ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠ: ವಕೀಲರ ಧರಣಿಗೆ ಜೆಡಿಎಸ್ ಬೆಂಬಲ…

Share Below Link

ಶಿವಮೊಗ್ಗ: ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದ ಸ್ಥಾಪನೆಯಾಗ ಬೇಕು ಎಂದು ಒತ್ತಾಯಿಸಿ ಜಿ ವಕೀಲರ ಸಂಘ ಕಳೆದ ಏಳು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಇಂದು ಜಿ ಜೆ.ಡಿ.ಎಸ್. ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿತು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಜೆಡಿಎಸ್ ಪಕ್ಷ ಈ ಹೋರಾಟಕ್ಕೆ ಗುರಿ ತಲುಪುವವರೆಗೆ ಸದಾ ಬೆಂಬಲಿಸುತ್ತದೆ. ಜೂ.೧ರಂದು ಮುಖ್ಯಮಂತ್ರಿಗಳು ಹಾಗೂ ಬಹುತೇಕ ಸಂಪುಟ ಸಚಿವರು ನಗರಕ್ಕೆ ಆಗಮಿಸುತ್ತಿzರೆ. ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ಕುರಿತು ಮನವಿ ನೀಡಿzವೆ. ಜಿ ಉಸ್ತುವಾರಿ ಸಚಿವರು ಮತ್ತು ಜಿಯ ಜನಪ್ರತಿನಿಧಿಗಳು ಸಿಎಂ ಗಮನಕ್ಕೆ ತಂದಿzರೆ. ಆದರೂ ಕೂಡ ಸಿಎಂ ಇಲ್ಲಿಗೆ ಬಂದಾಗ ಇಲ್ಲಿನ ಎ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರೊಂದಿಗೆ ಮತ್ತೊಮ್ಮೆ ಭೇಟಿಯಾಗಿ ಶಿವಮೊಗ್ಗಕ್ಕೆ ಯಾಕೆ ಹೈಕೋಟ್ ಪೀಠ ಬೇಕು ಮತ್ತು ಮಂಗಳೂರಿ ಗಿಂತ ಮಧ್ಯ ಕರ್ನಾಟಕದ ಶಿವಮೊಗ್ಗಕ್ಕೇ ನೀಡಿದರೆ ಯಾವ ರೀತಿ ಅನುಕೂಲವಾಗುತ್ತದೆ ಮತ್ತು ಮಾನ ದಂಡದ ಪ್ರಕಾರ ಶಿವಮೊಗ್ಗವೇ ಸೂಕ್ತ ಎಂಬುದರ ಬಗ್ಗೆ ಅವರಿಗೆ ವಿವರಿಸಲಾಗುವುದು. ಬರುವ ವಿಧಾನಮಂಡಲದ ಅಧಿವೇಶನದಲ್ಲೂ ಈ ಕುರಿತು ಪ್ರಸ್ತಾಪ ಮಾಡಿ ಒತ್ತಾಯಿಸುತ್ತೇನೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದು ಮಾತ್ರವಲ್ಲ. ಜನಪ್ರತಿನಿಧಿಗಳು ಮತ್ತು ಜಿ ಉಸ್ತುವಾರಿ ಸಚಿವರು ರಾಜಿನಾಮೆ ನೀಡಲೂ ಸಿದ್ಧರಾಗಬೇಕು. ಆಗ ಹೈಕೋಟ್ ಪೀಠದ ಈ ಬೇಡಿಕೆಗೆ ಬಲ ಬರುತ್ತದೆ. ಹೋರಾಟ ಬಲಗೊಳ್ಳಬೇಕಾದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ರಾಜಕೀಯ ಒತ್ತಡ ತಂತ್ರ ಅವಶ್ಯಕವಾಗಿದೆ ಎಂದರು.


ಹೋರಾಟ ಸಮಿತಿಯ ಅಧ್ಯಕ್ಷರಾದ ಕೆ. ಬಸಪ್ಪಗೌಡ, ಜಿ ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರಸ್ವಾಮಿ, ಭದ್ರಾವತಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಮತಿ ಶಾರದಾ ಅಪ್ಪಾಜಿ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಜಿಲ್ಲಾ ಕಾರ್‍ಯಾಧ್ಯಕ್ಷ ಗಂಧದಮನೆ ನರಸಿಂಹ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಭದ್ರಾವತಿ ತಾಲೂಕು ಅಧ್ಯಕ್ಷ ಕರುಣಾಮೂರ್ತಿ, ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಎಚ್.ಆರ್. ಹನುಮಂತಪ್ಪ, ಯುವ ಘಟಕದ ಜಿಲ್ಲಾ ಕಾರ್‍ಯಾಧ್ಯಕ್ಷ ನಿಖಿಲ್, ಪ್ರಮುಖರಾದ ಕಡಿದಾಳ್ ಗೋಪಾಲ್, ಕೆ.ಪಿ. ಓಂಕಾರಪ್ಪ, ಸಂಗಯ್ಯ, ಎಸ್.ವಿ.ರಾಜಮ್ಮ, ಮಂಜುನಾಥ, ಸತೀಶ್, ಪ್ರೇಮ್ ಕುಮಾರ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *