಅಥವಾ ಬೆಳ್ಳಿ ಖರೀದಿಗೆ ಉಚಿತ ಕೂಪನ್ಗೆ ಟಿವಿಎಸ್ ಜುಪಿಟರ್ ಸ್ಕೂಟರ್ ಗೆಲ್ಲುವ ಅವಕಾಶ ಇದೆ ಎಂದರು.
ಸಾಮಾಜಿಕ ಸ್ಪಂದನೆ : ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಕಳೆದ ೮ ವರ್ಷದಿಂದ ಸುಮಾರು ೮೦ ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಅಲ್ಲದೇ ಕ್ರೀಡೆ, ಆರೋಗ್ಯಕ್ಕೆ ಸಾಮಾಜಿಕ ಸ್ಪಂದನೆ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪಾಲುದಾರರಾದ ಅಬ್ದುಲ್ ರೆಹಮಾನ್, ಇಮ್ರಾಹಿಂ ಷರೀಫ್, ಸುಲೇಮಾನ್ ಉಪಸ್ಥಿತರಿದ್ದರು.


