ಅ. ೧೨ರಿಂದ ೧೯ರವರೆಗೆ ರಂಗ ದಸರಾ: ೨೫ ನಾಟಕ, ೩೯ ಕಾರ್ಯಕ್ರಮ
ಶಿವಮೊಗ್ಗ, ಅ.೧೦: ರಂಗ ಭೂಮಿಯ ವಿವಿಧ ಪ್ರಕಾರಗಳನ್ನು ಪರಿಚಯಿಸುವುದು ಹಾಗೂ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉzಶದಿಂದ ಶಿವಮೊಗ್ಗ ದಸರಾ ಅಂಗವಾಗಿ ಅ. ೧೨ರಿಂದ ೧೯ ರವರೆಗೆ ರಂಗ ದಸರಾ ಆಯೋಜಿಸಲಾಗಿದೆ. ಈ ಬಾರಿ ೨೫ ನಾಟಕಗಳು ಸೇರಿದಂತೆ ಒಟ್ಟು ೩೯ ಕಾರ್ಯಕ್ರಮಗಳು ನಗರದ ೧೨ಕ್ಕೂ ಹೆಚ್ಚು ವೇದಿಕೆಗಳಲ್ಲಿ ನಡೆಯಲಿದ್ದು, ೪೦೦ಕ್ಕೂ ಅಧಿಕ ಕಲಾವಿದರು ಭಾಗವಹಿಸಲಿzರೆ ಎಂದು ಶಿವಮೊಗ್ಗ ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಕ ಪ್ರದರ್ಶನ, ಏಕಪಾತ್ರಾಭಿನಯ ಸ್ಪರ್ಧೆ, ಜನಪದ ಗೀತೆ ಹಾಗೂ ರಂಗಗೀತೆ ಗಾಯನ, ನೃತ್ಯರೂಪಕ, ಗ್ರಾಮರಂಗ, ರಂಗ ಸಂತೆ, ಕುಟುಂಬ ರಂಗ ಮತ್ತು ಉಚಿತ ಪ್ರಸಾಧನ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಅ. ೧೧ರಂದು ಮಧ್ಯಾಹ್ನ ೨ಕ್ಕೆ ರಂಗಾಯಣದ ಹೆಲಿಪ್ಯಾಡ್ ಸಮೀಪ ಜಿ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ನಡೆಯಲಿದೆ. ೧೫ ವರ್ಷ ದೊಳಗಿನ ವರಿಗೆ ಡ್ರಾಮಾ ಜೂನಿಯರ್, ೧೫ ವರ್ಷ ಮೇಲ್ಪಟ್ಟವರಿಗೆ ಡ್ರಾಮಾ ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಅ. ೧೨ರಂದು ಬೆಳಿಗ್ಗೆ ೧೦.೩೦ಕ್ಕೆ ರಂಗ ದಸರಾ ಉದ್ಘಾಟನೆಯಾಗ ಲಿದ್ದು, ರಂಗಭೂಮಿ ಕಲಾವಿದ ಹರಿಗೆ ಗೋಪಾಲಸ್ವಾಮಿ ಉದ್ಘಾಟಿಸ ಲಿzರೆ. ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ ಉಪಸ್ಥಿತರಿರುವರು.
ಅಂದು ಕಾಲೇಜು ರಂಗೋತ್ಸವದಡಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಗವದಜ್ಜುಕೀಯಂ, ಈಸಕ್ಕಿ ಆಸೆ ನಮಗೇಕೆ, ಪುಸ್ತಕ ಪಾಂಡಿತ್ಯ ಹಾಗೂ ಶೂರ್ಪನಖಿ ನಾಟಕಗಳನ್ನು ಪ್ರದರ್ಶಿಸಲಿzರೆ. ಮಧ್ಯಾಹ್ನದಿಂದ ಜನಪದ ಗೀತೆಗಳ ಗಾಯನ ಮತ್ತು ವಿವಿಧ ನಾಟಕಗಳ ಪ್ರದರ್ಶನವೂ ನಡೆಯಲಿದೆ. ಶಿವಮೊಗ್ಗದ ಅರ್ಚಕರ ಸಂಘ, ತಾಯಿ ಮನೆ ಆಶ್ರಿತರು ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳು, ವಕೀಲ ಮಿತ್ರರು ಮತ್ತು ಸರ್ಕಾರಿ ಶಾಲಾ ಶಿಕ್ಷಕರ ವೃಂದದವರು ನಾಟಕಗಳನ್ನು ಪ್ರಸ್ತುತಪಡಿಸಲಿzರೆ.
ಅ. ೧೩ರಂದು ಸವಳಂಗ ರಸ್ತೆಯ ಕೃಷಿ ವಿeನ ಕಾಲೇಜು ಹಾಗೂ ಅಬ್ಬಲಗೆರೆಯಲ್ಲಿ ಸತ್ತಿಂತಿಹರನು ಬಡಿದೆಚ್ಚರಿಸು ನಾಟಕ ಪ್ರದರ್ಶನಗೊಳ್ಳಲಿದೆ. ಕರ್ನಾಟಕ ಸಂಘದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹಾಗೂ ಹೊಸಳ್ಳಿ ತಾಂಡಾದಲ್ಲಿಯೂ ಮರ ಮಾತಾಡಿದರೆ ನಾಟಕ ಪ್ರದರ್ಶನವಿದೆ.
ಅ. ೧೪ರಂದು ಸಂಜೆ ೭ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗ ಸೌರಭ ತಂಡದ ರಾಮಾಯಣದಲ್ಲಿ ಕೈಕೇಯಿ ನಾಟಕ ಪ್ರದರ್ಶನ ಗೊಳ್ಳಲಿದೆ. ಅ. ೧೬ರಂದು ಇದೇ ವೇದಿಕೆಯಲ್ಲಿ ಹೊಂಗಿರಣ ತಂಡದ ಮೃತ್ಯು ನಾಟಕ ನಡೆಯಲಿದ್ದು, ಫ್ರೀಡಂ ಪಾರ್ಕ್ನ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ ೧೦೦ ಕಲಾವಿದರಿಂದ ರಂಗಗೀತೆ ಗಾಯನ ಮತ್ತು ನೃತ್ಯರೂಪಕ ಪ್ರಸ್ತುತ ಗೊಳ್ಳಲಿದೆ.
ಅ. ೧೭ರಂದು ಬೆಳಿಗ್ಗೆ ೧೦.೩೦ಕ್ಕೆ ರಂಗಾಯಣದಲ್ಲಿ ಉಚಿತ ಪ್ರಸಾಧನ ಶಿಬಿರ ನಡೆಯಲಿದ್ದು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ್ ತಳವಾಟ ಚಾಲನೆ ನೀಡಲಿzರೆ. ಸಂಜೆ ಕುವೆಂಪು ರಂಗಮಂದಿರದಲ್ಲಿ ಸಮುದಾಯ ತಂಡದ ನೋಡಿತಿರಿ ಇನ್ನೊಮ್ಮೆ ಬರ್ತಾನ್ ಅವನು ನಾಟಕ ಪ್ರದರ್ಶನವಿದೆ.
ಅ. ೧೮ರಂದು ಸಂಜೆ ೭ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಸ್ಕ್ ಚೆಲುವರಂಗ ತಂಡದ ಆಷಾಢದ ಒಂದು ದಿನ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗ ದಸರಾ ಸದಸ್ಯ ಕಾರ್ಯದರ್ಶಿ ಮಧು ನಾಯ್ಕ್, ಆರ್.ಎಸ್. ಹಾಲಸ್ವಾಮಿ, ಚಂದನ್ ನೀನಾಸಂ, ಡಿ.ಎಂ. ರಾಜಕುಮಾರ್ ಹಾಗೂ ಎಸ್.ಎಚ್.ಸುರೇಶ್ ಉಪಸ್ಥಿತರಿದ್ದರು.
