ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಭಗವಂತನೇ ಕೊಟ್ಟಬರ್ಥಡೇ ಗಿಫ್ಟ್: ನನ್ನ ಬಾಳಿನ ಬಾರ್ಬಿ ಡಾಲ್ ನೀನು…

Share Below Link

ಬಾಳಿನಲ್ಲಿ ಕೆಲವರು ನಮ್ಮ ದಾರಿಯಲ್ಲಿ ಹಾದು ಹೋಗುತ್ತಾರೆ. ಮತ್ತೆಕೆಲವರು ನಮ್ಮನ್ನು ಹುಡುಕಿ ಬರುತ್ತಾರೆ. ಇನ್ನೂ ಕೆಲವರು ಕ್ಷಣಿಕ ನೆನಪಾಗಿ ಉಳಿದುಬಿಡುತ್ತಾರೆ. ಇನ್ನೂ ಕೆಲವರು ವಿಧಿಯ ಬರಹವಾಗಿ ನಮ್ಮ ಹೃದಯದೊಳಗೆ ನೆಲೆಸುತ್ತಾರೆ. ಆದರೆ ಅಪರೂಪಕ್ಕೆ ಒಬ್ಬರು ಮಾತ್ರ ದೇವರ ವಿಶೇಷ ಉಡುಗೊರೆಯಾಗಿ ನಮ್ಮ ಬದುಕಿಗೆ ಬಂದು ಉಸಿರಲ್ಲಿ ಉಸಿರಾಗುತ್ತಾರೆ. ಅವರು ಕೇವಲ ವ್ಯಕ್ತಿಗಳಾಗಿರುವುದಿಲ್ಲ, ಭಗವಂತ ನಮ್ಮ ಪಾಲಿಗೆ ಕಳುಹಿಸಿದ ಪ್ರೀತಿಯ ಆಶೀರ್ವಾದವಾಗಿರುತ್ತಾರೆ. ನೀನು ಅಂಥವಳು ಕಣೋ..
ನನ್ನ ಜನ್ಮದಿನಕ್ಕೆ ಅನೇಕ ಆತ್ಮೀಯರು ಹಲಬಗೆಯ ಉಡುಗೊರೆಗಳನ್ನು ಕೊಟ್ಟಿದ್ದರು. ಆದರೆ ಭಗವಂತ ಮಾತ್ರ ತನ್ನ ಅತ್ಯಂತ ಅಮೂಲ್ಯ ಉಡುಗೊರೆಯನ್ನು ನನಗೆ ಕೊಟ್ಟನು.
ಅದೇ ನೀನು…
ನನ್ನ ಬದುಕಿನ ಬಾರ್ಬಿ ಡಾಲ್, ನನ್ನ ಹೃದಯದ ಮುದ್ದು ಲೋಕ.
ಗೊಂಬೆ ಓ ಗೊಂಬೆ… ನನ್ನ ಮುದ್ದು ಗೊಂಬೆ..
ಕಣ್ಣಲೇ ಬಚ್ಚಿಡಲಾ… ಕಣ್ಣಲೇ ಮುಚ್ಚಿಡಲಾ…
ನಿನ್ನನ್ನು ಮೊದಲ ಬಾರಿ ನೋಡಿದ ಕ್ಷಣವೇ ನನ್ನ ಹೃದಯ ಬಡಿತವೂ ಕೂಡ ಸಂಗೀತವಾಯಿತು. ಆ ಕ್ಷಣದಿಂದ ನನ್ನ ಮನಸ್ಸು ಕೇವಲ ಮನಸ್ಸಾಗಿರಲಿಲ್ಲ, ಅದು ಪ್ರೀತಿಯ ಸಿಂಚನವಾಗಿಬಿಟ್ಟಿತು.
ನಿನ್ನ ನಗು ನನ್ನ ದಿನದ ಮೊದಲ ಸೂರ್ಯಕಿರಣ. ನಿನ್ನ ಪಿಸುಮಾತು ನನ್ನ ಹೃದಯದ ಮಧುರ ಸಂಗೀತ. ನಿನ್ನ ಕೋಪವೂ ಸಹ ನನಗೆ ಮುzದ ಕಾಮನಬಿಲ್ಲಿನಂತೇ ಕಾಣುತ್ತದೆ.
ಯಾಕೆಂದರೆ ನೀನು ನನ್ನ ಜೀವನದ ಸಾಮಾನ್ಯ ವ್ಯಕ್ತಿಯಲ್ಲ, ನನ್ನ ಎ ಪ್ರಾರ್ಥನೆಗಳಿಗೆ ಭಗವಂತ ಕೊಟ್ಟ ಸುಂದರ ಉತ್ತರ. ನೀನೆ ಮೊದಲು… ನೀನೇ ಕೊನೆ… ಬೇರೆಯಾರೂ ಬೇಡ ನನಗೆ…


