ಕಳ್ಳತನ ಪ್ರಕರಣ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

ಭದ್ರಾವತಿ, ಅ.೧೫: ನಗರದ ತಮ್ಮಣ್ಣ ಕಾಲೋನಿಯಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಹೊಸಮನೆ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಭೇದಿಸಿ, ೧೯ ವರ್ಷದ ಯುವಕನನ್ನು ಬಂಧಿಸಿzರೆ.
ತಮ್ಮಣ್ಣ ಕಾಲೋನಿಯ ನಿವಾಸಿ ವಿಜಯ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಒಟ್ಟು ೪೮ ಗ್ರಾಂ ತೂಕದ, ಅಂದಾಜು ೪.೮೦ ಲಕ್ಷ ರೂ. ಮಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಕಳುವಾದ ಆಭರಣಗಳಲ್ಲಿ ೪೪ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ನಾಲ್ಕು ಉಂಗುರಗಳು ಸೇರಿವೆ.
ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ ೩೦೫ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಳ್ಳಲಾಗಿತ್ತು. ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು, ತಮ್ಮಣ್ಣ ಕಾಲೋನಿಯ ಪ್ರೇಮ್ ಕುಮಾರ್ ಅಲಿಯಾಸ್ ಗಾಂಽ ಎಂಬಾತನನ್ನು ಬಂಽಸಿ, ಆತನಿಂದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿzರೆ.
ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಭಾಗಿಯಾಗಿರುವ ಶಂಕೆಯಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಮುಂದು ವರಿಸಿzರೆ. ಕಾರ್ಯಾಚರಣೆ ಯಲ್ಲಿ ಭಾಗಿಯಾದ ಪಿಎಸ್ಐ ಹಾಗೂ ಸಿಬ್ಬಂದಿಯ ಕಾರ್ಯ ವನ್ನು ಜಿ ಪೊಲೀಸ್ ವರಿಷ್ಠಾಽಕಾರಿ ನಿಖಿಲ್ ಬಿ. ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಽಕಾರಿ ಕಾರಿಯಪ್ಪ ಅವರು ಶ್ಲಾಘಿಸಿzರೆ.
