ಜಿಲ್ಲಾ ಸುದ್ದಿತಾಜಾ ಸುದ್ದಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ರಚನೆ…

Share Below Link

ಶಿಕಾರಿಪುರ, ಅ.೧೫: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ತಾಲೂಕು ನೂತನ ಘಟಕ ರಚಿಸಲಾಗಿದ್ದು, ರೈತ ಮುಖಂಡ ಬಸವರಾಜ್ ಪಾಟೀಲ್ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಎಸ್ ಈಶ್ವರಪ್ಪ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಂಘದ ಮುಖಂಡರ ಸಮಿತಿ ಯಲ್ಲಿ ನೂತನ ಸಂಘ ರಚಿಸಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಅಧ್ಯಕ್ಷರಾಗಿ ಬಸವರಾಜ್ ಪಾಟೀಲ್ ಮದಗಹಾರನಹಳ್ಳಿ,ಉಪಾಧ್ಯಕ್ಷರಾಗಿ ಮೋಹನ್ ರಾವ್, ಶ್ರೀಪತಿ ಆಚಾರ್ ಮನಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ತಳಗಿನಮನೆ ಮನಹಳ್ಳಿ, ತಾಲೂಕು ಸಂಚಾಲಕರಾಗಿ ಸಂತೋಷ ಈಸೂರು, ಹೊಸೂರು ಹೋಬಳಿ ಅಧ್ಯಕ್ಷರಾಗಿ ಎಂ.ಎಚ್ ಮಲ್ಲನ ಗೌಡ ಮದಗಹಾರನ ಹಳ್ಳಿ, ಅಂಜನಾಪುರ ಹೋಬಳಿ ಅಧ್ಯಕ್ಷರಾಗಿ ಸುಭಾಷಚಂದ್ರ ಚಿಕ್ಕಜೋಗಿಹಳ್ಳಿ, ಶಿಕಾರಿಪುರ ನಗರಾಧ್ಯಕ್ಷರಾಗಿ ಗಿಡ್ಡೇಶ್, ಕಾನೂನು ಘಟಕದ ಅಧ್ಯಕ್ಷರಾಗಿ ನ್ಯಾಯವಾದಿ ವಸಂತಮಾಧವ ಹಾಗೂ ಸಮಿತಿ ಸದಸ್ಯರಾಗಿ ಕರಿಬಸಪ್ಪ ಮುಗುಳಗೆರೆ,ಕೃಷ್ಣಪ್ಪ ಮದಗಹಾರನಹಳ್ಳಿ, ಪಾಲಾಕ್ಷಪ್ಪ ಪುನೇದಹಳ್ಳಿ,ಈಶ್ವರಪ್ಪ ಬನ್ನೂರು, ರವಿ ಹುಣಸೇಕಟ್ಟೆ,ಶಿವನಗೌಡ್ರು ದಿಂಡದಹಳ್ಳಿ, ಕೃಷ್ಣಮೂರ್ತಿ ಶಿಕಾರಿಪುರ, ಮಶಪ್ಪ ಮಟ್ಟಿಕೋಟೆ, ಸುರೇಶ್ ಕಿಟ್ಟದ ಹಳ್ಳಿ, ಮಂಜುನಾಥ ಬಾಣೇರ ಶಿಕಾರಿಪುರ ರವರನ್ನು ಆಯ್ಕೆಗೊಳಿ ಸಲಾಗಿದೆ ಎಂದು ತಿಳಿಸಿದರು.
ತಾಲೂಕಿನಾದ್ಯಂತ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣವಾದ ಏತ ನೀರಾವರಿ ಯೋಜನೆ ಸಂಪೂರ್ಣ ವಿಫಲ ವಾಗಿದ್ದು, ತುಂಗಾ ನದಿಯಲ್ಲಿ ನೀರು ಯಥೇಚ್ಚವಾಗಿದ್ದರೂ ಏತ ನೀರಾವರಿ ಯೋಜನೆ ನಿಷ್ಪ್ರಯೋಜಕವಾಗಿರುವ ಹಿನ್ನಲೆಯಲ್ಲಿ ತಾಲೂಕಿನ ಹಲವು ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಸರ್ಕಾರದ ಹಣ ದುರುಪ ಯೋಗಕ್ಕೆ ಯೋಜನೆ ಸಾಕ್ಷಿಯಾ ಗಿದೆ ಎಂದು ಆರೋಪಿಸಿದ ಅವರು ನೀರಿನ ಅಭಾವದಿಂದ ಬೆಳೆ ಒಣಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ,ಇಲಾಖೆ ಅಽಕಾರಿಗಳು ಕೂಡಲೇ ಕೆರೆಗಳಿಗೆ ನೀರು ಹಾಯಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕಾಡಂಚಿನ ರೈತರಿಗೆ ಮಾರಕ ವಾಗಿರುವ ಕಸ್ತೂರಿ ರಂಗನ್ ವರದಿ ಬಗ್ಗೆ ಸರ್ಕಾರ ದೃಡ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ ಅವರು ವರದಿ ಬಗ್ಗೆ ಕ್ಷೇತ್ರದ ಶಾಸಕರು ತಮ್ಮ ನಿಲುವು ಸ್ಪಷ್ಟಪಡಿಸುವಂತೆ ತಿಳಿಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಽ ಯಲ್ಲಿ ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ತಿದ್ದುಪಡಿಗೊಳಿಸಿ ರೈತರಿಗೆ ದ್ರೋಹ ಎಸಗಿzರೆ ಕೆರೆಕಟ್ಟೆ ಯಲ್ಲಿ ನೀರಿಲ್ಲದೆ ರೈತರು ತತ್ತರಿಸುತ್ತಿzರೆ ಇಂತಹ ಸಂದಿಗ್ದ ಸ್ಥಿತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸದೆ ಬಿಜೆಪಿ ರಾಜ್ಯಾಧ್ಯಕ್ಷ, ಸ್ಥಳೀಯ ಶಾಸಕ ವಿಜಯೇಂದ್ರ ಕಾಂಗ್ರೆಸ್ ಪಕ್ಷದ ೨೫ ಶಾಸಕರು ಸಂಪರ್ಕದಲ್ಲಿzರೆ ಎಂದು ಮುಖ್ಯಮಂತ್ರಿ ಕನಸು ಕಾಣುತ್ತಿzರೆ. ಜಿ ಉಸ್ತುವಾರಿ ಸಚಿವರು ಪಾದಯಾತ್ರೆ ಮೂಲಕ ಅಗ್ಗದ ಪ್ರಚಾರದಿಂದ ಬಂಗಾರಪ್ಪ ನವರ ಹೆಸರಿಗೆ ಕಳಂಕ ತರುತ್ತಿzರೆ ರೈತರ ಸಮಸ್ಯೆ ಪರಿಹಾರಕ್ಕೆ ಸಂಘ ಎಲ್ಲ ರೀತಿಯ ಹೋರಾಟಕ್ಕೆ ಸಿದ್ದವಾಗಿದೆ ಎಂದು ತಿಳಿಸಿದರು.


ಸಂಘದ ನೂತನ ಅಧ್ಯಕ್ಷ ಬಸವರಾಜ ಪಾಟೀಲ್ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತನ ಉತ್ಪನ್ನಗಳಿಗೆ ಸೂಕ್ತ ಬೆಲೆ ಇಲ್ಲ.ಗೊಬ್ಬರ ಬೆಲೆ ವಿಪರೀತವಾಗಿದ್ದು ರೈತನ ಬದುಕು ಚಿಂತಾಜನಕವಾಗಿದೆ.ಈ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾಗೊಳಿಸುವಂತೆ ಆಗ್ರಹಿಸಿದರು.
ಶೀಘ್ರದಲ್ಲಿಯೇ ತಾಲೂಕಿ ನಾದ್ಯಂತ ೧೫ ಗ್ರಾಮ ಘಟಕ ರಚಿಸಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರಬಲ ವಿರೋಧ ಪಕ್ಷವಾಗಿ ರೈತರ ಪರವಾಗಿ ಸಂಘ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ನೂತನ ಸಮಿತಿಯ ಪದಾಽಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *