ಬ್ರಾಹ್ಮಣ ಸಮಾಜ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಬೇಕಿದೆ…
ಶಿವಮೊಗ್ಗ: ಬ್ರಾಹ್ಮಣ ಸಮಾಜ ಆರ್ಥಿಕವಾಗಿ ಇನ್ನಷ್ಟು ಸದೃಢವಾಗಬೇಕಿರು ವುದರಿಂದ ಮುಂದಿನ ಐದು ವರ್ಷಗಳಲ್ಲಿ ೧೦೦ ಕೋಟಿ ರೂ. ಮೂಲ ನಿಧಿ ಸಂಗ್ರಹಿಸುವ ಗುರಿ ಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಹೊಂದಿದೆ ಎಂದು ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿ ಘಟಕದಿಂದ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ, ಸುವರ್ಣ ದಾಂಪತ್ಯ ಸನ್ಮಾನ, ಸಂಘದ ನಿರ್ದೇಶಕರಿಗೆ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬ್ರಾಹ್ಮಣ ಸಮಾಜದಲ್ಲಿ ಬಡವರು ಮತ್ತು ಸ್ಥಿತಿವಂತರೂ ಇzರೆ. ಆ ಸ್ಥಿತಿವಂತರನ್ನು ಸಂಪರ್ಕಿಸಿ ತಲಾ ಒಂದು ಲಕ್ಷ ರೂ. ದೇಣಿಗೆ ಪಡೆಯಲಾಗುತ್ತದೆ. ಈಗಾಗಲೇ ೮೫ ಲಕ್ಷ ರೂ. ಸಂಗ್ರಹವಾಗಿದ್ದು, ದ್ದೇಶದಿತ ನಿಧಿ ಸಂಗ್ರಹವಾಗುವ ವರೆಗೆ ಭಿಕ್ಷೆ ಬೇಡಲು ಸಿದ್ಧನಿದ್ದೇನೆ. ಸಮಾಜದ ಮ್ಕಕಳ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಅದನ್ನು ಬಳಸಲಾಗುತ್ತದೆ ಎಂದರು.
ಬ್ರಾಹ್ಮಣ ಮಹಾಸಭಾ ೩೩ ಜಿಯನ್ನಾಗಿ ಮಾಡಿಕೊಂಡಿದ್ದು, ಒಂದೊಂದು ಜಿಯಲ್ಲಿ ತಲಾ ೬ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಲಾ ೧೦ ಸಾವಿರ ರೂ. ಸ್ಕಾಲರ್ ಶಿಪ್ ನೀಡಲು ನಿರ್ಧರಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದ ೧೯೮ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಈ ಬಾರಿ ೧೫೭ ಮಾತ್ರ ಅರ್ಜಿಗಳು ಬಂದಿವೆ. ಆರೇಳು ಜಿಗಳಿಂದ ವಿದ್ಯಾರ್ಥಿಗಳು ಅರ್ಜಿಯನ್ನೇ ಹಾಕಿಲ್ಲ. ಇದೇ ವೇಳೆ ನಿವೃತ್ತ ನ್ಯಾಯಾಧೀಶ ಎನ್.ಕುಮಾರ ಹೆಸರಿನಲ್ಲಿ ೧ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೂ ತಲಾ ೧ ಸಾವಿರ ರೂ. ನೀಡಲಾಗುವುದು. ಒಟ್ಟಾರೆ ಜು.೩೧ರೊಳಗೆ ೨೨೬ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುವುದು ಎಂದರು.
ಪ್ರಾಸ್ತಾವಿಕ ಮಾತನಾಡಿದ ವಿಪ್ರ ನೌಕರರ ಕ್ಷೇಮಾಭಿವೃದ್ಧ ಸಂಘ ಜಿಧ್ಯಕ್ಷ ಎಚ್.ಕೆ. ಕೇಶವಮೂರ್ತಿ, ೨೦೦೪ರಲ್ಲಿ ಪೇಜವರ ಶ್ರೀಗಳ ಆಶೀರ್ವಾದ ದಿಂದ ಆರಂಭಗೊಂಡ ಸಂಘವು ೨೨ನೇ ವರ್ಷಕ್ಕೆ ಕಾಲಿಟ್ಟಿದೆ. ಇದುವರೆಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.೮೫ ಕ್ಕಿಂತ ಹೆಚ್ಚು ಅಂಕ ಪಡೆದ ೧,೮೦೦ ವಿಪ್ರ ವಿದ್ಯಾರ್ಥಿಗಳಿಗೆ ಪತ್ರಿಭಾ ಪುರಸ್ಕಾರ, ಆರ್ಥಿಕ ಸಹಾಯದ ಅಗತ್ಯವಿರುವ ೧,೩೦೦ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ, ೫೦ ವರ್ಷ ದಾಂಪತ್ಯ ಜೀವನ ನಡೆಸಿದ ನೂರಕ್ಕೂ ಹೆಚ್ಚು ದಂಪತಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಗಿದೆ. ಇದುವರೆಗೆ ೧.೧೦ ಕೋಟಿ ರೂ. ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾನಿಧಿ ವಿತರಣೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸುವರ್ಣ ದಾಂಪತ್ಯ ಜೀವನ ಪೂರೈಸಿದ ಆರು ದಂಪತಿಗಳನ್ನು ಸನ್ಮಾನಿಸಲಾಯಿತಲ್ಲದೆ, ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಾನೀಯರನ್ನು ಸನ್ಮಾನಿಸಲಾಯಿತು.
ಶಾಸಕ ಎಸ್.ಎನ್. ಚನ್ನಬಸಪ್ಪ, ಸಂಘದ ಜಿ ಗೌರವಾಧ್ಯಕ್ಷ ಆರ್. ಅಚ್ಚುತ್‌ರಾವ್, ಉಪಾಧ್ಯಕ್ಷ ಎಚ್.ಎನ್.ಛಾಯಾಪತಿ, ಕಾರ್ಯದರ್ಶಿ ಬಿ.ಕೆ. ರವೀಂದ್ರನಾಥ್, ಸಂಘಟನಾ ಕಾರ್ಯದರ್ಶಿಗಳಾದ ಎಚ್.ಸಿ. ರವಿಕುಮಾರ್, ಕೆ.ಎನ್. ವಿಶ್ವನಾಥ್, ಕೆ.ಕೆ.ಶಶಿರೇಖಾ ಲಕ್ಷ್ಮೀ ಶ್ರೀಧರ್, ಎಸ್.ನಾಗೇಶ್ ಮೊದಲಾದವರಿದ್ದರು.
