ಇತಿಹಾಸವನ್ನು ನೆನಪಿಟ್ಟಾಗಲೇ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ: ಜಿಎಸ್‌ಎನ್
ಶಿವಮೊಗ್ಗ, ಜು.೨೪: ನಮಗೆ ಇತಿಹಾ ಸದ ಕಲ್ಪನೆ ಬೇಕು. ಇತಿಹಾಸವನ್ನು ಅಧ್ಯಯ ನದ ಮೂಲಕ ನೆನೆಪಿಟ್ಟು ಕೊಂಡಾಗ ಮಾತ್ರ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಎನ್‌ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ಕುಂಸಿಯ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರ ಅನುಭವ ಗಳು ನಾವು ಕಲಿತ ಶಿಕ್ಷಣಕ್ಕಿಂತಲೂ ಶ್ರೇಷ್ಠ ಮಾರ್ಗ ದರ್ಶನ ನೀಡುತ್ತವೆ. ಆದ್ದರಿಂದ ವಿದ್ಯಾರ್ಥಿ ಗಳು ಅನುಭವದಿಂದ ಕಲಿಯುವ ಮನೋಭಾವವನ್ನು ಬೆಳೆಸಿಕೊಳ್ಳ ಬೇಕು. ಸ್ನೇಹ, ಅಧ್ಯಯನ, ಸೃಜನಶೀಲತೆ ಸೇರಿದಂತೆ ಎ ವಿಚಾರಗಳಲ್ಲಿ ಅನುಭವಿಸಿ ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ನಾಯಕನನ್ನು ಅನುಸರಿಸು ವುದು ನಾಯಕತ್ವವಲ್ಲ. ಹೊಸ ನಾಯಕತ್ವವನ್ನು ರೂಪಿಸುವುದೇ ನಿಜವಾದ ನಾಯಕತ್ವ. ಅದರಂತೆ ವಿದ್ಯಾರ್ಥಿ ಸಂಘಗಳು ನಾಯಕತ್ವ, ಸಂಘಟನಾ ಕೌಶಲ್ಯ ಹಾಗೂ ಬದುಕಿನ ಮಲ್ಯಗಳನ್ನು ಕಲಿಸುವ ಉತ್ತಮ ವೇದಿಕೆಗಳಾಗಿವೆ. ಪುಸ್ತಕ ಕ್ಕಿಂತ ಮಸ್ತಕದ ವಿದ್ಯಾಭ್ಯಾಸ ವಾಗಬೇಕಿದೆ ಎಂದರು.
ಕುಂಸಿ ಶಾಲೆ ಈಗಾಗಲೇ ಮೂರು ಬಾರಿ ಶೇ.೧೦೦ ಫಲಿತಾಂಶ ಪಡೆದು ತಮ್ಮ ಶೈಕ್ಷಣಿಕ ಸಾಧನೆಯನ್ನು ದಾಖಲಿಸಿದೆ. ಎನ್‌ಇಎಸ್ ಸಂಸ್ಥೆ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.೧೦೦ ಫಲಿತಾಂಶ ಪಡೆದ ವಿದ್ಯಾಸಂಸ್ಥೆಗಳ ಶಿಕ್ಷಕರಿಗೆ ಅಭಿನಂದಿಸುವ ಕಾರ್ಯವನ್ನು ಆಡಳಿತ ಮಂಡಳಿ ಯಿಂದ ಮಾಡಲಾಗುತ್ತಿದೆ. ಇಂತಹ ಸಾಧನೆಯ ಶಿಖರಕ್ಕೆ ಏರಿದ ವಿದ್ಯಾಸಂಸ್ಥೆಗಳು, ಅದೇ ಎತ್ತರವನ್ನು ನಿರ್ವಹಿಸಿಕೊಳ್ಳಬೇಕಾದ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್. ಎನ್. ನಾಗರಾಜ ಮಾತನಾಡಿ, ಗ್ರಾಮೀಣ ಅನುದಾನಿತ ಶಾಲೆಯಿಂದ ಶೇ.೧೦೦ ಫಲಿತಾಂಶ ಸಾಧಿಸು ವುದು ಅತ್ಯಂತ ಹೆಮ್ಮೆಯ ವಿಷಯ ವಾಗಿದೆ. eನವನ್ನು ಸಂಪಾದಿಸು ವುದು ಶಿಕ್ಷಣದ ಮೊದಲ ಹಂತ. ಆದರೆ ಪಡೆದ eನವನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸಬೇಕು ಎಂಬ ಅರಿವು ಮತ್ತು ಸಹಬಾಳ್ವೆಯ ಮಲ್ಯಗಳನ್ನು ಬೆಳೆಸುವುದೇ ಶಿಕ್ಷಣದ ಮೂಲ ತಳಹದಿಯಾಗಿದೆ ಎಂದರು.
ವಿದ್ಯಾರ್ಥಿಗಳು ಕಲಿಯುತ್ತಿ ರುವ ಪ್ರತಿಯೊಂದು ವಿಷಯ ವನ್ನೂ ಯಾಕೆ ಕಲಿಯಬೇಕು? ಎಂಬ ವಿಮರ್ಶಾತ್ಮಕ ಕುತೂಹಲ ದಿಂದ ಅಧ್ಯಯನ ಮಾಡ ಬೇಕು. ಶೇ.೧೦೦ರಷ್ಟು ಫಲಿತಾಂಶವು ಒಂದು ಬಾರಿ ದಾಖಲಿಸುವ ಸಾಧನೆ ಯಾಗಿರದೆ, ಗುಣಮಟ್ಟದ ಶಿಕ್ಷಣದ ನಿರಂತರ ಪರಿಪಾಠವಾಗಬೇಕು ಎಂದು ಹೇಳಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ.ಪಿ. ನಾರಾಯಣ್ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಬಿ. ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕಿ ಪದ್ಮಿನಿ ಫಲಿತಾಂಶದ ವಿಶ್ಲೇಷಣೆ ನೀಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾರ್ತಿಕ್.ಆರ್ ಉಪಸ್ಥಿತರಿದ್ದರು. ಶಿಕ್ಷಕರಾದ ಡಿ.ವಿ. ವಾಗೀಶ್ ಸ್ವಾಗತಿಸಿ, ಟಿ.ಸಿ.ಗಗನ ನಿರೂಪಿಸಿದರು.
