ಜಿಲ್ಲಾ ಸುದ್ದಿತಾಜಾ ಸುದ್ದಿ

ಗಾಂಽ ವಿಚಾರಧಾರೆಗಳು ಯುವಜನರಿಗೆ ಅಗತ್ಯ

Share Below Link

ಶಿವಮೊಗ್ಗ, ಅ.೧೫: ಇಂದಿನ ವಿದ್ಯಾರ್ಥಿಗಳಿಗೆ ಗಾಂಽ ವಿಚಾರU ಳು ಅತ್ಯಂತ ಅಗತ್ಯವಾಗಿವೆ ಎಂದು ಕರ್ನಾಟಕ ಗಾಂಽ ಅಧ್ಯಯನ ಕೇಂದ್ರದ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ.ಕೃಷ್ಣ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗ, ಎನ್ ಎಸ್ ಎಸ್ ಘಟಕ, ಐಕ್ಯೂಎಸಿ ಹಾಗೂ ಕರ್ನಾಟಕ ಗಾಂಽ ಸ್ಮಾರಕ ನಿಽ ಸಹಯೋಗದಲ್ಲಿ ಗಾಂಽ ಅಧ್ಯಯನ ಕೇಂದ್ರ ಸ್ಥಾಪಿಸಿ ಗಾಂಽಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಆಧುನಿಕ ಬದುಕಿನ ಭರಾಟೆಗಳಲ್ಲಿ ಕಳೆದು ಹೋಗುತ್ತಿರುವ ಮಾನವೀಯ ಮಲ್ಯಗಳನ್ನು ನಾವು ಗಾಂಧೀಜಿ ಅವರಿಂದ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.


ಡಿವಿಎಸ್ ಸಂಸ್ಥೆ ಅಧ್ಯಕ್ಷ ಕೆ. ಬಸಪ್ಪಗೌಡ ಮಾತನಾಡಿ, ಗಾಂಽಜಿ ಅವರು ಜಗತ್ತು ಕಂಡ ಅದ್ವಿತೀಯ ಚೇತನ. ಸತ್ಯ ಮತ್ತು ಅಹಿಂಸೆಯಂತಹ ಸಂಗತಿಗಳಿಂದ ಜೀವಿಸಿ ಮಾದರಿಯಾದವರು. ನಮ್ಮಲ್ಲಿನ ಜಾತಿ, ಮತ, ಧರ್ಮ ಗಳ ತಾರತಮ್ಯ ದಾಟಿ ಮುನ್ನಡೆ ಯಬೇಕು ಎಂದು ಹೇಳಿದರು.
ಡಿವಿಎಸ್ ಕುಲಸಚಿವ ಡಾ. ಎಂ.ವೆಂಕಟೇಶ್ ಮಾತನಾಡಿ, ಗಾಂಽಜಿ ಅವರು ವಿಶ್ವಮಾನ್ಯರು. ಅವರ ಬದುಕೇ ನಮಗೊಂದು ಮಾದರಿ ಆಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರಸ್ವಾಮಿ ಮಾತನಾಡಿ, ಗಾಂಽ ಅಧ್ಯಯನ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಗಾಂಽಜಿ ಅವರ ವಿಚಾರಧಾರೆಯನ್ನು ಹಂಚಲು ನಮಗೆ ಒಳ್ಳೆಯ ವೇದಿಕೆಯಾಗಿದೆ ಎಂದು ತಿಳಿಸಿದರು.
ಗಾಂಽ ಅಧ್ಯಯನ ಕೇಂದ್ರದ ಕಾರ್ಯನಿರ್ವಾಹಕ ಅಽಕಾರಿ ಡಾ. ಶಿವಪ್ರಸಾದ್ ಪಟ್ಟಣಗೆರೆ ಮಾತ ನಾಡಿ, ಶಿವಮೊಗ್ಗ ನಗರದಲ್ಲಿ ಡಿವಿಎಸ್ ಕಾಲೇಜು ತನ್ನದೇ ಆದ ಛಾಪು ಹೊಂದಿದೆ. ಇಲ್ಲಿ ನೀಡಲಾಗಿರುವ ಗಾಂಽ ಅಧ್ಯಯನ ಕೇಂದ್ರದ ಮೂಲ ಉದ್ದೇಶವು ವಿದ್ಯಾರ್ಥಿಗಳಿಗೆ ತಲುಪಲಿ ಎಂದು ಆಶಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್.ಕೆ.ಮಂಜುನಾಥ ಮಾತನಾಡಿ, ನಮ್ಮ ಕನ್ನಡ ವಿಭಾಗದಲ್ಲಿ ಹೊಸದಾಗಿ ಆರಂಭವಾಗಿರುವ ಕೇಂದ್ರದಿಂದ ಹೊಸ ಯೋಜನೆಗಳನ್ನು ರೂಪಿಸಿ ಕೊಂಡಿದ್ದೇವೆ. ವಿದ್ಯಾರ್ಥಿಗಳಿಗೆ ಗಾಂಽಜಿ ಅವರ ಜೀವನ ಸಂದೇಶ, ಮಾನವೀಯ ಮಲ್ಯ, ಆದರ್ಶ, ಸಿದ್ಧಾಂತಗಳನ್ನು ಮುಟ್ಟಿಸುವಲ್ಲಿ ಕೇಂದ್ರವು ಮಹತ್ತರ ಪಾತ್ರವಹಿಸಲಿದೆ ಎಂದು ತಿಳಿಸಿದರು.
ಕನ್ನಡ ವಿಭಾಗದ ಡಾ. ಉಮೇಶ್ ಅಂಗಡಿ, ಡಾ. ಡಿ.ಬಿ. ಶಿವರುದ್ರಪ್ಪ, ಡಾ. ರಾಜೇಶ್ವರಿ, ಸೌಭಾಗ್ಯ, ವನಜಾಕ್ಷಿ, ಕಾಂಚನಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *