ಆ.20: ಗುತ್ತಿಗೆದಾರರ ಹೋರಾಟ ಸಮಿತಿಯಿಂದ ಅಭಿನಂದನಾ ಸಮಾರಂಭ…
ಶಿವಮೊಗ್ಗ : ನೀರಾವರಿ ನಿಗಮ ನಿಯಮಿತ, ತುಂಗಾ ಮೇಲ್ದಂಡೆ ಮತ್ತು ಭದ್ರಾ ಗುತ್ತಿಗೆದಾರರ ಹೋರಾಟ ಸಮಿತಿ ಶಿವಮೊಗ್ಗವತಿಯಿಂದ ಹಿರಿಯ ಗುತ್ತಿಗೆದಾರರು ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಮತ್ತು ಗುತ್ತಿಗೆದಾರರ ಸಮಸ್ಯೆ ಹಾಗೂ ಪರಿಹಾರ ಕುರಿತು ಮುಂದಿನ ನಡೆಗಳ ಬಗ್ಗೆ ಸಂವಾದ ಕಾರ್ಯ ಕ್ರಮವನ್ನು ಆ.೨೦ರ ಬೆಳಿಗ್ಗೆ ೧೧ ಗಂಟೆಗೆ ಗೋಪಾಲಗೌಡ ಬಡಾವಣೆಯಲ್ಲಿರುವ ಅಗಮುಡಿ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಎಂ. ಜಗದೀಶ್ ಗುಡಮಗಟ್ಟೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯ ಉಪಾಧ್ಯಕ್ಷ ಎನ್. ಮಂಜುನಾಥ್ ಉಪಸ್ಥಿತರಿರುವರು ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ ಎ ಜಿ ಗುತ್ತಿಗೆದಾರರ ಸಂಘದ ಹಾಗೂ ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಕರ್ನಾಟಕ ಸ್ಟೇಟ್ ಕಂಟ್ರ್ಯಾಕ್ಟರ್‍ಸ್ ಅಸೋಸಿಯೇಷ ನ್‌ನ ಕಾರ್ಯಾಧ್ಯಕ್ಷ ಎಂ.ಎಸ್. ಸುಂಕ ಗೌಡಶಾನಿ, ಗೌರವಾಧ್ಯಕ್ಷ ಜಗನ್ನಾಥ್ ಬಿ. ಶೇಗಜಿ, ಕೆ. ರಾಧಾಕೃಷ್ಣನಾಯ್ಡು ಹಾಗೂ ಪದಾಧಿಕಾರಿಗಳು ಮತ್ತು ಶಿವಮೊಗ್ಗ ತಾಲ್ಲೂಕುಗಳ ಅಧ್ಯಕ್ಷರು, ಹಾಗೂ ಸದಸ್ಯರು ಭಾಗವಹಿಸಲಿzರೆ ಎಂದರು.
ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯೊಂದೇ ಸಮಸ್ಯೆಯಲ್ಲ ಹೊಸಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇವೆ. ದಿನೇ ದಿನೇ ಕಚ್ಛಾವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗು ತ್ತಿದ್ದು, ಮರಳು ಮತ್ತಿತರ ಕಚ್ಚಾ ವಸ್ತುಗಳು ಸಿಗದೇ ಇರುವುದು ಮತ್ತೊಂದು ಸಮಸ್ಯೆಯಾಗಿದೆ. ಇದನ್ನು ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ವರ್ಷದಿಂದ ವರ್ಷಕ್ಕೆ ಗುತ್ತಿಗೆದಾರರಾಗುತ್ತಿ ರುವವರ ಸಂಖ್ಯೆ ಸಹ ಹೆಚ್ಚುತ್ತಿದೆ. ಇವರಿಗೆ ಸರ್ಕಾರದ ನಡಾವಳಿ ಗಳು, ಗುಣಮಟ್ಟ, ಆಧುನಿಕ ತಂತ್ರeನ ಮತ್ತು ವಿವಿಧ ದೇಶಗಳು ಅನುಸರಿಸುತ್ತಿರುವ ವೈeನಿಕ ಮಾದರಿಗಳನ್ನು ಕುರಿತು ತರಬೇತಿ ಮತ್ತು ಕಾರ್ಯಾಗಾರ ನಡೆಸಲು ಸಮಿತಿಯಿಂದ ಮುಂದಿನ ದಿನಗಳಲ್ಲಿ ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಗು ವುದು ಎಂದರು.
ಶಿವಮೊಗ್ಗ ಜಿಯಲ್ಲಿ ನೀರಾವರಿ ನಿಗಮ, ತುಂಗಾ ಮೇಲ್ದಂಡೆ ಹಾಗೂ ಭದ್ರಾ ಗುತ್ತಿಗೆದಾರರಿಗೆ ಸುಮಾರು ೫ ಸಾವಿರ ಕೋಟಿ ರೂ. ಸರ್ಕಾರ ದಿಂದ ಬಾಕಿ ಬರಬೇಕಾಗಿದೆ. ಸಂಕಷ್ಟದಲ್ಲಿರುವ ಗುತ್ತಿಗೆದಾರರಿಗೆ ಸರ್ಕಾರ ಎರಡು ಹಂತದಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.
ಪ್ರಮುಖರಾದ ಚನ್ನಬಸವರಾಜು, ಜಿ.ಎ. ಪ್ರಕಾಶ್, ಎಸ್. ರಾಜೇಶ್‌ಗೌಡ, ಪಾಂಡುರಂಗ ಆರ್., ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.


