ಜಿಲ್ಲಾ ಸುದ್ದಿತಾಜಾ ಸುದ್ದಿ

ಜೆಸಿಐ ಸಂಸ್ಥಾಪಕರ ದಿನಾಚರಣೆ ಸಂಭ್ರಮ..

Share Below Link

ಶಿವಮೊಗ್ಗ: ಜೆಸಿಐ ಎಲ್ಲ ಘಟಕಗಳು ಒಟ್ಟುಗೂಡಿ ಶಿವ ಮೊಗ್ಗ ನಗರದಲ್ಲಿ ಜೆಸಿಐ ಸಂಸ್ಥಾ ಪಕರ ದಿನವನ್ನು ಸಂಭ್ರಮದಿಂದ ಆಚರಿಸಿದವು. ನೂರಾರು ಸದ ಸ್ಯರು ಕಾರ್ಯಕ್ರಮದಲ್ಲಿ ಭಾಗವ ಹಿಸಿ ಜೆಸಿಐ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಜೆಸಿಐ ಸಂಸ್ಥೆಯು ನಿರಂತರ ವಾಗಿ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳನ್ನು ನಿರಂತರ ವಾಗಿ ಆಯೋಜಿಸಿಕೊಂಡು ಬರು ತ್ತಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಕಾರ್‍ಯಕ್ರಮ ಗಳನ್ನು ಅನುಷ್ಠಾನ ಮಾಡಿಕೊಂಡು ಬರುತ್ತಿವೆ.ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನ ಗೊಳಿಸುವ ಮೂಲಕ ಸಮಾಜಕ್ಕೆ ಉತ್ತಮ, ಆರೋಗ್ಯ ವಂತ, ಪ್ರe ವಂತ, ವಾತಾವರಣ ನಿರ್ಮಿಸಿ ತಮ್ಮನ್ನ ತಾವು ಬೆಳೆಸಿ ಕೊಳ್ಳುವುದ ರೊಂದಿಗೆ ದೇಶವನ್ನು ಅಭಿವೃದ್ಧಿ ಗೊಳಿಸಲು ಬೇಕಾದ ಹಲವಾರು ರೀತಿಯ ತರಬೇತಿ ಗಳನ್ನ ನೀಡುವ ಸಂಸ್ಥೆಯಾಗಿ ಜೆಸಿಐ ಕಾರ್ಯ ನಿರ್ವಹಿಸುತ್ತಿದೆ.


೧೦೭ ವರ್ಷಗಳ ಹಿಂದೆ ಅನೇಕ ರೀತಿಯ ಸಂಸ್ಥೆಯ ರೂಪುರೇಷ ಗಳನ್ನ ಸಿದ್ಧಪಡಿಸಿ ಸಮಾಜಕ್ಕೆ ಕೊಡುಗೆ ನೀಡಿದಂತಹ ಜೆಸಿಐ ಸಂಸ್ಥಾಪಕ ಹೆನ್ರಿ ಗಿಸ್ಸೆನ್‌ಬೀರ್ ಸವಿ ನೆನಪಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಹಳಷ್ಟು ಕನಸುಗಳನ್ನು ಹೊತ್ತು ಸ್ಥಾಪಿಸಿದ ಜೆಸಿಐ ಸಂಸ್ಥೆ ಯುವ ಪೀಳಿಗೆಯ ಕನಸು ನನಸಾ ಗುವ ದಾರಿ ತೋರಿಸುವ ಸಂಸ್ಥೆ ಯಾಗಿದೆ. ಸಂಸ್ಥಾಪಕ ದಿನವನ್ನು ಶಿವಮೊಗ್ಗದ ಜೆಸಿಐ ಘಟಕಗಳ ಸ್ಥಾಪಕರನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು.
ಶಿವಮೊಗ್ಗ ಜೆಸಿಐ ಸಂಸ್ಥಾಪಕ, ಹಿರಿಯ ಮಾರ್ಗದರ್ಶಕ ವಸಂತ್ ಕುಮಾರ್, ಕಿರಣ್, ಪುಷ್ಪಾ ಶೆಟ್ಟಿ, ಪ್ರತಿಮ ಡಾಕಪ್ಪ, ಸುರೇಖಾ ಮರಳಿಧರ್, ಜೆಸಿಐ ಭಾವನದ ಉಷಾ ಎನ್.ಜಿ., ಜೆಸಿಐ ಮಲೆನಾಡಿನ ಸ್ವಾಮಿನಾಥನ್, ಜೆಸಿಐ ಮೆಟ್ರೋ ಎಸ್.ವಿ.ಶಾಸ್ತ್ರೀ, ಜೆಸಿಐ ವಿವೇಕ್ ಬಾಲರಾಜ್ ಜೋಸೆಫ್, ಜೆಸಿಐ ಶರಾವತಿ ಜ್ಯೋತಿ ಅರಳಪ್ಪ, ಜೆಸಿಐ ಸಹ್ಯಾದ್ರಿ ಶಂಕರ್, ಜೆಸಿಐ ಚಿರಂತನ ಭಾಗ್ಯ ಲಕ್ಷ್ಮೀ, ಜೆಸಿಐ ಶಾಶ್ವತಿಯಿಂದ ಶಾಂತ ಸುರೇಂದ್ರ, ಜೆಸಿಐ ಸ್ಟಾರ್ಸ್ ನಿಂದ ಅಶ್ವಿನಿ ಅವರನ್ನು ಸನ್ಮಾನಿ ಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಎಲ್ಲ ಘಟಕದ ಅಧ್ಯಕ್ಷರುಗಳು, ಸ್ಥಾಪಕ ಸದಸ್ಯರುಗಳು, ಎಲ್ಲ ಪ ದಾಧಿಕಾರಿಗಳು ಪಾಲ್ಗೊಂಡಿದ್ದರು.