ಕೆಲವರು ಪ್ರೀತಿಯನ್ನು ಪದಗಳಲ್ಲಿ ಹೇಳುತ್ತಾರೆ. ಇನ್ನೂ ಕೆಲವರು ಅದನ್ನು ಕವನಗಳಲ್ಲಿ ಬರೆಯುತ್ತಾರೆ. ಆದರೆ ನಾನು…
ನಿನ್ನ ಕಣ್ಣಲ್ಲಿ ನನ್ನ ಭವಿಷ್ಯವನ್ನು ಓದುತ್ತೇನೆ. ನಿನ್ನ ಹೃದಯ ಬಡಿತದಲ್ಲಿ ನನ್ನ ಹೆಸರನ್ನು ಕೇಳುತ್ತೇನೆ. ನೀನು ಬಂದ ನಂತರ ನನ್ನ ಬದುಕು ಕೇವಲ ದಿನಗಳ ಸರಮಾಲೆಯಾಗಿಲ್ಲ, ಪ್ರತಿ ಕ್ಷಣವೂ ನೆನಪಾಗಿ ಉಳಿಯುವ ಹಬ್ಬವಾಗಿದೆ. ನಿನ್ನ ಕೈ ಹಿಡಿದಾಗ ನನ್ನ ಕನಸುಗಳಿಗೆ ದಾರಿ ಸಿಕ್ಕಂತಾಗುತ್ತದೆ. ನಿನ್ನ ಹತ್ತಿರ ಇರುವಾಗ ಜಗತ್ತಿನ ಎಲ್ಲ ನೋವುಗಳು ದೂರವಾಗುತ್ತವೆ. ನಿನ್ನ ಪ್ರೀತಿ ನನ್ನ ಮನಸ್ಸಿಗೆ ಆಶ್ರಯ, ನಿನ್ನ ಉಪಸ್ಥಿತಿ ನನ್ನ ಆತ್ಮಕ್ಕೆ ಶಾಂತಿ.
ಹೇ ಚಿನ್ನಾ… ಮುಚ್ಚಿಟ್ಟರು ಬಚ್ಚಿಟ್ಟರು… ನಿನ್ನೊಳಗೆ ಹಾಯಾಗಿರುವೆ ಕಣೋ. ನಾನು ಯಾವಾಗಲೂ ನಿನ್ನ ಒಲವಿಗೆ ನಂಬಿಕೆಯ ನೆರಳಾಗಿರುತ್ತೇನೆ ಕಣೋ.
ಏಕೆಂದರೆ ಗೊಂಬೆಯಂತ ಹುಡುಗಿ ನೀನು… ಆದರೆ ನಿನ್ನ ಮನಸ್ಸು ಹಾಲು-ಜೇನಿನಷ್ಟು ಮಧುರ. ನಿನ್ನ ಜೊತೆಗೆ ಕಳೆದ ಪ್ರತಿಕ್ಷಣವೂ ನನಗೆ ಒಂದು ಪುಟ್ಟ ಕನಸಿನ ಪ್ರೇಮ ಲೋಕ. ನಿನ್ನ ಸ್ನೇಹದಿಂದ ಎಲ್ಲಾ ಅಂದ ಚಂದ. ನನ್ನೀ ಕಣ್ಣಿನಿಂದಲೇ ನಿಂಗೆ ಧನ್ಯವಾದ ಹೇಳುವೆ…
ಅಲ್ಲಿ ನೋವುಗಳಿಲ್ಲ… ಬೇಸರಗಳಿಲ್ಲ…
ಇರುವುದೆಲ್ಲ ನಿನ್ನ ನಗು, ನಿನ್ನ ಪ್ರೀತಿ, ನಿನ್ನ ಉಸಿರಿನ ಸಾನ್ನಿಧ್ಯ. ಕೆಲವು ಸಂಬಂಧಗಳು ಕಾಲದೊಂದಿಗೆ ಬದಲಾಗುತ್ತವೆ. ಆದರೆ ನಿನ್ನ ಮೇಲೆ ಇರುವ ನನ್ನ ಪ್ರೀತಿ ಮಾತ್ರ ದಿನದಿಂದ ದಿನಕ್ಕೆ ಇನ್ನಷ್ಟು ಆಳವಾಗುತ್ತಿದೆ. ಉಸಿರು ಇರುವ ಕೊನೆಯ ಕ್ಷಣದವರೆಗೂ ನೀನು ನನ್ನ ಜೊತೆ ಇರಬೇಕು. ನನ್ನ ಕೈ ಹಿಡಿದು ನನ್ನ ಬದುಕಿನ ಪಯಣವನ್ನು ಪೂರ್ಣಗೊಳಿಸಬೇಕು.
ನನ್ನನ್ನು ಪ್ರೀತಿಸು ಒಂದು ಬಾರಿ.. ನಿನ್ನೆಲ್ಲ ಪ್ರೀತಿಯ ನನಗೆ ತೋರಿ… ಏಳೇಳು ಜನ್ಮದ ಪ್ರೀತಿಗೆ ಇದೇ ಮೊದಲ ದಿವಸವಾಗಲಿ.. ನಿನ್ನಿಲ್ಲದ ಬದುಕನ್ನು ನಾನು ಊಹಿಸಿಕೊಳ್ಳಲಾರೆ… ಯಾಕೆಂದರೆ ಈಗ ನನ್ನ ಹೃದಯ ಬಡಿತಕ್ಕೂ ನಿನ್ನ ಹೆಸರೇ ಕಾರಣ. ನೀನು ನನ್ನ ಪ್ರೀತಿಯ ಮುದ್ದು ಲೋಕ. ನನ್ನ ಹೃದಯದ ಶಾಶ್ವತ ಸ್ಪಂದನೆ. ನನ್ನ ಬದುಕಿನ ಅತಿ ಸುಂದರ ಅಧ್ಯಾಯ.
ನನ್ನ ಪ್ರೀತಿಗೆ ಪ್ರೇಮಸಿಂಚನವಾದ ದೇವರ ವಿಶೇಷ ಉಡುಗೊರೆ ನೀನು, ನನ್ನ ಬಾಳಿನ ಬಾರ್ಬಿ ಡಾಲ್..
ನನ್ನ ಜೀವ..
ನನ್ನ ಎಂದೆಂದಿಗೂ ಉಳಿಯುವ ಪ್ರೀತಿ…

Leave a Reply

Your email address will not be published. Required fields are marked *